ಪಾಲನೆ ನ್ಯೂಸ್
ಗಂಗಾವತಿ : ವಿದೇಶಿ ಮಹಿಳೆ ಸೇರಿ ಇಬ್ಬರು ಮಹಿಳೆಯರ ಅತ್ಯಾಚಾರ ಹಾಗೂ ಪ್ರವಾಸಿಗನೊಬ್ಬನನ್ನು ಹತ್ಯೆಗೈದಿದ್ದ ಮೂವರು ಅಪರಾಧಿಗಳಿಗೆ ನಗರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಸೋಮವಾರ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಇದು ಜಿಲ್ಲೆಯ ನ್ಯಾಯಾಂಗ ಇತಿಹಾಸದಲ್ಲೇ ಈ ರೀತಿ ಶಿಕ್ಷೆ ಪ್ರಕಟವಾದ ಮೊದಲ ಪ್ರಕರಣವಾಗಿದೆ. ಮಲ್ಲೇಶ ಅಲಿಯಾಸ್ ಹಂದಿ ಮಲ್ಲ, ಚೇತನ ಸಾಯಿ ಕಾಮೇಶ್ವರ ಹಾಗೂ ಶರಣಬಸವರಾಜ ಬಾಲಪ್ಪ ಶಿಕ್ಷೆಗೊಳಗಾದವರು. ಇದರೊಂದಿಗೆ ಅತ್ಯಾಚಾರ, ಕೊಲೆ ಯತ್ನ ಮತ್ತು ದರೋಡೆ ಪ್ರಕರಣಗಳಲ್ಲಿ ಜೀವಾವಧಿ ಹಾಗೂ ಏಳು ವರ್ಷಗಳ ಪ್ರತ್ಯೇಕ ಶಿಕ್ಷೆಯನ್ನೂ ನೀಡಲಾಗಿದೆ. ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ ಆರೇ ತಿಂಗಳಲ್ಲೇ ಈ ಮಹತ್ವದ ತೀರ್ಪು ಪ್ರಕಟವಾಗಿದ್ದು, ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ ತೀರ್ಪು ಪ್ರಕಟಿಸಿದ್ದಾರೆ.
ಏನಿದು ಪ್ರಕರಣ?: ತಾಲೂಕಿನ ಸಣಾಪುರ ಕೆರೆಯ ಸನಿಹದ ಎಡದಂಡೆ ಕಾಲುವೆ ಬಳಿ 2025ರ ಮಾ.3ರ ರಾತ್ರಿ ಪ್ರವಾಸಿಗರಾದ ಅಮೆರಿಕದ ಡೇನಿಯಲ್ ಪಿಟಾಸ್, ಮಹಾರಾಷ್ಟ್ರದ ನಾಸಿಕ್ ಪಂಕಜ್ ಪಾಟೀಲ್ ಹಾಗೂ ಒಡಿಶಾದ ಬಿಬಾಶ್, ಇಸ್ರೇಲ್ ಮಹಿಳೆ ಹಾಗೂ ತಮಿಳುನಾಡಿನ ಹೋಮ್ ಸ್ಟೇ ಮಾಲಕಿಯನ್ನು ಅಡ್ಡಗಟ್ಟಿದ ಈ ಮೂವರು ಹಣಕ್ಕಾಗಿ ಬೇಡಿಕೆಯಿಟ್ಟಿದ್ದರು. ಹಣ ನೀಡಲು ನಿರಾಕರಿಸಿದಾಗ ಅವರ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಇಸ್ರೇಲ್ ಮಹಿಳೆ ಮತ್ತು ಹೋಮ್ ಸ್ಟೇ ಮಾಲಕಿ ಮೇಲೆ ಅತ್ಯಾಚಾರ ಎಸಗಿದ್ದರು.
ನಂತರ ಅವರ ಬಳಿಯಿದ್ದ ಹಣ ಹಾಗೂ ಇತರ ವಸ್ತುಗಳನ್ನು ದೋಚಿದ್ದಾರೆ. ಇದನ್ನು ತಡೆಯಲು ಯತ್ನಿಸಿದ ಮೂವರು ಹಂದಿ ಮಲ್ಲ ಚೇತನ ಸಾಯಿ ಶರಣಬಸವರಾಜ ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಪ್ರವಾಸಿಗನ ಕೊಲೆ ಪ್ರಕರಣದಿಂದ ಹಂಪಿ-ಆನೆಗೊಂದಿ ಭಾಗಕ್ಕೆ ಕೆಟ್ಟ ಹೆಸರು ಬಂದಿತ್ತು. ಇದನ್ನು ಗಂಭೀರ ಪರಿಗಣಿಸಿ, ಬಲವಾದ ಸಾಕ್ಷ್ಯಗಳನ್ನು ಒದಗಿಸುವ ಮೂಲಕ ಅಪರಾಧಿಗಳಿಗೆ ಕಠಿಣ ಶಿಕ್ಷೆ ದೊರೆಯುವಂತೆ ಮಾಡಲಾಗಿದೆ | ರಾಮ್ ಎಲ್. ಅರಸಿದ್ಧಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಂಪಿ-ಆನೆಗೊಂದಿ ಭಾಗಕ್ಕೆ ಬರುವ ದೇಶಿ-ವಿದೇಶಿ ಪ್ರವಾಸಿಗರಿಗೆ ರಕ್ಷಣೆಯಿದೆ ಎಂಬುದನ್ನು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಸಾಬೀತುಪಡಿಸುವ ದೃಷ್ಟಿಯಿಂದ ಈ ಪ್ರಕರಣದಲ್ಲಿ ಕಠಿಣ ಶಿಕ್ಷೆಯಾಗುವಂತೆ ಶ್ರಮಿಸಲಾಗಿದೆ. | ನಾಗಲಕ್ಷ್ಮೀ ಸರ್ಕಾರಿ ಅಭಿಯೋಜಕಿ ಪುರುಷರನ್ನು ಅಪರಾಧಿಗಳು ಎಡದಂಡೆ ಕಾಲುವೆಗೆ ತಳ್ಳಿದ್ದಲ್ಲದೆ, ಅವರ ಮೇಲೆ ಕಲ್ಲು ಎತ್ತಿ ಹಾಕಿ ಕೊಲ್ಲಲು ಯತ್ನಿಸಿದ್ದಾರೆ.

