NEWS

ಸರ್ಕಾರಿ ಪ್ರೌಢಶಾಲೆಯಲ್ಲಿ ವಾಮಾಚಾರ‌ ಮಾಡಿದ ಕಿಡಿಗೇಡಿಗಳು

ಪಾಲನೆ ನ್ಯೂಸ್


ಕುರುಗೊಡು (ಬಳ್ಳಾರಿ): ತಾಲೂಕಿನ ಎಚ್. ವೀರಾಪುರದ ಶಾಲೆಯಲ್ಲಿ ಕಿಡಿಗೇಡಿಗಳು
ವಾಮಾಚಾರ ಮಾಡಿದ್ದು ಮಕ್ಕಳು-ಗ್ರಾಮಸ್ಥರು ಭಯಭೀತರಾಗಿದ್ದಾರೆ. ಗ್ರಾಮದ ಹೊರವಲಯದಲ್ಲಿರುವ ಸರ್ಕಾರಿ ಪ್ರೌಢ ಶಾಲೆ ಮುಂಭಾಗ ಮತ್ತು ತರಗತಿಯ ಬಳಿ ತಡರಾತ್ರಿ ಕಿಡಿಗೇಡಿಗಳು ಕುಂಡಲಿ ಬರೆದು, ನಿಂಬೆ ಹಣ್ಣು, ಕುಂಕುಮ, ಭಂಡಾರ, ವಿಚಿತ್ರ ಆಕಾರದ ಗೊಂಬೆ ಬಳಸಿ ವಾಮಾಚಾರ ನಡೆಸಿದ್ದಾರೆ. ಶಿಕ್ಷಕರು ಬೆಳಗ್ಗೆ ಶಾಲೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಭಯಪಡಿಸುವ ಉದ್ದೇಶದಿಂದ ಕಿಡಿಗೇಡಿಗಳು ಈ ಕೃತ್ಯ ಮಾಡಿರಬಹುದು. ಆದರೆ ಮಕ್ಕಳಿಗೆ ಈ ಬಗ್ಗೆ ಅರಿವು ಮೂಡಿಸಲಾಗಿದೆ ಎಂದು ಮುಖ್ಯಶಿಕ್ಷಕ ಕೊಟ್ರೇಶ ತಿಳಿಸಿದ್ದಾರೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಶಾಸಕರಿಂದ ರಸ್ತೆ ಕಾಮಗಾರಿಗೆ ಭೂಮಿಪೂಜೆ

ಅಮೆರಿಕ ವಶಪಡಿಸಿಕೊಂಡ ರಷ್ಯಾದ ಹಡಗಿನಲ್ಲಿ ಮೂವರು ಭಾರತೀಯರು; ಬಿಡುಗಡೆಗೆ ಮನವಿ

ಫೆ. 16 ಮತ್ತು 17ರಂದು ಗಾಂಧಿ ಗ್ರಾಮ ಭಾರತ ಮರಳಿಹಳ್ಳಿಗೆ ಗಾಂಧೀಜಿ ಮತ್ತು ಗ್ರಾಮಸ್ವರಾಜ್ ಕುರಿತು ಚಿಂತನ -ಮಂಥನ ಕಾರ್ಯಕ್ರಮ

Leave a Comment