NEWS

ಬಂಡೀಪುರ ಸಫಾರಿ ಪುನಾರಂಭ 108 ದಿನ ಬಳಿಕ ಪುನಾರಂಭ

ಪಾಲನೆ ನ್ಯೂಸ್

ಗುಂಡ್ಲುಪೇಟೆ: ರೈತರ ವಿರೋಧದ ನಡುವೆಯೇ ಬಂಡೀಪುರ ಸಫಾರಿ ಪುನಾರಂಭ 108 ದಿನ ಬಳಿಕ ಪುನಾರಂಭ | ನಿನ್ನೆ ₹1.25 ಲಕ್ಷ ಆದಾಯ ಗುಂಡ್ಲುಪೇಟೆ ಸಂಘರ್ಷದಿಂದ ಮಾನವ-ವನ್ಯಜೀವಿ ನಾಲ್ವರು ರೈತರ ಸಾವಿನ ಬಳಿಕ ಬಂಡೀಪುರ ಸಫಾರಿಯನ್ನು ರಾಜ್ಯ ಸರ್ಕಾರ ಸ್ಥಗಿತಗೊಳಿಸಿತ್ತು. ರೈತಸಂಘದ ಕೆಲ ಬಣಗಳ ವಿರೋಧದ ನಡುವೆಯೂ ಹಾಗೂ ಸ್ಥಳೀಯ ಪೊಲೀಸರ ಸರ್ಪಗಾವಲಿನಲ್ಲಿ ಭಾನುವಾರ ಸಫಾರಿ ಮತ್ತೇ ಆರಂಭವಾಗಿದೆ.

108 ದಿನಗಳ ಬಳಿಕ ಭಾನುವಾರ ಮಧ್ಯಾಹ್ನದ 3.30ರ ಸಫಾರಿಗೆ 113 ಮಂದಿ ಪ್ರವಾಸಿಗರು ಆಗಮಿಸಿದರು. ಬಂಡೀಪುರ ಸಫಾರಿ ಕೇಂದ್ರಕ್ಕೆ ಬಂದ ಪ್ರವಾಸಿಗರು ಹಾಗೂ ಜೆಎಲ್‌ಆ‌ರ್ ಸೇರಿ₹1.25 ಲಕ್ಷದಷ್ಟು ಆದಾಯ ಅರಣ್ಯ ಇಲಾಖೆಗೆ ಬಂದಿದೆ. ಗೋಪಾಲಸ್ವಾಮಿ ಬೆಟ್ಟದ ವಲಯ ಅರ ಣ್ಯಾಧಿಕಾರಿ ಬಿ.ಎಂ.ಮಲ್ಲೇಶ್ ಮಾತನಾಡಿ, ‘ಸರ್ಕಾರದ ಸೂಚನೆಯಂತೆ ಶೇ.50 ರಷ್ಟು ಸಫಾರಿ ಆರಂಭಿಸಲಾಗಿದೆ.

ಪೂರ್ಣ ಪ್ರಮಾಣದಲ್ಲಿ ಆರಂಭಿಸಿದರೆ ಪ್ರವಾಸಿಗರಿಗೆ ಮತ್ತಷ್ಟು ಅನುಕೂಲವಾಗಲಿದೆ’ ಎಂದರು. ಸಫಾರಿ ಆರಂಭಕ್ಕೆ ರೈತಸಂಘದ ಕೆಲ ಬಣಗಳು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಭದ್ರತೆಗೆ ಸುಮಾರು 200 ಪೊಲೀಸರನ್ನು ನಿಯೋಜಿಸಲಾಗಿತ್ತು.‌

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಜ.1 ರಂದು ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ

ಪುಸ್ತಕ ನಮ್ಮ ಜ್ಞಾನವನ್ನು ಹೆಚ್ಚಿಸುವ ಪರಮಾಪ್ತ ಮಿತ್ರ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಅಭಿಪ್ರಾಯಪಟ್ಟರು.

ಅಬಾಕಸ್ ಸ್ಪರ್ಧೆಯಲ್ಲಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬಹುಮಾನ

Leave a Comment