ಅಂತಾರಾಷ್ಟ್ರೀಯ ವನ್ಯಜೀವಿ ತಜ್ಞರ ಮನದಾಳದ ಮಾತು
ಪಾಲನೆ ನ್ಯೂಸ್
ಮಂಡ್ಯ: ಆಪ್ತ ಸಂವಾದದ ಎರಡನೇಯ ಕಂತಿಗೆ
ಅತಿಥಿಯಾಗಿ ಸಂಜಯ್ ಗುಬ್ಬಿ ಭಾಗವಹಿಸಲಿದ್ದಾರೆ. ಮಾರ್ಚ್ 1, ಭಾನುವಾರ ನಗರದ ಗಾಂಧಿ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ.
ವನ್ಯಜೀವಿ ಸಂಶೋಧನೆ ಹಾಗೂ ಆಕ್ಟಿವಿಸಮ್ ವಲಯದಲ್ಲಿ ಮನೆಮಾತಾಗಿರುವ ಅಂತಾರಾಷ್ಟ್ರೀಯ ವನ್ಯಜೀವಿ ತಜ್ಞರೂ, ಚಿಂತಕರೂ ಆಗಿರುವ ಸಂಜಯ್ ಗುಬ್ಬಿರವರು ಕರ್ನಾಟಕ ಅರಣ್ಯ ಇಲಾಖೆ ಸಹಕಾರದಲ್ಲಿ ಕನ್ನಡ ಕರ್ನಾಟಕ ಫೌಂಡೇಷನ್ ಹಾಗೂ ಎಂಪ್ಟಿ ಪಾಕೆಟ್ ಡ್ರೀಮ್ಸ್ ನಡೆಸುತ್ತಿರುವ
ಆಪ್ತ ಸಂವಾದದ ಎರಡನೇಯ ಕಂತಿಗೆ ತಮ್ಮ ‘ಶಾಲೆಗೆ ಬಂದ ಚಿರತೆ ಮತ್ತು ಇತರ ಕಥೆಗಳು’ ಪುಸ್ತಕದ ಬಗ್ಗೆ ವಿವರವಾಗಿ ಮಾತನಾಡಲು ಬರುತ್ತಿದ್ದಾರೆ.
ಕಿರುಚಿತ್ರ ನಿರ್ದೇಶಕ ಹಾಗೂ ಲೇಖಕರಾದ ವಿನಯ್ ಕುಮಾರ್ ಎಂ.ಜಿ. ರವರು ಸಂಜಯ್‘ರವರೊಂದಿಗೆ ಸಂವಾದ ನಡೆಸಲಿದ್ದಾರೆ.


