NEWS

ಹವಾಮಾನ ಒಪ್ಪಂದ ಸೇರಿ 66 ಅಂತರರಾಷ್ಟ್ರೀಯ ಒಡಂಬಡಿಕೆಗಳಿಂದ ಹೊರನಡೆದ ಅಮೆರಿಕ

ಪಾಲನೆ ನ್ಯೂಸ್

ವಾಷಿಂಗ್ಟನ್‌ : ಪ್ರಮುಖ ಹವಾಮಾನ ಒಪ್ಪಂದ, ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣ ಪ್ರಚಾರ ಮಾಡುವ ಸಂಸ್ಥೆ ಸೇರಿ ವಿಶ್ವಸಂಸ್ಥೆ ಹಾಗೂ ಅಂತರಾಷ್ಟ್ರೀಯ ಹಲವು ಸಂಘಟನೆ/ ಒಪ್ಪಂದಗಳಿಂದ ಹೊರ ನಡೆಯುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಘೋಷಿಸಿದ್ದಾರೆ.

ವಿಶ್ವಸಂಸ್ಥೆಯ 31 ಹಾಗೂ ಇತರೆ 35 ಸೇರಿ ಒಟ್ಟು 66 ಸಂಘಟನೆಗಳಿಂದ ಅಮೆರಿಕ ಹೊರಬರಲಿದೆ.

ಹಿರಿಯ ಆಡಳಿತ ಅಧಿಕಾರಿಗಳಿಗೆ ಸಲ್ಲಿಸಿದ ಟ್ರಂಪ್ ಜ್ಞಾಪಕ ಪತ್ರದಲ್ಲಿ ಪಟ್ಟಿ ಮಾಡಿರುವ 35 ವಿಶ್ವಸಂಸ್ಥೆಯೇತರ ಗುಂಪುಗಳು ಮತ್ತು 31 ವಿಶ್ವಸಂಸ್ಥೆಯ ಘಟಕಗಳಲ್ಲಿ ಹವಾಮಾನ ಬದಲಾವಣೆಯ ಕುರಿತಾದ ವಿಶ್ವಸಂಸ್ಥೆಯ ಚೌಕಟ್ಟು ಸಮಾವೇಶವೂ ಸೇರಿದೆ. ಇದು 2015ರ ಪ್ಯಾರಿಸ್ ಹವಾಮಾನ ಒಪ್ಪಂದದ ಭಾಗವಾಗಿದೆ. ಕಳೆದ ವರ್ಷ ನಡೆದ ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಹವಾಮಾನ ಸಮಾವೇಶಕ್ಕೆ ಅಮೆರಿಕ ಗೈರಾಗಿತ್ತು. ಅಮೆರಿಕ ಗೈರಾಗಿದ್ದು ಮೂರು ದಶಕದಲ್ಲಿ ಅದೇ ಮೊದಲು. ಮಹಿಳಾ ಸಬಲೀಕರಣಕ್ಕಾಗಿ ಇರುವ ‘ವಿಶ್ವಸಂಸ್ಥೆ-ಮಹಿಳೆ’ ಹಾಗೂ 150ಕ್ಕೂ ಹೆಚ್ಚು ದೇಶಗಳಲ್ಲಿ ಕುಟುಂಬ ಯೋಜನೆ, ತಾಯಿ ಮತ್ತು ಮಗುವಿನ ಆರೋಗ್ಯಕ್ಕಾಗಿ ಕೆಲಸ ಮಾಡುವ ವಿಶ್ವಸಂಸ್ಥೆ ಜನಸಂಖ್ಯೆ ನಿಧಿಯಿಂದ (ಯುಎನ್‌ಎಫ್‌ಪಿಎ) ಹೊರನಡೆದಿದೆ. ಕೆಳೆದ ವರ್ಷ ಇದಕ್ಕೆ ನೀಡುತ್ತಿದ್ದ ದೇಣಿಗೆಯನ್ನು ಅಮೆರಿಕ ಕಡಿತಗೊಳಿಸಿತ್ತು.

ವ್ಯಾಪಾರ ಮತ್ತು ಅಭಿವೃದ್ಧಿ ಕುರಿತ ವಿಶ್ವಸಂಸ್ಥೆಯ ಸಮ್ಮೇಳನ, ಅಂತರರಾಷ್ಟ್ರೀಯ ಇಂಧನ ವೇದಿಕೆ, ವಿಶ್ವಸಂಸ್ಥೆಯ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ನೋಂದಣಿ ಮತ್ತು ವಿಶ್ವಸಂಸ್ಥೆಯ ಶಾಂತಿ ನಿರ್ಮಾಣ ಆಯೋಗದಿಂದಲೂ ಅಮೆರಿಕ ಹೊರಬಲಿದೆ.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ಮಂಡ್ಯ ತಾಲ್ಲೂಕು ಕಚೇರಿಗೆ ಜಿಲ್ಲಾಧಿಕಾರಿ ದಿಡೀರ್ ಭೇಟಿ, ಸಾರ್ವಜನಿಕರಿಂದ ಅಹವಾಲು ಸ್ವೀಕಾರ

ಏಪ್ರಿಲ್ 08 ರಂದು ಸಾರ್ವಜನಿಕರಿಂದ ದೂರು ಹಾಗೂ ಅಹವಾಲು ಸ್ವೀಕಾರ

ಯುವ ಜನತೆಗೆ ಕಾನೂನಿನ ಜ್ಞಾನ ಬಹಳ ಮುಖ್ಯ ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾವಹಿಸಬೇಕು – ಹೆಚ್. ಶಶಿಧರ ಶೆಟ್ಟಿ

Leave a Comment