NEWS

ಚಿರತೆ ದಾಳಿಯಿಂದ ಮೃತಪಟ್ಟ ಯುವಕನ ನಿವಾಸಕ್ಕೆ ಮಾಜಿ ಶಾಸಕ: ರವೀಂದ್ರ ಶ್ರೀಕಂಠಯ್ಯ ಭೇಟಿ

ಪಾಲನೆ ನ್ಯೂಸ್

ಮಂಡ್ಯ : ಮಹದೇಶ್ವರ ಬೆಟ್ಟದಲ್ಲಿ ಚಿರತೆ ದಾಳಿಯಿಂದ ಮೃತಪಟ್ಟ ಮಂಡ್ಯ ತಾಲೂಕು ಚೀರನಹಳ್ಳಿ ಗ್ರಾಮದ ರವೀಂದ್ರ ಶ್ರೀಕಂಠಯ್ಯ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮಾನವ ಮತ್ತು ಪ್ರಾಣಿಗಳ ಸಂಘರ್ಷ ಹೆಚ್ಚಾಗುತ್ತಿದೆ. ಸರ್ಕಾರ ಇದಕ್ಕೆ ಪಠ್ಯಾಯವಾಗಿ ಕ್ರಮಗಳನ್ನು ಕೈಗೊಳ್ಳುವ ಮೂಲಕ ಜನಸಾಮಾನ್ಯರ ಜೀವ ಕಾಪಾಡಬೇಕಾಗಿದೆ ಎಂದರು.

ಅರಣ್ಯ ಇಲಾಖೆಗೆ ಹೆಚ್ಚಿನ ಬೋನುಗಳನ್ನು ಒದಗಿಸಬೇಕು. ಅಭಯಾರಣ್ಯದ ರೀತಿಯಲ್ಲಿ ಮಾಡಿ ಅಂತಹ ಅರಣ್ಯಗಳಿಗೆ ವನ್ಯಜೀವಿಗಳನ್ನು ಬಿಡಬೇಕು ಎಂದು ನಾನು ಶಾಸಕನಾಗಿದ್ದ ವೇಳೆ ಸದನದಲ್ಲೇ ಚರ್ಚೆ ಮಾಡಿದ್ದೆ. ಆದರೆ ಈವರೆವಿಗೂ ಅದು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜನಪ್ರತಿನಿಧಿಗಳು ಜನಸಾಮಾನ್ಯರ ಪ್ರಾಣದ ಜೊತೆಗೆ ಉದಾಸೀನ ಭಾವನೆ ತೋರುತ್ತಿದ್ದಾರೆ ಎಂದು ಆರೋಪಿಸಿದ ಅವರು, ಹೆಚ್ಚಿನ ಸಂಖ್ಯೆಯಲ್ಲಿ ಮಹದೇಶ್ವರ ಬೆಟ್ಟದ ಯಾತ್ರೆಗೆ ತೆರಳುತ್ತಾರೆ. ಅವರಿಗೆ ಸೂಕ್ತ ರಕ್ಷಣೆ ನೀಡಬೇಕು. ಸಂಬಂಧಿಸಿದ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಅದು ಬಿಟ್ಟು ನಿರ್ಲಕ್ಷತೆಯಿಂದ ನಡೆದುಕೊಳ್ಳುವುದು ಸರಿಯಲ್ಲ ಎಂದು ಹೇಳಿದರು.

ಇನ್ನೂ ಬಾಳಿ ಬದುಕಬೇಕಾದ 30 ವರ್ಷ ವಯಸ್ಸಿನ ಯುವಕ ಪ್ರಾಣ ಕಳೆದು ಕೊಂಡಿದ್ದಾನೆ. ಮನೆಗೆ ಆಧಾರವಾಗ ಬೇಕಾಗಿದ್ದ ಮಗನನ್ನು ಕಳೆದುಕೊಂಡ ತಾಯಿಯ ರೋಧನವನ್ನು ನೋಡಲಾಗದು. ಕೆಲ ದಿನಗಳ ಹಿಂದೆ ಯಲಿಯೂರು ಬಳಿ ಓರ್ವ ಮಹಿಳೆ ಮೇಲೆ ಚಿರತೆ ದಾಳಿ ನಡೆಸಿತ್ತು. ಅವರು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂತಹ ಆನೇಕ ಘಟನೆಗಳು ನಡೆಯುತ್ತಲೇ ಇವೆ. ಅರಣ್ಯ ಸಚಿವರು ಒಂದು ದಿನವಾದರೂ ಜಿಲ್ಲೆಗೆ ಭೇಟಿ ನೀಡಿ ಏನೆಲ್ಲಾ ನಡೆಯುತ್ತಿದೆ ಎಂಬುದರ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ಇಂತಹ ಘಟನೆಗಳಿಗೆ ಕಡಿವಾಣ ಹಾಕುವ ಬಗ್ಗೆ ಚಿಂತನೆ ನಡೆಸುತ್ತಿಲ್ಲ  ಎಂದು ಕಿಡಿಕಾರಿದರು.

ಉಸ್ತುವಾರಿ ಸಚಿವರಾದರೂ ಮೃತನ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಕನಿಷ್ಠ ಸಾಂತ್ವನ ಹೇಳುವ ಔದಾರ್ಯವನ್ನೂ ತೋರಲಿಲ್ಲ. ಬೋನುಗಳನ್ನು ಹೆಚ್ಚಿಗೆ ಕೊಟ್ಟು ಪ್ರಾಣಿಗಳನ್ನು ಸಾಕಲಿ, ನಾವು ಪ್ರಾಣಿಗಳ ವಿರೋಧಿಗಳಲ್ಲ, ಆದರೆ ಜನಸಾಮಾನ್ಯರೂ ಸಹ ಬದುಕಬೇಕು. ಅವರ ಜೀವವೂ ಅಮೂಲ್ಯವಾದದ್ದು ರೈತಾಪಿ ಕುಟುಂಬದಲ್ಲಿ ಈ ರೀತಿಯ ಘಟನೆ ಆಗಿರುವುದು ಬಹಳ ನೋವಾಗುತ್ತದೆ ಎಂದು ಹೇಳಿದರು.

ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ, ಧನ ಸಹಾಯ ಮಾಡುವ ಮೂಲಕ ಮಾನವೀಯತೆ ಪ್ರದರ್ಶಿಸಿದರು. ಗ್ರಾ.ಪಂ. ಮಾಜಿ ಅಧ್ಯಕ್ಷ ಡಿ. ಲಕ್ಷಣ, ಮುಖಂಡರಾದ ಪ್ರಸನ್ನ, ರಮೇಶ, ಸುರೇಶ, ಬೀರೇಶ, ನಾಗೇಶ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ಹೈಕೋರ್ಟ್ ನ್ಯಾಯಮೂರ್ತಿಗಳಿಂದ ಮದ್ದೂರು ನ್ಯಾಯಾಲಯ ಕಾಮಗಾರಿಗಳ ಪರಿಶೀಲನೆ

ಅಮರನಾಥ ಗುಹಾಂತರ ದೇವಾಲಯಕ್ಕೆ ವಾರ್ಷಿಕ ತೀರ್ಥಯಾತ್ರೆ ಜುಲೈ 3 ಆರಂಭ

ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆ

Leave a Comment