NEWS

ದರ ಏರಿಸುವ ಪ್ರಸ್ತಾವನೆ ಸದ್ಯಕ್ಕೆ ಇಲ್ಲ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಪಾಲನೆ ನ್ಯೂಸ್

ಬೆಂಗಳೂರು : ಸದ್ಯಕ್ಕೆ ಸಾರಿಗೆ ಬಸ್‌ಗಳ ಪ್ರಯಾಣ ದರ ಹೆಚ್ಚಳ ಮಾಡಲ್ಲ. ಆ ಕುರಿತ ಪ್ರಸ್ತಾವನೆಯೂ ಇಲ್ಲ. ಇನ್ನು ಮುಂದೆ ದರ ಹೆಚ್ಚಳದ ಕುರಿತು ಸರ್ಕಾರ ಎಂದು ಮಧ್ಯಪ್ರವೇಶಿಸಲ್ಲ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ‌

ದರ ಹೆಚ್ಚಳ ಕುರಿತಂತೆ ಜಾಲ ತಾಣದಲ್ಲಿನ ವದಂತಿ ಕುರಿತಂತೆ ಪ್ರತಿಕ್ರಿಯಿ ಸಿರುವ ರಾಮಲಿಂಗಾರೆಡ್ಡಿ, ಕಳೆದ ವರ್ಷ ವಷ್ಟೇ ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ. ಹೀಗಿರುವಾಗ ಮತ್ತೆ ಪ್ರಸ್ತಾ ವನೆ ಸರ್ಕಾರದ ಮುಂದಿಲ್ಲ. ವದಂತಿಗಳಿಗೆ ಜನರು ಕಿವಿಗೊ ಡಬಾರದು ಎಂದರು. ಇನ್ನು ಮುಂದೆ ದರ ಹೆಚ್ಚಳದಲ್ಲಿ ಸರ್ಕಾರ ಮಧ್ಯ ಪ್ರವೇಶಿಸುವುದಿಲ್ಲ. ಅದಕ್ಕಾಗಿಯೇ ದರ ನಿಯಂತ್ರಣ ಸಮಿತಿ ರಚಿಸಲಾಗುತ್ತದೆ.

ಆ ಸಮಿತಿಯು ನಿಗಮಗಳ ಖರ್ಚು-ರೂಪಿ ವೆಚ್ಚವನ್ನಾಧರಿಸಿ ಹೆಚ್ಚಳದ ನಿರ್ಧಾರ ಮಾಡಲಿದೆ. ಅದಕ್ಕೆ ಅಗತ್ಯ ಮಾನದಂಡಗಳನ್ನು ಸಲಾಗುವುದು. ಅದರಂತೆ ಹೆಚ್ಚ ಳವಾಗಲಿದೆ. ದರ ನಿಯಂತ್ರಣ ಸಮಿತಿ ರಚಿಸಿ 6 ತಿಂಗಳು ಕಾಲಾವಕಾಶ ನೀಡಲಾಗುತ್ತದೆ. ಅಲ್ಲಿಯವರೆಗೆ ಏರಿಕೆ ಕುರಿತು ಯಾವುದೇ ಚರ್ಚೆ ಮಾಡಲ್ಲ ಎಂದರು. 2014ರಲ್ಲಿ ಬಿಎಂಟಿಸಿಯಲ್ಲಿ ದರ ಏರಿಕೆ ಮಾಡಲಾಗಿತ್ತು. 2020ರಲ್ಲಿ ಉಳಿದಮೂರು ನಿಗಮಗಳಲ್ಲಿ ಪ್ರಯಾಣ ದರ ಹೆಚ್ಚಿಸಲಾಗಿತ್ತು. ಅದಾದ ನಂತರ ಕಳೆದ ವರ್ಷ ಟಿಕೆಟ್ ದರ ಹೆಚ್ಚಿಸಲಾಗಿದೆ. ಆದರೆ, ಸಂಸ್ಥೆಗಳ ವೆಚ್ಚಗಳು ಹೆಚ್ಚಾದಂತೆ ಸ್ವಲ್ಪ ದರ ಹೆಚ್ಚಳಮಾಡಿದರೆ, ಜನರಿ ಸಮಸ್ಯೆಯಾಗುವುದಿಲ್ಲ ಎಂದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಟಿ20ಟೂರ್ನಿ: 2026ರ ಚಾಂಪಿಯನ್

ಪರಿಚಯ ಪ್ರಕಾಶನ ‘ಒಡಲು ಮತ್ತು ಸೃಷ್ಟಿ’ ಬಿಡುಗಡೆ ನಾಳೆ

ಅಕ್ಕರೆಯ ಅಂಗಳ ಬೇಸಿಗೆ ಶಿಬಿರಕ್ಕೆ ಚಾಲನೆ : ಕೆ.ಆರ್. ನಂದಿನಿ

Leave a Comment