ಪಾಲನೆ ನ್ಯೂಸ್
ಮೈಸೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕುವೆಂಪು ಮತ್ತು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಸಂಪಾದಕತ್ವದಲ್ಲಿ ಪ್ರಕಟಗೊಂಡ ಕುಮಾರವ್ಯಾಸ ಮಹಾಕವಿಯ ಕರ್ಣಾಟ ಭಾರತ ಕಥಾಮಂಜರಿ ಕೃತಿಯು 38 ವರ್ಷಗಳ ಬಳಿಕ ಮರು ಮುದ್ರಣಗೊಂಡಿದೆ. ಕನ್ನಡ ಸಾಹಿತ್ಯ ಜಿಜ್ಞಾಸುಗಳು, ವಿದ್ವಾಂಸರು, ಸಂಗೀತಗಾರರು, ಗಮಕಿಗಳು, ಕಥೆಗಾರರ ಬಹುಮುಖ್ಯ ಬೇಡಿಕೆಯಾದ ಈ ಮಹತಿಯನ್ನು ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗವೂ ಅತ್ಯಾಸಕ್ತಿ ಯಿಂದ ಮರುಮುದ್ರಣಗೊಳಿಸಿ ಓದುಗ ರಿಗೆ ಲಭ್ಯವಾಗುವಂತೆ ಮಾಡಿದೆ.
ಕುಮಾರವ್ಯಾಸ ಕವಿಯ ಬಗೆಗೆ ವಿದ್ಯಾರ್ಥಿ ದಿಸೆಯಿಂದಲೂ ಅಧ್ಯಯನ ನಿರತರಾದ ವಿದ್ವಾಂಸ ಪ್ರೊ.ಕೃಷ್ಣಮೂರ್ತಿ ಹನೂರುಮತ್ತುಕುಮಾರವ್ಯಾಸ ಭಾರತದ ಎರಡೂವರೆ ಸಾವಿರ ಪದ್ಯಗಳನ್ನು ಇಂಗ್ಲಿಷಿಗೆ ಅನುವಾದಿಸಿದ ಅಮೆರಿಕದ ಪ್ರಾಧ್ಯಾಪಕ ಪ್ರೊ.ಎಸ್.ಎನ್.ಶ್ರೀಧರ್ ಮತ್ತು ಪ್ರಸಾರಾಂಗದ ಕ್ರಿಯಾಶೀಲ ನಿರ್ದೇಶಕ ಡಾ.ಎಂ.ನಂಜಯ್ಯ ಹೊಂಗನೂರು ಅವರ ಸಮಾಗಮದಿಂದಾಗಿ ಈ ಸತ್ಕಾರ್ಯ ನೆರವೇರಿದೆ. ಕರ್ಣಾಟ ಭಾರತ ಕಥಾಮಂಜರಿ ಕೃತಿಯ ಮರುಮುದ್ರಣಕ್ಕೆ ಪ್ರೊ.ಶ್ರೀಧರ್ ಧನ ಸಹಾಯ ಮಾಡಿದ್ದಾರೆ. ಪ್ರೊ. ಕೃಷ್ಣಮೂರ್ತಿ ಹನೂರು ಬಹಳ ಆಸ್ಥೆ ವಹಿಸಿ ಕರಡು ಪರಿಶೀಲನೆ ನಡೆಸಿದ್ದಾರೆ.
ಸಂವಹನ ಪ್ರಕಾಶನದ ಡಿ.ಎನ್. ಲೋಕಪ್ಪ ರಿಯಾ ಯಿತಿ ದರದಲ್ಲಿ ಬೃಹತ್ ಗ್ರಂಥವನ್ನು ಪ್ರಕಟಿಸಿದ್ದಾರೆ. ಕುಮಾರವ್ಯಾಸ ಮಹಾಕವಿಯ ಕರ್ಣಾಟ ಭಾರತ ಕಥಾಮಂಜರಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮೈಸೂರು ವಿಶ್ವವಿದ್ಯಾನಿಲಯ ಕೃತಿಯ ಹಿನ್ನೆಲೆ: ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯ ನವರು ಆಸಕ್ತಿಯ ಫಲದಿಂದ ಕರ್ಣಾಟ ಭಾರತ ಕಥಾಮಂಜರಿಯ ಒಂದು ಅಧಿಕೃತ ಜನಪ್ರಿಯ ಪಠ್ಯ ಕೈ ಪ್ರಕಟವಾದದ್ದು ಪ್ರಕಟವಾದದ್ದು 1958ರಲ್ಲಿ | ಆ ಕೃತಿಯ ಬೆಲೆ 2 ರೂ.ಗಳಾಗಿತ್ತು. 1974ರಲ್ಲಿ ಪ್ರಭುಶಂಕರ ಅವರ ಪ್ರಸಾರಾಂಗ ನಿರ್ದೇಶಕತ್ವದ ಅವಧಿಯಲ್ಲಿ ಪ್ರಕಟಗೊಂಡು ಆದೂ ಒಂದು ಬಗೆಯಲ್ಲಿ ಜನಪ್ರಿಯ ಆವೃತ್ತಿಯೇ ಆಗಿ 5 ಸಾವಿರ ಪ್ರತಿಗಳು ಮಾರಾಟವಾದವು.
