NEWS

ಜಮ್ಮುವಿನಲ್ಲಿ ಪ್ರಪಾತಕ್ಕೆ ಬಿದ್ದ ಬಸ್‌ 21 ಮಂದಿ ಸಾವು

ಪಾಲನೆ ನ್ಯೂಸ್

ಜಮ್ಮು: ಜಮ್ಮು ಕಾಶ್ಮೀರದ ಉಧಂಪುರದಲ್ಲಿ ಬನ್ನೊಂದು ಬೆಟ್ಟದ ಮೇಲಿನಿಂದ ಕಂದಕಕ್ಕೆ ಉರುಳಿ ಬಿದ್ದು ಅಪಘಾತ ಸಂಭವಿಸಿದೆ. ಘಟನೆಯಲ್ಲಿ 21 ಪ್ರಯಾಣಿಕರು ದಾರುಣ ಸಾವನ್ನಪ್ಪಿದ್ದು, 29 ಮಂದಿ ಗಾಯಗೊಂಡಿದ್ದಾರೆ. ರಾಮನಗರದಿಂದ ಉಧಂಪುರಕ್ಕೆ ಸುಮಾರು 50 ಪ್ರಯಾಣಿಕರನ್ನು ಕರೆದೊ ಯ್ಯುತ್ತಿದ್ದ ಖಾಸಗಿ ಬಸ್‌ ಇಲ್ಲಿನ ಕಾರ್ಗೋಟ್ ಗ್ರಾಮದ ಬಳಿ ಅಪಾಯಕಾರಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆ ಆಟೋಗೆ ಡಿಕ್ಕಿ ಹೊಡೆದು ಕಂದಕಕ್ಕೆ ತಲೆ ಕೆಳಗಾಗಿ ಬಿದ್ದಿದೆ. ಇದೇ ದಾರಿಯಲ್ಲಿ ಸಂಚರಿಸುತ್ತಿದ್ದ ಬೆಂಗಾವಲು ಪಡೆಯನ್ನು ಮುನ್ನಡೆಸುತ್ತಿದ್ದ ಸೈನಿಕರೊಬ್ಬರುವಾಹನ ಉರುಳುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ಸೇನಾ ಬೆಂಗಾವಲು ಪಡೆಯು ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಮೃತರ ಕುಟುಂಬಸ್ಥರಿಗೆ 2 ಲಕ್ಷ ರು. ಗಾಯಾಳುಗಳಿಗೆ 50,000 ರು. ಪರಿಹಾರ ಘೋಷಿಸಲಾಗಿದೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಪಾಂಡವಪುರ ಉಪವಿಭಾಗ ನ್ಯಾಯಾಲಯದ ಪ್ರಕರಣಗಳ ಕುರಿತು ಸಭೆ.

ಟಿ-20 ವಿಶ್ವಕಪ್ ಮುಡಿಗೇರಿಸಿಕೊಂಡ ಭಾರತ

ತುಂಗಾಭದ್ರಾ ಕ್ರೆಸ್ಟ್ ಗೇಟ್ ನಿರ್ಮಾಣಕ್ಕೆ ನೀಡಿದ್ದ ಹಣ ವಾಪಸ್: ಸರ್ಕಾರದ ವಿರುದ್ಧ BJP ಆಕ್ರೋಶ

Leave a Comment