NEWS

69 ವರ್ಷದ ಮಾಜಿ ಜಡ್ಜ್ ಗೆ ಕೋಟಿ ರೂ. ಧೋಖಾ

ಪಾಲನೆ ನ್ಯೂಸ್

ಹೈದರಾಬಾದ್: ಡಿಜಿಟಲ್ ಹಗರಣಕ್ಕೆ ತುತ್ತಾಗಿರುವ ನಿವೃತ್ತ ಜಿಲ್ಲಾ ನ್ಯಾಯಾಧೀಶರೊಬ್ಬರು ಒಂದು ಕೋಟಿ ರೂಪಾಯಿಗೂ ಹೆಚ್ಚಿನ ಹಣ ಕಳೆದು ಕೊಂಡಿದ್ದಾರೆ. ಅಧಿಕಾರಿಗಳು ಎಂದು ಹೇಳಿಕೊಂಡ ಸೈಬರ್ ವಂಚಕರು ಕೆಲವು ದಿನಗಳ ಹಿಂದೆ 69 ವರ್ಷದ ಮಾಜಿ ಜಡ್ಜ್ ಮೊಬೈಲ್‌ಗೆ ಕರೆ ಮಾಡಿ ನಿಮ್ಮ ಸಂಖ್ಯೆ ಮಾನವ ಕಳ್ಳಸಾಗಾಟ ಮತ್ತಿತರ ಅಪರಾಧಗಳಲ್ಲಿ ಒಳಗೊಂಡಿದೆ ಎಂದು ಬೆದರಿಸಿದ್ದರು. ವಂಚಕರ ಬಲೆಗೆ ಬಿದ್ದ ಹೈದರಾಬಾದ್‌ನ ಮಲ್ಕಗಿರಿ ಪ್ರದೇಶದ ನಿವಾಸಿಯಾಗಿರುವ ನಿವೃತ್ತ ಜಡ್ಜ್, ಕ್ರಿಮಿನಲ್ ಗಳಿಗೆ ಒಂದು ಕೋಟಿ ರೂಪಾಯಿಗೂ ಹೆಚ್ಚಿನ ಹಣ ವರ್ಗಾಯಿಸಿದ್ದರು. ಮೋಸ ಹೋಗಿರುವುದು ಗೊತ್ತಾದ ನಂತರ ಅವರು ಮೂರು ದಿನಗಳ ಹಿಂದೆ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ.

ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ವ್ಯಾಲೆಂಟಿನಾ ಇವಾನೋವ್ ವಿರುದ್ಧ ಸುಲಭ ಜಯ‌ ಭಾರತಕ್ಕೆ ಮಣಿದ ಕಿವೀಸ್ ಬಿಜೆಕೆ ಕಪ್ ಟೆನಿಸ್

ಮೂರು ವರ್ಷಗಳಿಂದ * 8,171 ಕೋಟಿ ಸೈಬರ್ ವಂಚಕರ ಪಾಲಾಗಿದೆ

ಷೇರುಪೇಟೆ ಚೇತರಿಕೆ

Leave a Comment