NEWS

ಮೂರು ವರ್ಷಗಳಿಂದ * 8,171 ಕೋಟಿ ಸೈಬರ್ ವಂಚಕರ ಪಾಲಾಗಿದೆ

ಪಾಲನೆ ನ್ಯೂಸ್

ಬೆಂಗಳೂರು: ಬೆಂಗಳೂರಲ್ಲೇ ಶೇ.70 ಧೋಖಾ । 2023ರಿಂದ 2025ರವರೆಗೆ ರಾಜ್ಯಾದ್ಯಂತ 59,626 ಪ್ರಕರಣ ದಾಖಲು ಮೂರು ವರ್ಷದಲ್ಲಿ 8 ಸಾವಿರ ಕೋಟಿ ಸೈಬ‌ರ್ ಕಳ್ಳರ ಪಾಲು ರವಿ ನಾಯಕ್ ಬೆಂಗಳೂರು ರಾಜ್ಯದಲ್ಲಿ ಮೂರು ವರ್ಷಗಳಿಂದ * 8,171 ಕೋಟಿ ಸೈಬರ್ ವಂಚಕರ ಪಾಲಾಗಿದೆ. ಆ ಪೈಕಿ ಶೇ.60 ಪ್ರಕರಣಗಳು ರಾಜಧಾನಿ ಬೆಂಗಳೂರಿನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ಇತ್ತೀಚೆಗೆ ಕೂಲಿ ಕಾರ್ಮಿಕರಿಂದ ಹಿಡಿದು ದೊಡ್ಡ, ದೊಡ್ಡ ವ್ಯವಹಾರ, ಉದ್ಯಮ ಹೊಂದಿದವರು ಆನ್‌ಲೈನ್‌ನಲ್ಲೇ ಹಣಕಾಸು ವ್ಯವಹಾರ ನಡೆಸುತ್ತಿದ್ದಾರೆ. ಖಾತೆದಾರರ ಅರಿವಿಲ್ಲದೆ ಕ್ಷಣಾರ್ಧದಲ್ಲೇ ಹಣ ಕಡಿತವಾಗುತ್ತಿರುವುದರಿಂದ ಖಾಸಗಿ ಕಂಪನಿ, ಉದ್ಯಮಿಗಳು, ಸಾಫ್ಟ್‌ವೇರ್ ಇಂಜಿನಿಯರ್‌ಗಳು ಆತಂಕಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. 2023ರಿಂದ 2025ರವರೆಗೆ 59,626 ಎಫ್‌ ಐ ಆರ್‌ ಗಳು ದಾಖಲಾಗಿವೆ. ಎಲ್ಲಿ? ಎಷ್ಟು ವಂಚನೆ?: ಬೆಂಗಳೂರು ನಗರದಲ್ಲಿ ಪ್ರತಿದಿನ ಹತ್ತಾರು ಕೋಟಿ ರೂ. ಸೈಬರ್ ವಂಚಕರ ಖಾತೆಗಳಿಗೆ ಜಮೆಯಾಗುತ್ತಿದೆ. 2023ರಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದಾಖಲಾಗಿರುವ 22,255 ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ 17,818 (ಶೇ. 80.6) ಎಫ್ ಐಆರ್‌ಗಳು ದಾಖಲಾಗಿವೆ.

2024ರಲ್ಲಿ ಒಟ್ಟು 22.482 ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ 17,865 (ಶೇ.79.47), 2025ರಲ್ಲಿ 14,889 ಎಫ್‌ಐಆರ್‌ಗಳ ಪೈಕಿ 10,668 (ಶೇ 71.65) ಪ್ರಕರಣಗಳು ಬೆಂಗಳೂರಲ್ಲಿ ದಾಖಲಾಗಿವೆ. ಪ್ರಸಕ್ತ ಸಾಲಿನ 2026 ಜನವರಿ ಅಂತ್ಯದವರೆಗೆ 1,259 ಸೈಬರ್ ಕ್ರೈಂಗೆ ಸಂಬಂಧಿಸಿದಂತೆ ಪ್ರಕರಗಳು ದಾಖಲಾಗಿದೆ. ದೂರು ನೀಡುವುದು ವಿಳಂಬವಾದರೆ ಪತ್ತೆ ಕಷ್ಟ: ಸೈಬರ್ ವಂಚನೆ ವಿಶ್ವವನ್ನೇ ಆವರಿಸಿದೆ. ವಂಚಕರು ವಿಪಿಎನ್, ಪ್ರಾಕ್ಸಿ, ಟಿಒಆರ್ ಗಳಂತಹ ತಂತ್ರಜ್ಞಾನ ಬಳಸಿ ಐಪಿ ವಿಳಾಸ, ಸ್ಥಳವನ್ನು ಮರೆಮಾಚುತ್ತಿದ್ದಾರೆ. ನಕಲಿ ಬ್ಯಾಂಕ್ ಖಾತೆ ಮತ್ತು ನಕಲಿ ಸಿಮ್ ಕಾರ್ಡ್‌ಗಳನ್ನು ಬಳಸಿ ವ್ಯವಹಾರ ನಡೆಸುತ್ತಿದ್ದಾರೆ.

