ಪಾಲನೆ ನ್ಯೂಸ್
ಬೆಂಗಳೂರು : ಮಹಾರಾಷ್ಟ್ರಮಾದರಿಯಲ್ಲಿ ಕನ್ನಡ ಮಾತನಾಡಲು ಬರುವ ಟ್ಯಾಕ್ಸಿ, ಆಟೋ ಚಾಲಕರ ಪರವಾನಗಿ ನವೀಕರಣ ನಿಯಮ ರಾಜ್ಯದಲ್ಲೂ ಜಾರಿಗೊಳಿಸುವ ಚಿಂತನೆಯಿದ್ದು, ತಕ್ಷಣಕ್ಕೆ ಆ ನಿಯಮ ಜಾರಿ ಕಷ್ಟ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಅಲ್ಲಿನ ಭಾಷೆ ಬರುವ ಚಾಲಕರಿಗೆ ಮೊದಲು ಪರವಾನಗಿ ನವೀಕರಣ ಮಾಡುವ ನಿಯಮ ಜಾರಿಯಲ್ಲಿದೆ. ಆ ರೀತಿಯ ನಿಯಮ ರಾಜ್ಯದಲ್ಲೂ ಜಾರಿಗೆ ತರುವ ಚಿಂತನೆಯಿದೆ. ಆದರೆ, ತಕ್ಷಣಕ್ಕೆ ಆ ನಿಯಮ ಜಾರಿ ಮಾಡುವುದು ಕಷ್ಟ. ಇಲ್ಲಿರುವ ಅನ್ಯ ಭಾಷಿಕ ಚಾಲಕರಿಗೆ ಸ್ವಲ್ಪ ಸಮಯ ಕೋಡುವುದು ಉತ್ತಮ. ಅವರಿಗೂ ಕನ್ನಡ ಕಲಿಯೋದಕ್ಕೆ ಕಾಲಾವಕಾಶ ನೀಡಬೇಕು. ಆಗಲೂ ಕನ್ನಡ ಕಲಿಯದಿದ್ದರೆ ಮುಂದೆ ಕ್ರಮ ಕೈಗೊಳ್ಳಬಹುದು ಎಂದರು.

ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಕೆಲ ನೌಕರರಿಗೆ ವೇತನ ವಾಗಿಲ್ಲ ಎಂಬ ವಿಚಾರದ ಬಗ್ಗೆ ಪ್ರತಿ ಕ್ರಿಯಿಸಿ, ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರಿಗೆ ವೇತನವಾಗಿಲ್ಲ. ಕೆಕೆ ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಮೂರು ತಿಂಗಳಿನಿಂದ ರಜೆಯಲ್ಲಿದ್ದರು. ಹೀಗಾಗಿ ಸಮಸ್ಯೆಯಾಗಿದೆ. ಕೂಡಲೆ ವೇತನ ನೀಡಲಾಗು ತ್ತದೆ. ಗುತ್ತಿಗೆ ಸಿಬ್ಬಂದಿಗೆ ನಿಗಮದಿಂದ ವೇತನ ನೀಡುವುದಿಲ್ಲ. ವೇತನ ನೀಡುವಂತೆ ಗುತ್ತಿಗೆ ದಾರನಿಗೆ ಸೂಚನೆ ಕೊಟ್ಟಿದ್ದು, ಕೂಡಲೇ ಹಣ ಬಿಡುಗಡೆ ಸೂಚಿಸಲಾಗಿದೆ ಎಂದು ಹೇಳಿದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
