NEWS

ಶ್ರೀ ಭೂಮಿ ಸಿದ್ದೇಶ್ವರ ದೇಗುಲ ನೂತನ ನಿರ್ದೇಶಕ ಜಗದೀಶ್ ಗೆ ಶಾಸಕರ ಅಭಿನಂದನೆ

ಪಾಲನೆ ನ್ಯೂಸ್
ಮಂಡ್ಯ: ಸಂತೆ ಕಸಲಗೆರೆ ಶ್ರೀ ಭೂಮಿ ಸಿದ್ದೇಶ್ವರ ದೇವಸ್ಥಾನದ ಅಭಿವೃದ್ಧಿ ಸಮಿತಿಯ ನೂತನ ನಿರ್ದೇಶಕರಾಗಿ ಹೆಚ್ಚಿನ ಮತಗಳಿಂದ ಚುನಾಯಿತರಾಗಿರುವ ಸಂತೆ ಕಸಲಗೆರೆ ಕೆ.ಟಿ. ಜಗದೀಶ್ ರವರು ಬೆಂಗಳೂರಿನ 37 ಕ್ರೆಸೆಂಟ್ ಹೋಟೆಲ್ ನಲ್ಲಿ ಚೆಸ್ಕಾಂನ ಅಧ್ಯಕ್ಷರು ಹಾಗೂ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಶಾಸಕರು ನೂತನ ನಿರ್ದೇಶಕ ಕೆ.ಟಿ. ಜಗದೀಶ್ ಅವರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ತಗ್ಗಳ್ಳಿ ವೆಂಕಟೇಶ್, ಮನ್ ಮುಲ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಬೋರೇಗೌಡ, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ಸಂಘಟನಾ ಕಾರ್ಯದರ್ಶಿ  ಬೇಲೂರು ದೇವೇಗೌಡ ಉಪಸ್ಥಿತರಿದ್ದರು.

Related posts

ಕವಿತೆಯ ಆತ್ಮವನ್ನು ಅರಸುತ್ತಆಲಂಗಿಸಿಕೊಂಡ ಅಡಿಗರು

ಪಶ್ಚಿಮ ಬಂಗಾಳದಲ್ಲಿ ಶೇ. 92.72ರಷ್ಟು ಮತದಾನ

ದೇಶದಲ್ಲಿ ಪೆಟ್ರೋಲ್, ಡೀಸೆಲ್ ಅಥವಾ ಎಲ್‌ಪಿಜಿ ಕೊರತೆ ಇಲ್ಲ

Leave a Comment