ಪಾಲನೆ ನ್ಯೂಸ್
ಕಿಕ್ಕೇರಿ : ರಾಜ್ಯಕ್ಕೆ ಉತ್ತಮ ಮಳೆ, ಬೆಳೆಗೆ ತೊಂದರೆಯಾಗದಿದ್ದರೂ ಅವಘಡಗಳು ತಪ್ಪಲಾರದು ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.
ಖಾಸಗಿ ಕಾರ್ಯಕ್ರಮಕ್ಕೆ ಶುಕ್ರವಾರ ಸಂಜೆ ಆಗಮಿಸಿದ ವೇಳೆ ಇಲ್ಲಿನ ಜಯಲಕ್ಷ್ಮಿ ಫೈಲ್ವಾನ್ ಚನ್ನೇಗೌಡ ಒಳಾಂಗಣ ಕ್ರೀಡಾಂಗಣದಲ್ಲಿ ಭಕ್ತರು ನೀಡಿದ ಗೌರವ ಸಮರ್ಪಣೆ ಸ್ವೀಕರಿಸಿ ಪತ್ರಿಕಾ ಮಾಧ್ಯಮದೊಂದಿಗೆ ಮಾತನಾಡಿದರು. ಭವಿಷ್ಯದಲ್ಲಿ ನಂಬುಗೆ ಬೇಕಿದೆ. ಮೌಢ್ಯವಿಲ್ಲದ ಭಗವಂತ ನುಡಿಸಿದಂತೆ ನುಡಿಯುವೆ. ಪ್ರಚಲಿತವಾಗಿ ಮತೀಯ ಗಲಭೆ ಹೆಚ್ಚಲಿದೆ. ವಿಡಂಭ ರೀತಿಯ ಚಟುವಟಿಕೆ, ಅಕಾಲ ಮೃತ್ಯು ಹೇರಳವಾಗಿ ಸಂಭವಿಸ
ಲಿದೆ. ವಿಮಾನ, ರೈಲುಗಳ ಅಪಘಾತ ಹೆಚ್ಚಾಗುವ ಸನ್ನಿವೇಶವಿದೆ. ಸಕಾಲಕ್ಕೆ ಮಳೆಯಾಗಲಿದ್ದು ಅಣೆಕಟ್ಟುಗಳು ತುಂಬಲಿವೆ. ಅಧಿಕವಾದ ವಾಯು, ಗಾಳಿ ಆರ್ಭಟ ಎಲ್ಲರ ಉಸಿರುಗಟ್ಟಿಸುವ ವಾತಾವರಣವಿದೆ ಎಂದರು.

ಮುಂದುವರೆದು ರಾಜ್ಯ, ರಾಷ್ಟ್ರಮಟ್ಟದಲ್ಲಿ ಪರಾಭವ ಚಟುವಟಿಕೆ ಕಾಣಿಸುತ್ತಿದೆ. ಆರೋಗ್ಯದ ಮೇಲೆ ಹೆಚ್ಚಿನ ದುಷ್ಪರಿಣಾಮ, ಅಪಮೃತ್ಯು ಎಲ್ಲೆಡೆ
ಅಧಿಕವಾಗಲಿದೆ. ವಿಶ್ವದ ಜಾಗತಿಕ ಮಟ್ಟದಲ್ಲಿ ಪ್ರಮುಖ ವ್ಯಕ್ತಿಗಳ ತಲೆದಂಡವಾಗುವುದು ಖಚಿತವಾಗಿದೆ. ಭಗವಂತನ ಆರಾಧನೆ, ಧಾರ್ಮಿಕ ಚಿಂತನೆಗಳಿಂದ ಶಾಂತಿ ನೆಮ್ಮದಿ ಲಭಿಸಲಿದ್ದು, ಜನಸಾಮಾನ್ಯರು ಆಸೆಗೆ ಕಡಿವಾಣ ಹಾಕಿ ನೆಮ್ಮದಿಯ ಬದುಕಿಗಾಗಿ ಸರಳ ಬದುಕು, ಜಪ, ತಪ ಮಾಡುವುದು ಲೇಸು ಎಂದು ನುಡಿದರು. ಕೆಪಿಸಿಸಿ ಸದಸ್ಯ ಸುರೇಶ್, ಮುಖಂಡರಾದ ಕೆ.ವಿ. ಅರುಣಕುಮಾರ್, ಚಂದ್ರೇಗೌಡ, ಕೆ.ವೈ. ಹರೀಶ್, ಬಳ್ಳೇಕೆರೆ ಮಂಜುನಾಥ್, ಬಳ್ಳೇಕೆರೆ ಮನು, ಜಾಣೇಗೌಡ, ಸಾಸಲು ಈರಪ್ಪ ಮತ್ತಿತರರಿದ್ದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