ನೀರಿನಲ್ಲಿ ಕೊಚ್ಚಿ ಹೋಗಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ ಪ್ರವಾಸಿಗ ಬಿಬಾಶ್ ಎಂಬುವರ ಶವ ಕಾಲುವೆಯಲ್ಲಿ ಪತ್ತೆಯಾಗಿತ್ತು. ಮಾ.7ರಂದು ಹೋಮ್ ಸ್ಟೇ ಮಾಲಕಿ ನೀಡಿದ ದೂರಿನನ್ವಯ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಗ್ರಾಮೀಣ ಪಿಐ ಸೋಮಶೇಖರ್ ಜುಟ್ಟಲ್ ತಕ್ಷಣ ಕಾರ್ಯಪ್ರವೃತ್ತರಾಗಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ರೋಚಕವಾಗಿ ನಡೆದಿತ್ತು ಬಂಧನ: ಘಟನೆ ನಡೆದ ಸ್ಥಳದಲ್ಲಿ ಅಪರಾಧಿಗಳ ಬಗ್ಗೆ ಪ್ರತ್ಯಕ್ಷ ಕುರುಹುಗಳಿರಲಿಲ್ಲ. ಆದರೆ ಮೊಬೈಲ್ ಒಂದರಲ್ಲಿ ಸೆರೆಸಿಕ್ಕಿದ್ದ ಹಂದಿ ಮಲ್ಲೇಶನ ಕಾಲಿನ ಚಿತ್ರದ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರು, ಸಾಯಿನಗರದ ಮನೆಯಲ್ಲಿದ್ದ ಆತನನ್ನು ಬಂಧಿಸಿದ್ದರು. ನಂತರ ಹೊಸಪೇಟೆಯಲ್ಲಿದ್ದ ಚೇತನ ಸಾಯಿಯನ್ನು ಸೆರೆಹಿಡಿಯಲಾಯಿತು.
ಶರಣಬಸವರಾಜ ಚೆನ್ನೈಗೆ ಪರಾರಿಯಾಗಿದ್ದರೂ ಅಲ್ಲಿ ದಾರಿಹೋಕರ ಮೊಬೈಲ್ ಬಳಸಿ ತನ್ನ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದ ತಾಂತ್ರಿಕ ಸುಳಿವಿನ ಆಧಾರದ ಮೇಲೆ ಆತನನ್ನೂ ಬಂಧಿಸಲಾಗಿತ್ತು. ಘಟನೆ ನಡೆದ 24 ಗಂಟೆಗಳಲ್ಲಿ ಇಬ್ಬರು ಹಾಗೂ ಎರಡು ದಿನಗಳ ಒಳಗಾಗಿ ಮೂರನೇ ಅಪರಾಧಿಯನ್ನು ಪೊಲೀಸರು ಸೆರೆಹಿಡಿದಿದ್ದು ರೋಚಕವಾಗಿತ್ತು. ಪ್ರಕರಣದಲ್ಲಿ ಪೊಲೀಸರು ಅತ್ಯಂತ ಚುರುಕಾಗಿ ಕೆಲಸ ಮಾಡಿದ್ದು, 750 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 84 ವಸ್ತುಗಳನ್ನು ಜಪ್ತಿ ಮಾಡಲಾಗಿತ್ತು.
ಡಿಎನ್ಎ ವಿಶ್ಲೇಷಣೆ, ತಹಸೀಲ್ದಾರ್ ಸಮ್ಮುಖದಲ್ಲಿ ನಡೆದ ಗುರುತಿನ ಪರೇಡ್ ಹಾಗೂ 101 ಸಾಕ್ಷಿಗಳನ್ನು ಕಲೆ ಹಾಕಲಾಗಿತ್ತು. ಇವುಗಳಲ್ಲಿ 55 ಪ್ರಮುಖ ಸಾಕ್ಷ್ಯಗಳನ್ನು ಪರಿಗಣಿಸಿದ ನ್ಯಾಯಾಲಯವು ಕೇವಲ ಆರೇ ತಿಂಗಳಲ್ಲಿ ಮರಣದಂಡನೆ ತೀರ್ಪು ನೀಡಿದೆ. ಸರ್ಕಾರದ ಪರ ಪಿಪಿ ನಾಗಲಕ್ಷ್ಮೀ ವಾದ ಮಂಡಿಸಿದ್ದರು. ಇಷ್ಟು ತ್ವರಿತವಾಗಿ ತೀರ್ಪು ಬಂದಿರುವುದು ಜಿಲ್ಲೆಯ ಇತಿಹಾಸದಲ್ಲೇ ಮೊದಲು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ. ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
