NEWS

ಪ್ರೊ.ಜಯಪ್ರಕಾಶಗೌಡ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇಂದು ಸಂಜೆ

ರಂಗಕರ್ಮಿಗಳಾದ ಶ್ರಿನಿವಾಸ್ ಜಿ. ಕಪ್ಪಣ್ಣ, ಶಶಿಧರ್ ಭಾರಿಘಾಟ್ ಪ್ರಶಸ್ತಿ ಪುರಸ್ಕೃತರು

ಪಾಲನೆ ನ್ಯೂಸ್

ಮಂಡ್ಯ: ಕರ್ನಾಟಕ ಸಂಘದ ಎಂ.ಎಲ್. ಶ್ರೀಕಂಠೇಶಗೌಡ ಸಂಶೋಧನಾ ಕೇಂದ್ರ ವತಿಯಿಂದ 2ನೇ ವರ್ಷದ ಪ್ರೊ.ಜಯಪ್ರಕಾಶಗೌಡ ಪ್ರಶಸ್ತಿ -2026 ಪ್ರದಾನ ಕಾರ್ಯಕ್ರಮವನ್ನು ಇಂದು ಸಂಜೆ 5.30 ಕ್ಕೆ ಕರ್ನಾಟಕ ಸಂಘದ ಕೆ.ವಿ. ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಬಾರಿಯ ಪ್ರಶಸ್ತಿಗೆ ರಂಗಕರ್ಮಿಗಳಾದ ಜಿ.ಕಪ್ಪಣ್ಣ ಹಾಗೂ ಶಶಿಧರ ಭಾರಿಘಾಟ್‌ ರವರು ಭಾಜನರಾಗಿದ್ದಾರೆ.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆದಿಚುಂಚನಗಿರಿ ಶ್ರೀಕ್ಷೇತ್ರ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಸಾನ್ನಿಧ್ಯವನ್ನು ಕೊಮ್ಮೇರಹಳ್ಳಿ ವಿಶ್ವಮಾನವ ಕ್ಷೇತ್ರದ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ವೆಂಕಟರಮಣೇಗೌಡ ( ಸ್ಟಾರ್‌ ಚಂದ್ರು) ವಹಿಸಲಿದ್ದಾರೆ.‌

ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಚೆಸ್ ಟೂರ್ನಿ: ಗೋವಾದ ಮಂದಾರ್‌ಗೆ ಪ್ರಶಸ್ತಿ

ಪದ್ಮಶ್ರೀ ಪ್ರಶಸ್ತಿ ವಿಜೇತ ಅಂಕೇಗೌಡರಿಗೆ ಜಿಲ್ಲಾಧಿಕಾರಿ ಸನ್ಮಾನ

ಅಲಿಪುರ್ ದ್ವಾರ್ ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್ ರೈಲು

Leave a Comment