NEWS

ವಿಕಸಿತ ಭಾರತ ಯುವ ಸಂಪರ್ಕ ಕಾರ್ಯಕ್ರಮ

ಯುವಕರು ಮಾನವೀಯ ಹಾಗೂ ನೈತಿಕ ಮೌಲ್ಯಗಳನ್ನು ಬೆಳಿಸಿಕೊಳ್ಳಬೇಕು : ಕೆ.ಶಿವಚಿತ್ತಪ್ಪ

ಪಾಲನೆ ನ್ಯೂಸ್

ಮಂಡ್ಯ: ಯುವಕರು ಸಕಾರಾತ್ಮಕ ಚಿಂತನೆಯ ಜೊತೆಗೆ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಮಾನವೀಯ ಹಾಗೂ ನೈತಿಕ ಮೌಲ್ಯಗಳನ್ನು ಬೆಳಿಸಿಕೊಳ್ಳಬೇಕು ಎಂದು ಮಂಡ್ಯ ವಿಶ್ವವಿದ್ಯಾಲಯ ಕುಲಪತಿಗಳಾದ ಪ್ರೊ. ಕೆ.ಶಿವಚಿತ್ತಪ್ಪ ಹೇಳಿದರು.

ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಂಡ್ಯ ವಿಶ್ವವಿದ್ಯಾನಿಲಯ, ಮೈ ಭಾರತ್ ಮಂಡ್ಯ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಹಯೋಗದಲ್ಲಿ ವಿಕಸಿತ ಭಾರತ ಯುವ ಸಂಪತ್ತು ಜಿಲ್ಲಾಮಟ್ಟದ ಸ್ಪರ್ಧೆ ಮತ್ತು ವಿಕಸಿತ ಭಾರತ ಯುವ ಸಂಪರ್ಕ ಕಾರ್ಯಕ್ರಮ viksit bharat youth parliament -2026 ಕಾರ್ಯಕ್ರಮ ಮಂಡ್ಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭಾಂಗಣದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸ್ವಾಮಿ ವಿವೇಕಾನಂದರವರ ಚಿಂತನೆಯಂತೆ ಯುವಕರು ತಮ್ಮ ಚಿಂತನೆಯಿಂದ ಸಾಮಾಜಿಕ ಮತ್ತು ರಾಜಕೀಯವಾಗಿ ಜ್ಞಾನವನ್ನು ಬೆಳೆಸಿಕೊಳ್ಳಿ. ಯುವ ಸಮುದಾಯಕ್ಕೆ ರಾಜಕೀಯ ಜ್ಞಾನವನ್ನು ಮೂಡಿಸುವ ಸಲುವಾಗಿ ಇಂತಹ ಕಾರ್ಯಕ್ರಮ ಪೂರಕವಾಗಿದೆ. ಯುವಕರು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಸದುಪಗೋಗ ಪಡೆದುಕೊಳ್ಳಬೇಕು.ವಿಶ್ವ ವಿದ್ಯಾಲಯದಲ್ಲಿ ಇಂತಹ ಯುವ ಸಂಪರ್ಕ ಆಯೋಜನೆ ಮಾಡುವುದು ಕೂಡ ಉತ್ತಮವಾಗಿದೆ.ಎಂದು ಹೇಳಿದರು.

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿಯೊಂದಿಗೆ, ಯುವಕರಲ್ಲಿ ನಾಯಕತ್ವ, ನೀತಿ ನಿರೂಪಣೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉತ್ತೇಜಿಸಲು ಹಮ್ಮಿಕೊಳ್ಳಲಾದ ಕಾರ್ಯಕ್ರಮವಾಗಿದೆ.ಯುವಕರು ಅವಕಾಶಗಳನ್ನು ಸದುಪಯೋಗ ಪಡೆದುಕೊಳ್ಳಿ. ಯುವಕರಿಗೆ ರಾಷ್ಟ್ರೀಯ ವಿಷಯಗಳ ಬಗ್ಗೆ ಚರ್ಚಿಸಲು, ಅಭಿಪ್ರಾಯ ಹಂಚಿಕೊಳ್ಳಲು ಮತ್ತು ನೀತಿ ತಜ್ಞರೊಂದಿಗೆ ಸಂವಹನ ನಡೆಸಲು ವೇದಿಕೆಯಾಗಿದೆ ಎಂದು ತಿಳಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಓಂ ಪ್ರಕಾಶ್ ಮಾತನಾಡಿ ಯುವ ಸಬಲೀಕರಣ ಇಲಾಖೆ ಯುವಕರ ಏಳಿಗೆಗೆ ಹಲವಾರು ಕಾರ್ಯಕ್ರಮಗಳಿದ್ದು ಇದರ ಸದುಪಯೋಗವನ್ನು ಪಡೆಯಬೇಕು ಸಂವಿಧಾನದ ಮೂಲಭೂತ ಹಕ್ಕು ಹಾಗೂ ಕರ್ತವ್ಯ ಕಲಿತು ಸಮಾಜದಲ್ಲಿ ತಲೆ ಎತ್ತಿ ನಿಲ್ಲಬಹುದು ಎಂದು ಹೇಳಿದರು.

ಮಂಡ್ಯ ವಿಶ್ವವಿದ್ಯಾಲಯ ಕುಲ ಸಚಿವರಾದ ಕೃಷ್ಣ ಕುಮಾರ್ ರವರು ಮಾತನಾಡಿ ಯುವ ಜನತೆ ಸರ್ಕಾರಿ ಅಥವಾ ಸ್ವಂತ ಉದ್ಯೋಗ ಪಡೆದು ಸಬಲರಾಗುವ ಸಲುವಾಗಿ ದೃಢ ಸಂಕಲ್ಪ ಮಾಡಬೇಕು ಸಂವಿಧಾನದ ಮಹತ್ವವನ್ನು ತಿಳಿದು ನಡೆಯಬೇಕು ಮತ್ತು ಯುವಕರು ಹೆಚ್ಚು ಹೆಚ್ಚು ಸಂವಿಧಾನದ ವಿಷಯ ಕುರಿತು ಜ್ಞಾನ ಬೆಳೆಸಿಕೊಳ್ಳಿ ಎಂದು ಹೇಳಿದರು.

ವೇದಿಕೆಯಲ್ಲಿ ಮಂಡ್ಯ ವಿಶ್ವ ವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಸಂಯೋಜಕರಾದ ಪ್ರೊ. ಎಂ. ಬಿ.ಪ್ರಮೀಳಾ, ಪ್ರೊ. ಚಂದ್ರ ಶೇಖರ್ ಪ್ರಸಾರಂಗ ನಿರ್ದೇಶಕರು,ಪ್ರೊ. ಜೆ. ವಿ.ವೆಂಕಟ ರಮಣ,ಡಾ. ಶರಣ ಬಸಪ್ಪ, ಡಾ. ರೇಖಾ ಜಾದವ್,ನಾಗೇಂದ್ರ. ಸತೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಯುವ ಜನತೆ ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು: ಡಾ. ವಿ. ಜೆ. ಶೋಭರಾಣಿ

ಪೋಷಕರ ವಿರೋಧದ ನಡುವೆಯೂ ರುದ್ರಾಕ್ಷಿ ಹುಡುಗಿ ಮೊನಾಲಿಸಾ ಮದುವೆ

ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶೇ.7.5 ಶುಲ್ಕ ಹೆಚ್ಚಳಕ್ಕೆ ತೀರ್ಮಾನ

Leave a Comment