NEWS

ಎಲ್‌ಪಿಜಿ ಕೊರತೆ ಬಗ್ಗೆ ಜನರು ಗಾಬರಿಪಡುವ ಅಗತ್ಯವಿಲ್ಲ

ಪಾಲನೆ ನ್ಯೂಸ್

ತಿರುಚಿರಾಪಳ್ಳಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಎಲ್‌ಪಿಜಿ ಕೊರತೆ ಉಂಟಾಗಿದೆ, ಆದರೆ ಜನರು ಈ ಕುರಿತು ಗಾಬರಿಪಡುವ ಅಗತ್ಯವಿಲ್ಲ, ಸಾರ್ವಜನಿಕರ ಹಿತಾಸಕ್ತಿಯನ್ನು ರಕ್ಷಿಸಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ಮಾತನಾಡಿದ ಮೋದಿ ‘ಮಧ್ಯಪ್ರಾಚ್ಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಡೀ ವಿಶ್ವದ ಇಂಧನ ಪೂರೈಕೆ ಸರಪಳಿ ಮೇಲೆ ಪರಿಣಾಮ ಉಂಟಾಗಿದೆ. ನಾವು ಭಾರತ ಮೊದಲು ಎಂಬ ಸಿದ್ಧಾಂತದಲ್ಲಿ ನಂಬಿಕೆ ಹೊಂದಿದ್ದೇವೆ. ಹಾಗಾಗಿ ಯಾರೂ ಭಾರತ ತನ್ನ ಹಿತಾಸಕ್ತಿಗಳಿಗೆ ಮೊದಲ ಆದ್ಯತೆ ನೀಡಲಿದೆ.

ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ 140 ಕೋಟಿ ಭಾರತೀಯರು ನಮ್ಮ ರಾಷ್ಟ್ರ ಎಷ್ಟು ಪ್ರಬುದ್ಧವಾಗಿದೆ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದರು. ಒಂದು ರಾಷ್ಟ್ರವಾಗಿ ನಾವು ಪ್ರತಿಯೊಂದು ಪರಿಸ್ಥಿತಿಯನ್ನೂ ಯಶಸ್ವಿಯಾಗಿ ಎದುರಿಸುವ ವಿಶ್ವಾಸ ನನಗಿದೆ. ಹಾಗಾಗಿ ನಾನು ಜನರಲ್ಲಿ ಮನವಿ ಮಾಡುತ್ತೇನೆ. ನಾವು ಕೇವಲ ಸರಿಯಾದ ಮತ್ತು ಪರಿಶೀಲಿಸಿದ ಮಾಹಿತಿಯನ್ನು ಮಾತ್ರ ಹಂಚಿಕೊಳ್ಳೋಣ’ ಎಂದು ತಿಳಿಸಿದರು. # ಪ್ರಧಾನ ಮಂತ್ರಿ ಗಾಬರಿಯಾಗಬಾರದು ಮತ್ತು ವದಂತಿಗಳಿಗೆ ಮೋದಿ ಹೇಳಿಕೆ ಕಿವಿಕೊಡಬಾರದು.

ಯಾವುದೇ ಪರಿಸ್ಥಿತಿಯಲ್ಲಿ ಜನಾದೇಶಕ್ಕೆ ದ್ರೋಹ ಬಗೆದಿದ್ದಾರೆ: 2021 ರಲ್ಲಿ ತಮಿಳುನಾಡಿನ ಜನರು ಡಿಎಂಕೆಗೆ ಅಧಿಕಾರ ನೀಡಿದ್ದರು, ಆದರೆ ಅವರು ಅದನ್ನು ಜವಾಬ್ದಾರಿಯಾಗಿ ತೆಗೆದುಕೊಳ್ಳುವ ಬದಲು ಜನಾದೇಶಕ್ಕೆ ದ್ರೋಹ ಬಗೆದಿದ್ದಾರೆ. ಜನರು ಒಂದು ಕುಟುಂಬಕ್ಕಾಗಿ ಅಲ್ಲ, ಪ್ರತಿಯೊಂದು ಕುಟುಂಬಕ್ಕಾಗಿ ಕೆಲಸ ಮಾಡುವ ಸರ್ಕಾರವನ್ನು ಬಯಸುತ್ತಿದ್ದಾರೆ. ಆದರೆ ಡಿಎಂಕೆ ಆಡಳಿತದಲ್ಲಿ ಎಲ್ಲವೂ ಒಂದು ಕುಟುಂಬದಿಂದಲೇ ಆರಂಭವಾಗಿ ಅದೇ ಕುಟುಂಬದಲ್ಲಿ ಕೊನೆಗೊಳ್ಳುತ್ತದೆ. ಎಲ್ಲಾ ನದಿಗಳು ಸಮುದ್ರಕ್ಕೆ ಸೇರುವಂತೆ, ರಾಜ್ಯದ ಎಲ್ಲಾ ಭ್ರಷ್ಟ ಹಣವೂ ಒಂದು ಕುಟುಂಬಕ್ಕೆ ಹೋಗುತ್ತಿದೆ. ಡಿಎಂಕೆ ಪಕ್ಷ ವೈಜ್ಞಾನಿಕ ಭ್ರಷ್ಟಾಚಾರ ಮಾದರಿಗೆ ಕುಖ್ಯಾತವಾಗಿದೆ ಎಂದು ಮೋದಿ ವಾಗ್ದಾಳಿ ನಡೆಸಿದರು.

ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಭತ್ತದ ಹೈಟೆಕ್ ಕಟಾವು ಯಂತ್ರಗಳ (Hitech Combined Harvestors Paddy) ಕುರಿತಾಗಿ 2 ದಿನಗಳ ತರಬೇತಿ

ಆದಿಚುಂಚನಗಿರಿಯಲ್ಲಿ ಗಂಗಾಧರೇಶ್ವರ ಸ್ವಾಮಿ ರಥೋತ್ಸವ

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 144.4 ಕೋಟಿ ರು. ವೆಚ್ಚದಲ್ಲಿ ಅಕ್ಟೇರಿಯಂ

Leave a Comment