ಪಾಲನೆ ನ್ಯೂಸ್
ಕೆ.ಆರ್.ಪೇಟೆ: ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಇತಿಹಾಸ ಸುಪ್ರಸಿದ್ಧ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿಯಾ ಬ್ರಹ್ಮರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.

ಪಾಂಡುಪುರ ಉಪ ವಿಭಾಗ ಅಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಡಾ:ಎಸ್.ಯು ಅಶೋಕ್, ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್, ಟಿ.ಎ.ಪಿ.ಸಿ.ಎಂ.ಎಸ್ ನಿರ್ದೇಶಕ ಹೆಚ್.ಟಿ ಲೋಕೇಶ್, ಬ್ರಹ್ಮರಥೋತ್ಸವ ಪೂಜಾ ಕಾರ್ಯಕ್ಕೆ ಚಾಲನೆ ನೀಡಿದರು.
ರಥೋತ್ಸವದ ಹಿನ್ನೆಲೆ ಗ್ರಾಮದ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಪ್ರಧಾನ ಆರ್ಚಕ ಶ್ರೀಧರ್ ನೇತೃತ್ವದಲ್ಲಿ ಮುಂಜಾನೆಯಿಂದ ವಿಶೇಷ ಪೂಜೆಗಳು ಮಂತ್ರ ಪಠಿಸುವ ಮೂಲಕ ನಡೆದವು.ರಥಕ್ಕೆ ವಿವಿಧ ಪುಷ್ಪಗಳಿಂದ ಹಾಗೂ ಕೇಸರಿ ಸೇರಿದಂತೆ ಹಲವು ಬಗೆಯ ಬಣ್ಣ ಬಣ್ಣಗಳ ಬಾವುಟಗಳಿಂದ ಅಲಂಕಾರಗೊಂಡ ರಥ ಮೇಲೆ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವರ ಉತ್ಸವ ಮೂರ್ತಿಗಳನ್ನು ರಥದ ಮೇಲೆ ಇರಿಸಿ, ಆಕಾಶದಲ್ಲಿ ಗರುಡ ಪಕ್ಷಿಗಳು ಪ್ರದಕ್ಷಣೆ ಹಾಕಿ ಶುಭ ಸೂಚನೆಯ ನಂತರ ಶುಭಗಳಿಗೆಯಲ್ಲಿ ಗಣ್ಯರು ಹಾಗೂ ಭಕ್ತಾದಿಗಳು ರಥಕ್ಕೆ ಪೂಜೆ ಸಲ್ಲಿಸಿದರು.

ನೆರೆದಿದ್ದ ಭಕ್ತ ಸಮೂಹ ಉಘೇ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ಜೈಕಾರದೊಂದಿಗೆ ರಥ ಎಳೆದು ಭಕ್ತಿ ಸಮರ್ಪಣೆ ಮಾಡಿದರು. ನವದಂಪತಿಗಳು ಸೇರಿದಂತೆ ಆಗಮಿಸಿದ ಭಕ್ತರು ಹಣ್ಣು ಜವನ ಎಸೆದು ತಮ್ಮ ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥಿಸಿಕೊಂಡರು. ರಥೋತ್ಸವ ಆಗಮಿಸಿದ 5,ಸಾವಿರಕ್ಕೂ ಹೆಚ್ಚು ಭಕ್ತಾದಿಗಳಿಗೆ ತಾಂಡವೇಶ್ವರ ಕುಟುಂಬಸ್ಥರಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು ಆ ವ್ಯವಸ್ಥೆಯನ್ನು ಅಕ್ಕಿಹೆಬ್ಬಾಳು ಗ್ರಾಮದ ಹೇಮಾವತಿ ಹೊನ್ನಾರು ವೇದಿಕೆಯಿಂದ ಸಂಪೂರ್ಣವಾಗಿ ಯಶಸ್ವಿಯಾಗಿ ನಡೆಸಿಕೊಟ್ಟರು.
ಆಕಾಶದಲ್ಲಿ ಗರುಡ ಪಕ್ಷಿಯ ಪ್ರದಕ್ಷಿಣೆ ಮತ್ತು ರಥೋತ್ಸವ:- ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ರಥೋತ್ಸವವು ಪ್ರತಿ ವರ್ಷವು ರಥಸಪ್ತಮಿಯಾದ ಒಂದು ವಾರದ ನಂತರ ನಡೆಯುತ್ತದೆ. ಈ ರಥೋತ್ಸವದ ವಿಶೇಷವೆಂದರೆ ಆಕಾಶದಲ್ಲಿ ಗರುಡ ಪಕ್ಷಿಗಳು ರಥದ ಮೇಲ್ಬಾಗದಲ್ಲಿ 60 ಅಡಿ ಅಂತರದಲ್ಲಿ ಪ್ರದಕ್ಷಿಣೆ ಹಾಕಿದ ನಂತರ ರಥೋತ್ಸವವನ್ನು ಮುನ್ನಡೆಸುವ ಪದ್ಧತಿ, ಈ ದೃಶ್ಯ ವೈಜ್ಞಾನಿಕ ಲೋಕಕ್ಕೆ ಸವಾಲೆಸೆಯುವಂತಾಗಿದೆ ಎಂಬ ಭಾವ ಪ್ರತಿಯೊಬ್ಬ ಪ್ರತ್ಯಕ್ಷದರ್ಶಿ ಭಕ್ತಾದಿಗಳಲ್ಲಿ ಮೂಡಿ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವರ ಮಹಿಮೆಯನ್ನ ಭಕ್ತಸಾಗರ ಕಣ್ತುಂಬಿಕೊಂಡರು.
ರಥೋತ್ಸವದಲ್ಲಿ ಮೈ ಶುಗರ್ ಕಾರ್ಖಾನೆ ಅಧ್ಯಕ್ಷ ಹಾಗೂ ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ ಗಂಗಾಧರ್,ಜೆಡಿಎಸ್ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಅಕ್ಕಿಹೆಬ್ಬಾಳು ರಘು,ಮನ್ಮುಲ್ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಎಂ ಬಿ ಹರೀಶ್, ಕೈಮಗ್ಗ ನಿಗಮದ ಅಭಿವೃದ್ಧಿ ನಿಗಮದ ಅಧ್ಯಕ್ಷ ನಾಗೇಂದ್ರ ಕುಮಾರ್,ದಿಶಾ ಕಮಿಟಿ ಸದಸ್ಯ ನರಸನಾಯ್ಕ, ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ರಾಜನಾಯ್ಕ, ಟಿ.ಎ.ಪಿ.ಸಿ.ಎಂ.ಎಸ್ ನಿರ್ದೇಶಕ ಬೊಮ್ಮನಹಳ್ಳಿ ಮಂಜುನಾಥ್, ಅಕ್ಕಿಹೆಬ್ಬಾಳು ಹಿರಿಯ ಮುಖಂಡರಾದ ಎ.ಸಿ ಮಂಜೇಗೌಡ,ನಾರಾಯಣಸ್ವಾಮಿ, ಮಹೇಶ್ ನಾಯ್ಕ,ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
