NEWS

ವಾಣಿಜ್ಯ ತೆರಿಗೆ ಇಲಾಖೆ 410 ಕೋಟಿ ರೂ. ಜಿಎಸ್‌ಟಿ ವಂಚನೆ

ಪಾಲನೆ ನ್ಯೂಸ್

ಬೆಂಗಳೂರು : ಜಿಎಸ್‌ಟಿ ವಂಚನೆ ಜಾಲ ಪತ್ತೆ ಮಾಡಿದ್ದು, ಈ ಸಂಬಂಧ ಒಬ್ಬ ಆರೋಪಿಯನ್ನು ಬಂಧಿಸಿದೆ. ಹಲವು ರಾಜ್ಯಗಳಲ್ಲಿ ನಕಲಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ರಚಿಸಿ ಸಾಗಿಸುತ್ತಿದ್ದ ಸಂಬಂಧ ಮೊಹಮ್ಮದ್ ತೌಕೀರ್(42) ಎಂಬಾತನನ್ನು ಬಂಧಿಸಲಾಗಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕರ್ನಾಟಕ, ಆಂಧ್ರ, ತ.ನಾಡಲ್ಲಿ ವಂಚನೆ ಜಾಲ ವಾಣಿಜ್ಯ ತೆರಿಗೆ ಇಲಾಖೆಯಿಂದ ಬಯಲು ನಕಲಿ ಕಂಪನಿಗಳನ್ನು ಸ್ಥಾಪಿಸಿ, ಭಾರೀ ಪ್ರಮಾಣದ ನಕಲಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ವ್ಯವಹಾರ ಮಾಡುತ್ತಿದ್ದ ಆರೋಪದ ಮೇಲೆ ಮೊಹಮ್ಮದ್ ತೌಕೀರ್‌ನನ್ನು ಬಂಧಿಸಲಾಗಿದ್ದು, ನಗರದ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಈತನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.


ತನಿಖೆ ವೇಳೆ ಮೊಹಮ್ಮದ್ ತೌಕೀರ್, ಆತನ ಸಹಚರ ಶೇಖ್ ಜಾಕೀರ್ ಹುಸೇನ್ ಅಲಿಯಾಸ್ ಬಾಷಾ ಪ್ರಮುಖ ಸೂತ್ರಧಾರರು. ಈ ಇಬ್ಬರು ಆರೋಪಿಗಳು ಅನೇಕ ನಕಲಿ ವ್ಯಾಪಾರ ಸಂಸ್ಥೆಗಳನ್ನು ಸ್ಥಾಪಿಸಿ, ವಾಸ್ತವಿಕ ಸರಕು ಪೂರೈಕೆ ಇಲ್ಲದೆ ನಕಲಿ ತೆರಿಗೆ ಬಿಲ್‌ಗಳನ್ನು ನೀಡುವ ಮೂಲಕ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಸಂಸ್ಥೆಗಳಿಗೆ ಇನ್‌ಪುಟ್ ಕ್ರೆಡಿಟ್ ರಚಿಸಿ ಹಂಚಿದ್ದಾರೆ. ಈ ಜಾಲ 410 ಕೋಟಿ ರೂ. ಆರ್ಥಿಕ ವಂಚನೆ ವ್ಯವಹಾರ ಮಾಡಿದ್ದು, ಇದರಲ್ಲಿ 102.5 ಕೋಟಿ ರೂ. ಸುಳ್ಳು ಇನ್‌ಪುಟ್ ಕ್ರೆಡಿಡ್ ಕೂಡ ಸೇರಿಕೊಂಡಿದೆ. ಆರೋಪಿಗಳು ಮೂಲತಃ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯವರು. ಮೊಹಮ್ಮದ್ ತೌಕೀರ್‌ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದು, ಶೇಖ್ ಜಾಕೀರ್ ಆಂಧ್ರದಿಂದ ಕಾರ್ಯನಿರ್ವಹಿಸುತ್ತಿದ್ದಾನೆ. ಶೇಖ್ ಜಾಕೀ‌ರ್ ವಿದೇಶಕ್ಕೆ ಪರಾರಿಯಾಗಿದ್ದು, ಆತನ ಬಂಧನಕ್ಕೆ ಕಾನೂನು ಪ್ರಯತ್ನಗಳು ಮುಂದುವರಿದಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಬೂದನೂರು ಉತ್ಸವ: 2ನೇ ದಿನ ಲೈವ್

ಗ್ರಾಮ ಪಂಚಾಯತ್ ನೌಕರರ ಅನುಮೋದನೆಯ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ

ನ್ಯಾಯಮೂರ್ತಿಗಳಿಂದ ಸುರಕ್ಷತಾ ಕ್ರಮಗಳ ಬಗ್ಗೆ ಅರ್ಜಿ ಪರಿಶೀಲನೆ:

Leave a Comment