NEWS

ಮತದಾರರ ಪಟ್ಟಿಯ ಮ್ಯಾಪಿಂಗ್ ಮತ್ತು ವಿಶೇಷ ಪರಿಷ್ಕರಣೆ

ಮತದಾರರ ಪಟ್ಟಿಯಲ್ಲಿರುವ ಲೋಪವನ್ನು ಸರಿಪಡಿಸಲು ಸಮರ್ಪಕವಾಗಿ ಮನೆವಾರು ಮ್ಯಾಪಿಂಗ್ ಮಾಡುವಂತೆ ಸೂಚನೆ

ಪಾಲನೆ ನ್ಯೂಸ್

ಮಂಡ್ಯ: ಭಾರತೀಯ ಚುನಾವಣಾ ಆಯೋಗವು (ECI) ದೇಶಾದ್ಯಂತ ಮತದಾರರ ಪಟ್ಟಿಯ ನೈಜತೆಯನ್ನು ಕಾಪಾಡಲು ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ಮಾಡಲು ತಿಳಿಸಿದ್ದು ಮತದಾರರ ಪಟ್ಟಿಯ ಮ್ಯಾಪಿಂಗ್ ಮತ್ತು ವಿಶೇಷ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ ಕುಮಾರ ಅವರು ತಿಳಿಸಿದರು.

ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮತದಾರರ ಪಟ್ಟಿಯ ಮ್ಯಾಪಿಂಗ್ ಮತ್ತು ವಿಶೇಷ ಪರಿಷ್ಕರಣೆ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದರು.

ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ-ಮನೆಗೆ ಭೇಟಿ ನೀಡಿ ಮತದಾರರ ವಿವರಗಳನ್ನು ಪರಿಶೀಲಿಸಿ ಮತದಾರರ ಮ್ಯಾಪಿಂಗ್ ಪ್ರಕ್ರಿಯೆ ಮಾಡಬೇಕು ಎಂದು ಅವರು ತಿಳಿಸಿದರು.

ಮತದಾರರ ಪಟ್ಟಿಯಲ್ಲಿರುವ ತಪ್ಪುಗಳನ್ನು ಸರಿಪಡಿಸಲು ಬೀದಿವಾರು ಮತ್ತು ಮನೆವಾರು ಮ್ಯಾಪಿಂಗ್ ಮಾಡುವಂತೆ ತಿಳಿಸಿದರು.

ಮಂಡ್ಯ ಜಿಲ್ಲೆಯಲ್ಲಿ 15,83,368 ಮತದಾರರು ಇದ್ದು 12,92,681 ಮತದಾರರ ಮ್ಯಾಪಿಂಗ್ ಆಗಿದ್ದು 2,90,687 ಮತದಾರರ ಮ್ಯಾಪಿಂಗ್ ಆಗಬೇಕಾಗಿದ್ದು ಶೇ 81.64 ಸಾಧನೆ ಮಾಡಲಾಗಿದೆ ಎಂದು ಅವರು ತಿಳಿಸಿದರು

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ. ಸಿ. ಶಿವನಂದಾಮೂರ್ತಿ, ಮಂಡ್ಯ ಉಪ ವಿಭಾಗಾಧಿಕಾರಿ ಶಿವಮೂರ್ತಿ, ಪಾಂಡವಪುರ ಉಪ ವಿಭಾಗಧಿಕಾರಿ ಶ್ರಿನಿವಾಸ್ ಹಾಗೂ ತಹಸೀಲ್ದಾರ್ ಉಪಸ್ಥಿತರಿದ್ದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಜನವರಿ 31ರೊಳಗೆ ಎಲ್ಲಾ ಗ್ರಾ ಪಂ ಗಳಲ್ಲಿ ಸುಸಜ್ಜಿತ ಅಭಿಲೇಖಾಲಯ ನಿರ್ವಹಣೆ ಮಾಡಲು ಸೂಚನೆ: ಜಿ ಪಂ ಸಿಇಓ ನಂದಿನಿ ಕೆ ಆರ್

ಎಚ್.ಡಿ.ಕುಮಾರಸ್ವಾಮಿ ಸಚಿವರಾಗಿ ಕಾರ್ಯನಿರ್ವಹಿಸಲು ಮಂಡ್ಯ ಜಿಲ್ಲೆಯ ಜನತೆ ಕಾರಣ : ನಿಖಿಲ್

ಕೊಡಗಿನ ಅರಣ್ಯದಲ್ಲಿ ನಾಪತ್ತೆಯಾಗಿದ್ದ ಯುವತಿ ಪತ್ತೆ ಪ್ರಕರಣ

Leave a Comment