NEWS

ವಾಹನದ ಸೈಡ್ ಮಿರರ್ ಪುಡಿ ಪುಡಿಯಾಗಿಸಿದ ಆನೆ ಸಾಕು ಆನೆ

ಪಾಲನೆ ನ್ಯೂಸ್

ಬನ್ನೇರುಘಟ್ಟ: ಸಫಾರಿ ವೇಳೆಯಲ್ಲಿ ವಾಹನದ ಮೇಲೆ ಸಾಕಾನೆಯೊಂದು ದಾಳಿ ನಡೆಸಿ ವಾಹನದ ಸೈಡ್ ಮಿರರ್‌ಗಾಜು ಪುಡಿ ಪುಡಿಯಾಗಿಸಿದ ಘಟನೆ ನಡೆದಿದೆ.ಬನ್ನೇರುಘಟ್ಟ ಜೈವಿಕ ಉದ್ಯಾನದ ಸಾಕಾನೆ ವನರಾಜ ಸಫಾರಿ ವಾಹನದ ಮೇಲೆ ಏಕಾಏಕಿ ನುಗ್ಗಿದೆ. ಪ್ರವಾಸಿಗರು ಇದರಿಂದ ಆತಂಕಕ್ಕೀಡಾಗಿ ಕಿರುಚಾಡುತ್ತಿದ್ದಂತೆ ಸೊಂಡಿಲಿನಿಂದ ವಾಹನದ ಸೈಡ್ ಮಿರರ್‌ಅನ್ನು ಹೊಡೆದು ಹಾಕಿ ತೆರಳಿದೆ.

ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ತಾಯಿಯಿಂದ ದೂರವಾಗಿ 8 ತಿಂಗಳ ಮರಿ ಯಾಗಿದ್ದಾಗ ಬಂಡೀಪುರ ಅರಣ್ಯದಿಂದ ರಕ್ಷಣೆ ಮಾಡಿ ಕರೆತರಲಾಗಿತ್ತು. ಚಿಕ್ಕಂದಿನಿಂದಲೇ ಬನ್ನೇರುಘಟ್ಟದ ಲ್ಲಿಯೇ ಬೆಳೆದಿರುವ ವನರಾಜ ರೌಡಿ ರಂಗ ಎಂಬ ಪುಂಡಾನೆಯ ಜೊತೆ ಸೆಣಸಾಟ ನಡೆಸಿ ಹಿಮ್ಮೆಟ್ಟಿಸಿದ್ದ. ಬನ್ನೇರುಘಟ್ಟದಲ್ಲಿರುವ 26 ಆನೆಗಳ ಪೈಕಿ ಪಡೆಯನ್ನು ಮುನ್ನಡೆಸುವ ಕ್ಯಾಪ್ಟನ್ ಆಗಿರುವ 48 ವರ್ಷದ ಸಾಕಾನೆ ವನರಾಜನೇ ಸಫಾರಿ ವಾಹನದ ಮೇಲೆ ನಡೆಸಿದ ಈ ದಾಳಿ ಅಚ್ಚರಿಗೆ ಕಾರಣವಾಗಿದೆ. ಚಾಲಕರು ಅಜಾಗರೂಕತೆ ಪ್ರದರ್ಶಿಸಬಾರದು, ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ತಾಕೀತು ಮಾಡಲಾಗಿದೆ ಎಂದು ಬನ್ನೇರುಘಟ್ಟದ ಕಾರ್ಯನಿರ್ವಾಹಕ ನಿರ್ದೇಶಕ ಎ.ವಿ. ಸೂರ್ಯಸೇನ್‌ ತಿಳಿಸಿದ್ದಾರೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಗ್ರಾಮೀಣ ಮಟ್ಟದಲ್ಲಿ “ಅಕ್ಕರೆಯ ಅಂಗಳ” ಬೇಸಿಗೆ ಶಿಬಿರ – ಸಮಗ್ರ ಕಲಿಕೆಯ ಅವಕಾಶಕ್ಕೆ ಸಿಇಒ ಸೂಚನೆ

ಒಂದು ಲೋಕಾರೂಢಿಯ ಗಾದೆ ಮಾತಿನ ಸುತ್ತಾ……

‘ಬಾಬಾ ಸಾಹೇಬ್ ಸಮತೆಯೆಡೆಗೆ ನಡಿಗೆ’ ಆಶಯದ ರಂಗಾಯಣ ಬೆಳ್ಳಿಹಬ್ಬ

Leave a Comment