NEWS

ಸಕ್ಕರೆ ನಗರಿಯಲ್ಲಿ ಹೂವಿನ ಲೋಕ: ಕೆ.ಆ‌ರ್.ನಂದಿನಿ

ಪಾಲನೆ ನ್ಯೂಸ್

ಮಂಡ್ಯ: ಮಂಡ್ಯದಲ್ಲಿ ಇಂದಿನಿಂದ 5 ದಿನ ಫಲಪುಷ್ಪ ಪ್ರದರ್ಶನ ಹಣ್ಣು, ತರಕಾರಿಗಳಲ್ಲಿ ಕೆತ್ತನೆ ಈ ಬಾರಿಯ ವಿಶೇಷ 12.5 ಲಕ್ಷ ಹೂಗಳಿಂದ ಸಿಂಗಾರ ಐದಾರು ಸ್ಥಳಗಳಲ್ಲಿ ಸೆಲ್ಪಿ ಪಾಯಿಂಟ್ ಜಿರಾಫೆಯ ಆಕರ್ಷಕ ಹೂವಿಕ ಆಕೃತಿ / 80 ಸಾವಿರಕ್ಕೂ ಹೆಚ್ಚು 25 ಬಗೆಯ ಅಲಂಕಾರಿಕ ಗಿಡಗಳು.

ಮಂಡ್ಯದ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಫಲಪುಷ್ಪ ಪ್ರದರ್ಶನದ ಅಂಗವಾಗಿ ಹೂವಿನ ಕುಂಡಗಳನ್ನು ಜೋಡಿಸಿರುವುದು. ಆರೋಗ್ಯ ಇಲಾಖೆಯಿಂದ ಮಗುವಿಗೆ ತಾಯಿ ಹಾಲುಣಿಸುವ ಮಹತ್ವ ಸಾರುವ ಹಾಗೂ ಸಹಜ ಹೆರಿಗೆ ಕುರಿತ ಕಲಾಕೃತಿ. ಸಾಲುಮರದ ತಿಮ್ಮಕ್ಕನ ಸಾಧನೆಯ ಅನಾವರಣ, ಅರಣ್ಯದ ಮರುಕಲ್ಪನೆ ಕಲಾಕೃತಿ. ಅಕ್ಕನ ಮನೆಯ ಮೀನು ಊಟದ ಪರಿಕಲ್ಪನೆ. ಹೂವಿನಲ್ಲೇ ರೇಷ್ಮೆ ಹುಳುವಿನ ಕಲಾಕೃತಿ. ಹೂವುಗಳಲ್ಲೇ ಮಂಡ್ಯ ಜಿಲ್ಲೆಯ ಪ್ರವಾಸಿ ತಾಣಗಳು ಮತ್ತು ದೇವಾಲಯಗಳ ಕಲಾಕೃತಿಗಳು. ಹೂವಿನಲ್ಲಿ ರೈತ ಮಹಿಳೆಯ ಕಲಾಕೃತಿ ಮತ್ತು ಕುಕ್ಕುಟ ಸಂಜೀವಿನಿ ಯೋಜನೆಯ ಕಲಾಕೃತಿ. ಬಿಸಿಯೂಟ ಕಾಠ್ಯಕ್ರಮದ ಸಂಬಂಧ ನಮ್ಮ ನಡಿಗೆ ಅಡುಗೆಮನೆ ಕಡೆಗೆ ಶೀರ್ಷಿಕೆಯಡಿ ದಪ್ಪಮೆಣಸಿನಕಾಯಿಯಲ್ಲಿ ಮನೆ ಕಲಾಕೃತಿ.

ಐದು ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಅಂದಾಜು 35 ಲಕ್ಷ ರೂ. ವೆಚ್ಚವಾಗಲಿದೆ. ಎನ್.ಆರ್.ಎಲ್.ಎಂ.ಗೆ ಸಂಬಂಧಿಸಿದ 10 ಮಳಿಗೆಗಳು, ಆಹಾರೇತರ 20 ಮಳಿಗೆಗಳು, 7 ಖಾದಿ ಮಳಿಗೆಗಳು, 5 ತೋಟಗಾರಿಕೆ ಮಳಿಗೆಗಳು ಸೇರಿದಂತೆ ಒಟ್ಟು 60 ಮಳಿಗೆಗಳು ಇರಲಿವೆ. ಸರಕಾರದಿಂದ ಈವರೆಗೆ 9 ಲಕ್ಷ ರೂ. ಬಿಡುಗಡೆಯಾಗಿದೆ.

ಫಲಪುಷ್ಪ ಪ್ರದರ್ಶನಕ್ಕೆ ಮಂಡ್ಯ ಸಜ್ಜುಗೊಂಡಿದೆ. ತೋಟಗಾರಿಕೆ ಇಲಾಖೆ ಕಚೇರಿ ಆವರಣದ ಜತೆಗೆ ಕಾವೇರಿವನ, ಭವ್ಯವನದಲ್ಲಿ ಬಗೆ ಬಗೆಯ ಪುಷ್ಪಗಳು ನಳನಳಿಸುತ್ತಿವೆ. ಆಹಾರ ಮೇಳ ಹಾಗೂ ನಾನಾ ಇಲಾಖೆಗಳ ಪ್ರದರ್ಶನ ಮಳಿಗೆಗಳು ತೆರೆದುಕೊಂಡಿವೆ.

