ಪಾಲನೆ ನ್ಯೂಸ್
ನವದೆಹಲಿ : ಮಾರುಕಟ್ಟೆಯಲ್ಲಿನ ಏರಿಳಿತಗಳಿಂದಾಗಿ ಬುಧವಾರ ಚಿನ್ನದ ಬೆಲೆ ₹1,500 ಕುಸಿತ ಕಂಡು 10 ಗ್ರಾಂಗೆ ₹1,52,800 ಆಗಿದೆ.ಮಂಗಳವಾರ ಇದು ₹1,54,300 ಇತ್ತು. ಬೆಳ್ಳಿ ಬೆಲೆ ಕಿಲೋಗೆ ₹500 ಏರಿಕೆ ಆಗಿದ್ದು, ₹2,44,500ಕ್ಕೆ ತಲುಪಿದೆ. ₹2,44,000 ಇತ್ತು. ಕಚ್ಚಾ ತೈಲ ಬೆಲೆ ಏರಿಕೆಯಿಂದ ಉಂಟಾಗಿರುವ ಹಣದುಬ್ಬರದ ಭೀತಿ ಹಾಗೂ ಲಾಭಾಂಶ ಬುಕಿಂಗ್‌ನಿಂದಾಗಿ ಹಳದಿ ಲೋಹದ ಬೆಲೆಯಲ್ಲಿ ಕುಸಿತ ದಾಖಲಾಗಿದೆ ಎಂದು ಅಖಿಲ ಭಾರತ ಸರಾಫ ಸಂಘ ತಿಳಿಸಿದೆ.

ಜಾಗತಿಕ ಜಾಗತಿಕ ಚಿನ್ನದ ಬೇಡಿಕೆ ಶೇ. 2 ಹೆಚ್ಚಳ ವಿಶ್ವ ಚಿನ್ನದ ಮಂಡಳಿಯ ವರದಿಯಂತೆ, 20268 ಮೊದಲ ತ್ರೈಮಾಸಿಕದಲ್ಲಿ ಜಾಗತಿಕ ಚಿನ್ನದ 3. ಬೇಡಿಕೆ 1,231 ಟನ್‌ಗೆ ಏರಿಕೆಯಾಗಿದ್ದು, 2ರಷ್ಟು ವೃದ್ಧಿ ಕಂಡಿದೆ. ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ಸುರಕ್ಷಿತ ಹೂಡಿಕೆಯಾಗಿ ಚಿನ್ನದ ಬಾರ್ ಮತ್ತು ನಾಣ್ಯಗಳ ಖರೀದಿ ಶೇ. 42ರಷ್ಟು ಜಿಗಿದಿದೆ. ಆದರೆ, ದಾಖಲೆ ಮಟ್ಟದ ಬೆಲೆ ಏರಿಕೆಯಿಂದಾಗಿ ಆಭರಣಗಳ ಬೇಡಿಕೆ ಶೇ. 23ರಷ್ಟು ಕುಸಿದಿದೆ. ಇದೇ ಅವಧಿಯಲ್ಲಿ ಆರ್‌ಬಿಐ 300 ಕೆ.ಜಿ. ಚಿನ್ನ ಖರೀದಿಸಿ ತನ್ನ ಮೀಸಲು ಸಂಗ್ರಹ ಹೆಚ್ಚಿಸಿಕೊಂಡಿದೆ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