ಇಂದು ಮರುಮುದ್ರಣಗೊಂಡಿರುವ ಕೃತಿಯ ಲೋಕಾರ್ಪಣೆ ಮೈಸೂರು: ಮೈಸೂರು ವಿವಿ ಪ್ರಸಾರಾಂಗದಲ್ಲಿ ಮಾ. 5ರಂದು ಮಧ್ಯಾಹ್ನ 12 ಗಂಟೆಗೆ ಕುಮಾರವ್ಯಾಸ ಮಹಾಕವಿ ವಿರಚಿತ ಕರ್ಣಾಟ ಭಾರತ ಕಥಾ ಮಂಜರಿ ಕೃತಿಯ ಲೋಕಾರ್ಪಣೆ ಮತ್ತು ಪ್ರಸಾರಾಂಗ ಮಾರಾಟ ವಿಭಾಗದ ಗಣಕೀಕೃತ ಲೆಕ್ಕಪತ್ರ ನಿರ್ವಹಣಾ ವ್ಯವಸ್ಥೆಗೆ ಚಾಲನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿದ್ವಾಂಸ ಪ್ರೊ.ಸಿ.ಪಿ. ಕೃಷ್ಣಕುಮಾರ್ ಕೃತಿ ಬಿಡುಗಡೆ ಮಾಡಲಿದ್ದಾರೆ.

ಅಮೆರಿಕ ಪ್ರಾಧ್ಯಾಪಕ ಪ್ರೊ.ಎಸ್.ಎನ್.ಶ್ರೀಧರ್ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಪ್ರೊ.ಕೃಷ್ಣಮೂರ್ತಿ ಹನೂರು ಕೃತಿ ಕುರಿತು ಮಾತಾಡಲಿದ್ದಾರೆ. ಸಂವಹನ ಪ್ರಕಾಶನದ ಡಿ.ಎನ್. ಲೋಕಪ್ಪ, ಪ್ರಸಾರಾಂಗದ ನಿರ್ದೇಶಕ ಪ್ರೊ.ಎಂ.ನಂಜಯ್ಯ ಹೊಂಗನೂರು ಭಾಗವಹಿಸಲಿದ್ದಾರೆ. 1998ರಲ್ಲಿ ಪ್ರಕಟವಾದ ಪುಸ್ತಕವನ್ನೇ ಮಾದರಿಯಾಗಿಟ್ಟು ಕೊಂಡೇ ಹೊಸದಾಗಿ ಸಂಪಾದನಾ ಕಾರ್ಯಕ್ಕೆ ಕೈಹಾಕದೇ ಓದುಗರಿಗೆ ಸಹಾಯವಾಗುವಂತೆ ಪುಸ್ತಕದ ವಿನ್ಯಾಸ ಹಾಗೂ ಅಕ್ಷರದ ಗಾತ್ರವನ್ನು ಹೆಚ್ಚಿಸಿ ಪ್ರಕಟಿಸಲಾಗಿದೆ.
ಪ್ರೊ.ಎಂ.ನಂಜಯ್ಯ ಹೊಂಗನೂರು, ಪ್ರಸಾರಾಂಗ ನಿರ್ದೇಶಕ ಅದರ ಬೆಲೆ 2 ರೂ. ಮತ್ತೆ ಕೆ.ಟಿ. ವೀರಪ್ಪ ನಿರ್ದೇಶಕರಾಗಿದ್ದ 1988 ಅದೇ ಮೂಲಪ್ರತಿಯ ಮಾದರಿಯನ್ನು ಪುನರ್ ಮುದ್ರಿಸಿ 30 ರೂ.ಗಳಿಗೆ 30 ಸಾವಿರ ಪ್ರತಿಗಳನ್ನು ಪ್ರಕಟಿಸಿ ಆಸಕ್ತ ಓದುಗರಿಗೆ ಒದಗಿಸಲಾಯಿತು. ಪ್ರೊ.ಸಿ.ನಾಗಣ್ಣ ಅವರು ನಿರ್ದೇಶಕರಾಗಿದ್ದ ಕಾಲದಲ್ಲಿ ಪ್ರತಿಯ ಅಕ್ಷರ ಕಾರ್ಯ ಜೋಡಣೆ ಆರಂಭವಾಯಿತು. ಪ್ರೊ.ಎಂ.ಜಿ.ಮಂಜುನಾಥ, ಪ್ರೊ.ಎನ್.ಎಂ. ತಳವಾರ, ಪ್ರೊ.ವಿಜಯ ಕುಮಾರಿ ಎಸ್. ಕರಿಕಲ್ ಅವರ ಅವಧಿಯಲ್ಲೂ 8 ಸಾವಿರ ಷಟ್ಟದಿಗಳ ಬೆರಳಚ್ಚು ಕಾರ್ಯ ಮುಂದುವರಿದು ಪ್ರೊ.ಜ್ಯೋತಿ ಶಂಕರ್ ಅವರು ಕಾವ್ಯದ ಹಸ್ತಪ್ರತಿ ಯನ್ನು ಪರಿಶೀಲಿಸಿ ಕೊಟ್ಟಿರುತ್ತಾರೆ. ಈಗ ಪ್ರೊ.ನಂಜಯ್ಯ ಹೊಂಗನೂರು ಅವರ ಅಧಿಕಾರದ ಅವಧಿಯಲ್ಲಿ ಕೃತಿಯು ಮರು ಮುದ್ರಣಗೊಂಡು ಓದುಗರ ಕೈ ಸೇರುತ್ತಿದೆ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
