NEWS

ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಣೆ : ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ವಿಜ್ಞಾನ ಜಾಥಾ

ಪಾಲನೆ ನ್ಯೂಸ್

ಮಂಡ್ಯ, ಫೆ. 28: ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಮಂಡ್ಯದ Government College for Women ಕಾಲೇಜಿನಲ್ಲಿ ಎರಡು ದಿನಗಳ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಎರಡನೇ ದಿನ ʼವಿಜ್ಞಾನದೆಡೆಗೆ ನಮ್ಮ ನಡೆʼ ಎಂಬ ಶೀರ್ಷಿಕೆಯಡಿ ವಿಜ್ಞಾನ ಜಾಥಾ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಸ್ವಾಗತವನ್ನು ವಿಜ್ಞಾನ ವೇದಿಕೆಯ ಸಂಚಾಲಕರಾದ ಜ್ಯೋತಿ ಡಿ.ಕೆ. ನೆರವೇರಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಗುರುರಾಜಪ್ರಭು ಕೆ. ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ವಿಜ್ಞಾನ ಸಂಬಂಧಿತ ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ತಿಳಿಸಿದರು. ವಿದ್ಯಾರ್ಥಿನಿಯರು ವಿಜ್ಞಾನ ವಿಷಯದ ಕುರಿತು ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಅವರು ಪ್ರೇರಣಾದಾಯಕ ಸಂದೇಶ ನೀಡಿದರು.

ಜಾಥಾ ಕಾರ್ಯಕ್ರಮದಲ್ಲಿ ಕಾಲೇಜಿನ ಮ್ಯಾನೇಜರ್ ರವಿಕಿರಣ್, ರವಿಕಾಂತ್ ಲಮಾಣಿ, ಐಕ್ಯೂಎಸಿ ಸಂಚಾಲಕರಾದ ಜಯಲಕ್ಷ್ಮಿ ಮತ್ತು ಕೌಸರ್ ಫಾತಿಮಾ, ಸಹ ಸಂಚಾಲಕರಾದ ಪ್ರದೀಪ್ ಕುಮಾರ್, ಕಾಲೇಜಿನ ಎಲ್ಲಾ ಪ್ರಾಧ್ಯಾಪಕರು ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಸಾರ್ವಜನಿಕರಲ್ಲಿ ವಿಜ್ಞಾನ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಲಾದ ಈ ಜಾಥಾ ಕಾಲೇಜಿನಿಂದ ಪ್ರಾರಂಭವಾಗಿ ವಿವಿ ಸರ್ಕಲ್ ಮೂಲಕ ಫ್ಯಾಕ್ಟರಿ ಸರ್ಕಲ್ ವರೆಗೆ ಸಾಗಿತು. ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಈ ಕಾರ್ಯಕ್ರಮವು ವಿಜ್ಞಾನದ ಮಹತ್ವವನ್ನು ಸಾರುವ ಜೊತೆಗೆ ವಿದ್ಯಾರ್ಥಿನಿಯರಲ್ಲಿ ಸಂಶೋಧನಾ ಮನೋಭಾವ ಬೆಳೆಸುವ ದಿಸೆಯಲ್ಲಿ ಮಹತ್ವದ ಹೆಜ್ಜೆಯಾಯಿತು.‌

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ವಿಶ್ವಮಾನವ ದಿನಾಚರಣೆ ಹಾಗೂ ಅಮರಶಿಲ್ಪಿ ಜಕಣಾಚಾರಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿ:ಬಿ.ಸಿ ಶಿವಾನಂದ ಮೂರ್ತಿ

ಸಾಹುಕಾರ್ ಚೆನ್ನಯ್ಯ ಅಂದ್ರೆ ಇವರೇ…

ಫೆ.1ರಂದು ಶಿವಳ್ಳಿ ಗ್ರಾಮದಲ್ಲಿ ಹಿಂದು ಸಮಾಜೋತ್ಸವ

Leave a Comment