ಪ್ರತಿ ವರ್ಷ ನಗರದ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಫಲಪುಷ್ಪ ಪ್ರದರ್ಶನ ನಡೆಯುತ್ತಿವೆ. ಮೂರಾಲ್ಕು ವರ್ಷಗಳಿಂದ ಅದು ಕಾವೇರಿವನ ಮತ್ತು ಭವ್ಯವನಕ್ಕೂ ವಿಸ್ತರಣೆಗೊಂಡಿದೆ. ಈ ವರ್ಷ ಮನರಂಜನೆ, ಮಾಹಿತಿ ಮತ್ತು ಜಾಗೃತಿ ಘೋಷಣೆಯೊಂದಿಗೆ ಈ ಬಗ್ಗೆ ಫಲಪುಷ್ಪಗಳಲ್ಲೇ ಜನರಿಗೆ ಮನರಂಜನೆಯ ಜತೆಗೆ ಸರಕಾರದ ಯೋಜನೆಗಳು, ಇಲಾಖಾ ಕಾಠ್ಯಕ್ರಮಗಳು, ಕಾನೂನು ಬಗ್ಗೆ ಮಾಹಿತಿ ನೀಡಿ ಜಾಗೃತಗೊಳಿಸುವ ಪ್ರಯತ್ನ ನಡೆದಿದೆ.

“ನಾನಾ ಜಾತಿಯ ಹಣ್ಣು-ತರಕಾರಿಗಳ ಪ್ರದರ್ಶನ, ತರಕಾರಿ ಕೆತ್ತನೆಯ ಜತೆಗೆ ಹೂವುಗಳಲ್ಲೇ ಸರಕಾರದ ನಾನಾ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಕಲಾಕೃತಿಗಳನ್ನು ನಿರ್ಮಿಸುತ್ತಿರುವುದು ಈ ಬಾರಿಯ ವಿಶೇಷವಾಗಿದೆ. ಮತದಾನದ ಬಗ್ಗೆ ಸೆಲ್ಲಿ ಪಾಯಿಂಟ್ ಗಳನ್ನು ಕಲಾಕೃತಿಯಲ್ಲಿ ಪ್ರದರ್ಶಿಸಲಾಗುತ್ತಿದೆ. ಜತೆಗೆ, ಐದಾರು ಸ್ಥಳಗಳಲ್ಲಿ ಸೆಲ್ಪಿ ಪಾಯಿಂಟ್‌ಗಳನ್ನು ಸ್ಥಾಪಿಸಲಾಗಿದೆ,” ಎಂದು ಜಿ.ಪಂ. ಸಿಇಒ ಕೆ. ಆರ್.ನಂದಿನಿ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

“ಎರಡೂವರೆ ಲಕ್ಷಕ್ಕೂ ಹೆಚ್ಚು ಹೂವುಗಳಿಂದ ಕ್ಯಾಪ್ತಿಕಂ ಮನೆ, ಜೇನಿನ ಪರಿಕಲ್ಪನೆ, ಡಾಲ್ವಿನ್, ಅಣಬೆ ಬೇಸಾಯ, ನಾನಾ ಬಗೆಯ ಹಣ್ಣುಗಳ ಮಾದರಿ ಮತ್ತು ಜಿರಾಫೆಯ ಆಕರ್ಷಕ ಹೂವಿನ ಆಕೃತಿಗಳು ಅನಾವರಣಗೊಳ್ಳಲಿವೆ. 80 ಸಾವಿರಕ್ಕೂ ಹೆಚ್ಚು 25 ಬಗೆಯ ಆಲಂಕಾರಿಕ ಗಿಡಗಳನ್ನು ಹೂಕುಂಡಗಳಲ್ಲಿ ಹಾಗೂ 50 ಸಾವಿರ ಹೂವಿನ ಸಸಿಗಳನ್ನು ಜೋಡಿಸಲಾಗುತ್ತದೆ. ಭತ್ತ ನಾಟಿ ಮಾಡುವ ಯಂತ್ರ ಮತ್ತು ರೈತ ಮಹಿಳೆಯನ್ನು ಹೂವಿನ ಕಲಾಕೃತಿಯಲ್ಲಿ ಪ್ರದರ್ಶಿಸಲಾಗುವುದು.” ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ತೋಟಗಾರಿಕೆ ಜಂಟಿ ನಿರ್ದೇಶಕಿ ಕೆ.ಎನ್.ರೂಪಶ್ರೀ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಬಿ.ಎನ್.ಸುವೇದ ಕೃಷ್ಣಕುಮಾರ್, ಜಿಲ್ಲಾ ತೋಟಗಾರಿಕೆ ಸಂಘದ ನಿರ್ದೇಶಕರು ಇದ್ದರು.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ಜನವರಿ 26ರಂದು 77ನೇ  ಗಣರಾಜ್ಯೋತ್ಸವ ದಿನಾಚರಣೆ

ಆಡಳಿತದಲ್ಲಿ ಸಿಎಂ ಸಿದ್ದರಾಮಯ್ಯ ದಾಖಲೆಗೆ ಸಂಭ್ರಮಾಚರಣೆ

ದೇಶದಲ್ಲಿ ಪೆಟ್ರೋಲ್, ಡೀಸೆಲ್ ಅಥವಾ ಎಲ್‌ಪಿಜಿ ಕೊರತೆ ಇಲ್ಲ

Leave a Comment