ಪಾಲನೆ ನ್ಯೂಸ್
ಹೈದರಾಬಾದ್: ಆರಂಭಿಕ 4 ಪಂದ್ಯಗಳ ಪೈಕಿ ಕೇವಲ 1ರಲ್ಲಿ ಗೆದ್ದಿದ್ದರೂ ಬಳಿಕ ಸತತ ಎರಡು ಪಂದ್ಯಗಳಲ್ಲಿ ಜಯಗಳಿಸಿರುವ ಸನ್ ರೈಸರ್ಸ್ ಹೈದರಾಬಾದ್ ತಂಡ ಈಗ ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟಿದೆ. ತಂಡ ತನ್ನ ತವರು ಕ್ರೀಡಾಂಗಣದಲ್ಲಿ ಮಂಗಳವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಾಡಲಿದೆ. ಉಭಯ ತಂಡಗಳೂ ಈಗಾ ತಲಾ 3 ಪಂದ್ಯಗಳಲ್ಲಿ ಗೆದ್ದಿವೆ.

ಆಕ್ರಮಣಕಾರಿ ಬ್ಯಾಟಿಂಗ್‌ಗೆ ಹೆಸರು ವಾಸಿಯಾಗಿರುವ ಸನ್‌ರೈಸರ್ಸ್ ಈ ಬಾರಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಕ್ಲಾಸೆನ್ ಮಾತ್ರ ಸ್ಥಿರ ಆಟವಾಡುತ್ತಿದ್ದು, ಅಭಿಷೇಕ್, ಟ್ರ್ಯಾವಿಸ್ ಹೆಡ್, ಇಶಾನ್ ಕಿಶನ್ ಕೆಲ ಪಂದ್ಯಗಳ ಹೊರತಾಗಿ ನಿರ್ಣಾಯಕ ಘಟ್ಟಗಳಲ್ಲಿ ಕೈಕೊಟ್ಟಿದ್ದೇ ಹೆಚ್ಚು. ಕೊನೆ 2 ಪಂದ್ಯಗಳಲ್ಲಿ ಬೌಲಿಂಗ್ ಪಡೆಯ ಬಿಗು ದಾಳಿಯಿಂದಾಗಿ ತಂಡಕ್ಕೆ ಗೆಲುವು ಲಭಿಸಿದೆ. ಮತ್ತೊಂದೆಡೆ ಡೆಲ್ಲಿ ತಂಡ ಕೊನೆ ಪಂದ್ಯದಲ್ಲಿ ಆರ್‌ಸಿಬಿಯನ್ನು ಅದರದೇ ತವರಿನಲ್ಲಿ ಸೋಲಿಸಿ ಆತ್ಮವಿಶ್ವಾಸ ಹೆಚ್ಚಿಸಿ ಕೊಂಡಿದೆ. ಕೆ.ಎಲ್.ರಾಹುಲ್, ನಿಸಾಂಕ, ಟ್ರಸ್ಟನ್ ಸ್ಟಬ್, ಡೇವಿಲ್ ಮಿಲ್ಲರ್ ಸೇರಿ ಅನುಭವಿ ಬ್ಯಾಟರ್‌ಗಳು ತಂಡದಲ್ಲಿದ್ದು, ತಂಡದ ಗೆಲುವಿಗೆ ಕೊಡುಗೆ ನೀಡುತ್ತಿದ್ದಾರೆ. ಆದರೆ ಕುಲೀಪ್ ಯಾದವ್, ಅಕ್ಟರ್‌ರಿಂದ ಈ ಬಾರಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ಕಂಡುಬಂದಿಲ್ಲ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
