ಪಾಲನೆ ನ್ಯೂಸ್
ಮೈಸೂರು: ಮರ ಸಂರಕ್ಷಣಾ ಸಮಿತಿ ರಚನೆಗೆ ಡಿಸಿಎಫ್ ಪರಮೇಶ್ವರ್ ಅವರಿಗೆ ಮೈಸೂರು ಗ್ರಾಹಕರ ಪರಿಷತ್ ನಿಯೋಗ ಮನವಿ ಮಾಡಿದೆ. ಅರಣ್ಯ ಭವನದಲ್ಲಿ ಡಿಸಿಎಫ್ ಅವರನ್ನು ಭೇಟಿ ಮಾಡಿದ ನಿಯೋಗವೂ ಹಸಿರು ಮೈಸೂರು ನಿರ್ಮಾಣ ಸಂಬಂಧ ಚರ್ಚೆ ನಡೆಸಿತು.
ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆ ವಾತಾವರಣ ಜೊತೆಗೆ ಅಭಿವೃದ್ಧಿಯ ಹೆಸರಲ್ಲಿ ಮರಗಳ ತೆರವು ರಸ್ತೆ ಅಗಲೀಕರಣದಿಂದ ಪರಿಸರ ನಾಶವಾಗುತ್ತಿರುವ ಬಗ್ಗೆ ಗಮನಸೆಳೆದರು. ಟೀ ಕಮಿಟಿಮಾಡಿದರೆ ಮೈಸೂರಿನಲ್ಲಿ ನಡೆಯುತ್ತಿರುವ ಪರಿಸರ ನಾಶವನ್ನು ತಡೆಯಬಹುದಾಗಿದೆ ಎಂದು ಹೇಳಿದರು. ಟೀಕಮಿಟಿ ರಚನೆ ಸಂಬಂಧ ಸರ್ಕಾರ ಕ್ಕೆ ಮನವಿ ಸಲ್ಲಿಸಲಾಗುವುದು.

ಈ ಸಂಬಂಧ ನಾಗರಿಕರ ಸಭೆ ಕರೆದು ಚರ್ಚಿಸುವುದಾಗಿಯೂ ಪರಮೇಶ್ವರ್ ಅವರು ಭರವಸೆ ನೀಡಿದರು. ಮೈಗ್ರಾಪ ಅಧ್ಯಕ್ಷ ರಾಯ ಜೋಸೆಫ್, ನಿವೃತ್ತ ಮೇಜರ್ ಜನರಲ್ ಒಂಬತ್ತೆರೆ, ಸಂಸ್ಥಾಪಕ ಭಾಮಿ ವಿ. ಶೆಣೈ ಹಾಗೂ ಸಂಚಾಲಕ ಡಿ.ವಿ. ದಯಾನಂದ್ ಸಾಗರ್ ಭಾಗವಹಿಸಿದ್ದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

