NEWS

ಶ್ರೀ ಜಗಜ್ಯೋತಿ ಬಸವೇಶ್ವರ ಪತ್ತಿನ ಸಹಕಾರ ಸಂಘದ ಸೌಹಾರ್ದ ಬಸವ ಜ್ಯೋತಿ ಕಾರ್ಯಕ್ರಮ

ಪಾಲನೆ ನ್ಯೂಸ್

ಮಂಡ್ಯ: ನಗರದ ಗಾಂಧಿ ಭವನದಲ್ಲಿ ಮಂಡ್ಯ ಜಿಲ್ಲಾ ಶ್ರೀ ಜಗಜ್ಯೋತಿ ಬಸವೇಶ್ವರ ಪತ್ತಿನ ಸಹಕಾರ ಸಂಘದ ವತಿಯಿಂದ ಮನೆ ಮನೆಗೆ ಸೌಹಾರ್ದ ಬಸವ ಜ್ಯೋತಿ ಕಾರ್ಯಕ್ರಮದ ಪ್ರತಿ ತಿಂಗಳು ನಡೆಯುವ ಆಧ್ಯಾತ್ಮಿಕ ಕಾರ್ಯಕ್ರಮದ 166 ನೇ ಕಾರ್ಯಕ್ರಮವು ಕುಂದೂರು ಬೆಟ್ಟ, ತೆಂಕಳ್ಳಿ ಗ್ರಾಮದ ಶ್ರೀರಸಸಿದ್ದೇಶ್ವರ ಬೆಟ್ಟದ ಮಠಾಧೀಶರಾದ ಶ್ರೀ ನಂಜುಂಡಸ್ವಾಮಿ ರವರ ಅಧ್ಯಕ್ಷತೆಯಲ್ಲಿ ಜರುಗಿತು. ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಜಿಲ್ಲಾಧ್ಯಕ್ಷರಾದ ಎಸ್. ನಾಗರಾಜುರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುವುದರ ಜೊತೆಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಧಾರ್ಮಿಕ ನುಡಿಗಳನ್ನು ಆಡಿದರು. ಸಂಘದ ಉಪಾಧ್ಯಕ್ಷ ಡಿ. ದೇವಣ್ಣ , ಹೆಚ್. ಸಿ.ಶಿವಕುಮಾರ್, ಸಿ.ಎಸ್. ಮೋಹನ್, ದೇವನೂರು ಜಗದೀಶ್, ಸಿ.ಎಂ ಪುಟ್ಟ ಬುದ್ಧಿ ಮಹದೇವಸ್ವಾಮಿ, ಮಹೇಶ್ ಕುಮಾರ್, ಮಧುಸೂದನ್, ಎಸ್. ಮಂಜು, ರುದ್ರಸ್ವಾಮಿ, ಕೆಂಪಯ್ಯ, ಶಕುಂತಲಾ, ಹೊನ್ನಮ್ಮ, ಹಾಗೂ ಹಿರಿಯ ಪತ್ರಕರ್ತರಾದ ಎಲ್ ಬಸವೇಗೌಡ ರವರು ಹಾಜರಿದ್ದರು. ಕಾರ್ಯಕ್ರಮದ ನಂತರ ಭಕ್ತಾದಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ವಿನಿಯೋಗಿಸಲಾಯಿತು. ಚಿತ್ರ: ಕೆ.ವೇಣುಗೋಪಾಲ್,ಮಂಡ್ಯ.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ಯುಗಾದಿ ʻರಂಗೋಲಿ ಸ್ಪರ್ಧೆʼ

ಇಂದಿರಾ ಕಿಟ್ ವಿತರಿಸಲು ಸಿಎಂ ಘೋಷಣೆ

ಜ.30 ರಂದು ಪ್ರತಿಭಟನೆ: ಹೊರ ಗುತ್ತಿಗೆ ನೌಕರರ ಎಚ್ಚರಿಕೆ

Leave a Comment