NEWS

ಪೋಷಕರ ವಿರೋಧದ ನಡುವೆಯೂ ರುದ್ರಾಕ್ಷಿ ಹುಡುಗಿ ಮೊನಾಲಿಸಾ ಮದುವೆ

ಪಾಲನೆ ನ್ಯೂಸ್

ತಿರುವನಂತಪುರಂ: ಕಳೆದ ವರ್ಷ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಾ ಸಾಮಾಜಿಕ ಜಾಲತಾಣದಲ್ಲಿ ಫೇಮಸ್‌ ಆಗಿದ್ದ ನೀಲಿ ಕಂಗಳ ಚೆಲುವೆ ಮೊನಾ ಲಿಸಾ ಕುಟುಂಬಸ್ಥರ ವಿರೋಧದ ನಡುವೆಯೂ ಬುಧವಾರ ಮುಸ್ಲಿಂ ವ್ಯಕ್ತಿಯ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 6 ಕುಂಭಮೇಳದ ಬಳಿಕ ಜಾಲತಾಣದಲ್ಲಿ ಹವಾ ಸೃಷ್ಟಿಸಿದ್ದ ಮೊನಾಲಿಸಾ ಭೋಸ್ಥೆ, ಫರ್ಮಾನ್ ಖಾನ್ ಎಂಬ ಮುಸ್ಲಿಂ ಹುಡುಗನನ್ನು ಫೇಸ್ ಬುಕ್‌ನಲ್ಲಿ ಪರಿಚಯ ಮಾಡಿಕೊಂಡು ತಿಂಗಳಿನಿಂದ ಪ್ರೀತಿಸಿದ್ದರು. ಆದರೆ ಇದಕ್ಕೆ ಆಕೆಯ ತಂದೆ ವಿಜಯ್ ಸಿಂಗ್ ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಜೋಡಿ ತವರು ರಾಜ್ಯ ಮಧ್ಯಪ್ರದೇಶದಿಂದ ಕೇರಳಕ್ಕೆ ಆಗಮಿಸಿ ಕೇರಳದ ಅರುಮನೂರ್ ದೇವಸ್ಥಾನದಲ್ಲಿ ವರಿಸಿದ್ದಾರೆ. ಮದುವೆಗೂ ಮುನ್ನೆ ಮೊನಾಲಿಸಾ ತಂದೆ ಕೇರಳಕ್ಕೆ ಬಂದು ಮಗಳನ್ನು ಕರೆದುಕೊಂಡು ಹೋಗಲು ಯತ್ನಿಸಿದ್ದು, ಆ ಯತ್ನ ವಿಫಲವಾಗಿದೆ. ಇದೇ ವೇಳೆ ಮೊನಾಲಿಸಾ ಇಲ್ಲಿನ ಥಂಪನೂರು ಪೊಲೀಸ್ ಠಾಣೆಯಲ್ಲಿ ತಂದೆ ವಿಜಯ್ ಸಿಂಗ್ ಅವರ ವಿರುದ್ಧ ಮದುವೆಗೆ ಬಲವಂತದ ಆರೋಪದಲ್ಲಿ ದೂರು ದಾಖಲಿಸಿದ್ದಾಳೆ.

ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ಸರ್ಕಾರ ದಾಖಲೆ ಮಾಡಿದೆ: ನಿಖಿಲ್ ಆರೋಪ

ಕೊಡಗಿನ ಅರಣ್ಯದಲ್ಲಿ ನಾಪತ್ತೆಯಾಗಿದ್ದ ಯುವತಿ ಪತ್ತೆ ಪ್ರಕರಣ

‘ ಯುವಕರ ಪಾತ್ರ ರಾಷ್ಟ್ರ ನಿರ್ಮಾಣದಲ್ಲಿ ಅತ್ಯಂತ ಮಹತ್ವದ್ದು’

Leave a Comment