ವಿಒಐಪಿ, ಡಾರ್ಕ್ ವೆಬ್ ಮತ್ತು ಅನ್ಯ ಮಾರ್ಗಗಳಿಂದ ಡಿಜಿಟಲ್ ಪುಟ್‌ ಪ್ರಿಂಟ್ ತಂತ್ರಜ್ಞಾನ ಬಳಕೆ. ವಂಚನೆ ಮಾಡಿರುವ ನೂರಾರು ಕೋಟಿ ರೂಪಾಯಿಯನ್ನು ಕ್ರಿಪ್ಲೋ ಕರೆನ್ಸಿ, ಇ ವ್ಯಾಲೇಟ್, ಗಿಫ್ಟ್ ಕಾರ್ಡ್‌ಗಳ ಮೂಲಕ ವರ್ಗಾವಣೆ ಮಾಡಿಕೊಳ್ಳುತ್ತಿರುವುದು ಇಲಾಖೆ ಪತ್ತೆಗೆ ಕಷ್ಟಕರವಾಗುತ್ತಿದೆ. ಸೈಬ‌ರ್ ವಂಚನೆಗೆ ಒಳಗಾಗುವ ಸಂತ್ರಸ್ತರು ದೂರು ನೀಡಲು ವಿಳಂಬ ಮಾಡುತ್ತಿರುವುದರಿಂದ ಶೇ.90 ಪ್ರಕರಣಗಳಲ್ಲಿ ವಂಚನೆಯ ಹಣ ಬೇರೆ ಖಾತೆಗೆ ವರ್ಗಾವಣೆ ಯಾಗುತ್ತಿದೆ. ಸೈಬರ್ ವಂಚನೆ ವಿಭಜಿತ ರೀತಿಯಲ್ಲಿ ನಡೆಯುತ್ತಿದೆ. ಒಬ್ಬರನ್ನು ಬಂಧಿಸಿದರೂ ಮತ್ತೊಂದು ಗುಂಪು ಅಥವಾ ಜಾಲ ಪತ್ತೆಯಾಗುವುದಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ನಕಲಿ ಡಿಜಿಟಲ್ ಗುರುತು ಬಳಕೆಯಿಂದ ನಿಜವಾದ ವ್ಯಕ್ತಿ ಪತ್ತೆ ಕಷ್ಟ. ವಂಚನೆ ನಿಯಂತ್ರಣಕ್ಕೆ ಇಲಾಖೆ ಕ್ರಮ ರಾಜ್ಯದಲ್ಲಿ ಸಿಐಡಿ ಮತ್ತು ಬೆಂಗಳೂರು ನಗರ ಸೇರಿ ಒಟ್ಟು 45 ಸೈಬರ್ ಕ್ರೈಂ ಪೊಲೀಸ್ ಠಾಣೆಗಳು (ಸಿಸಿಪಿಎಸ್) ಕರ್ತವ್ಯ ನಿರ್ವಹಿಸುತ್ತಿವೆ. ಈ ಠಾಣೆಗಳು ಸೈಬರ್ ಅಪರಾಧಗಳ ತನಿಖೆಗೆ ಮಾತ್ರ ಮೀಸಲಾಗಿದ್ದು ಡಿಜಿಪಿ ಸೈಬರ್ ಕಮಾಂಡ್ ಅವರನ್ನು ಇವುಗಳ ಕಮಾಂಡಿಂಗ್ ಅಧಿಕಾರಿಯನ್ನಾಗಿ ನಿಯೋಜಿಸಲಾಗಿದೆ. ಸೈಬರ್ ಪ್ರಕರಣ ಇತ್ಯರ್ಥಕ್ಕೆ ಸಿಐಡಿ ಕಚೇರಿಯಲ್ಲಿ ಈಗಾಗಲೇ ಸಿಎಫ್‌ಯು ( ಸೈಬರ್ ಫಾರೆನ್ಸಿಕ್ ಯುನಿಟ್) ವಿಭಾಗ ಹೊಂದಿದೆ. ಅಲ್ಲದೆ ‘ಸೆಂಟರ್‌ ಫಾರ್ ಸೈಬರ್‌ ಕ್ರೈಂ ಇನ್ವೆಸ್ಟಿಗೇಷನ್ ಟ್ರೈನಿಂಗ್ ಆ್ಯಂಡ್ ರಿಸರ್ಚ್’ ಘಟಕ ಆರಂಭಿಸಲಾಗಿದೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಚಾ.ಬೆಟ್ಟದಲ್ಲಿ ಕಾಮಗಾರಿ ನಿಲ್ಲಿಸಲು ಹಿಂದೂಪರ ಸಂಘಟನೆ ಸದಸ್ಯರು, ಚಾಮುಂಡಿಬೆಟ್ಟ ಗ್ರಾಮಸ್ಥರ ಆಗ್ರಹ

ಜಿಲ್ಲಾಧಿಕಾರಿಗಳಿಂದ ಕೆ.ಆರ್.ಪೇಟೆ ಪುರಸಭೆ ವ್ಯಾಪ್ತಿಯ ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ ಮತ್ತು ಪರಿಶೀಲನೆ

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಭಾರತ ಕಿರುಚಿತ್ರ ಸ್ಪರ್ಧೆ-2026

Leave a Comment