NEWS

ಮಾಕಳಿ ಬಳಿ ಭಾನುವಾರ ಬೆಳಗ್ಗೆ ಸಂಭವಿಸಿದ ಬೆಂಕಿ ಅವಘಡ

ಪಾಲನೆ ನ್ಯೂಸ್

ನೆಲಮಂಗಲ: ಸುಟ್ಟು ಕರಕಲಾದ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು | ಐವರಿಗೆ ಗಂಭೀರ ಗಾಯ ಧಗಧಗಿಸಿದ ಸುಗಂಧ ದ್ರವ್ಯ ಗೋದಾಮು | ನೆಲಮಂಗಲ ಬೆಂಗಳೂರು ಉತ್ತರ ತಾಲೂಕು ಮಾಕಳಿ ಬಳಿ ಭಾನುವಾರ ಬೆಳಗ್ಗೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಸುಗಂಧ ದ್ರವ್ಯಗಳಿಗೆ ಬಳಸುವ ರಾಸಾಯನಿಕ ತುಂಬಿದ್ದ ಗೋದಾಮು ಭಸ್ಮವಾಗಿದ್ದು, ಅವಘಡದಲ್ಲಿ ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ‌

ಗೋದಾಮಿನಲ್ಲಿದ್ದ ಸಿಬ್ಬಂದಿ ಸಂತೋಷ್, ವಿಶ್ವನಾಥ್, ಜಯರಾಮು, ರಮೇಶ್ ಮತ್ತು ಮಂಜುನಾಥ್ ಗಾಯಗೊಂಡವರು. ಮುಖ ಕೈಕಾಲು ಭಾಗದಲ್ಲಿ ಸುಟ್ಟ ಗಾಯಗಳಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಲೋಕೇಶ್ ಮತ್ತು ನಾಗಪ್ಪ ಮಾಲೀಕತ್ವದ ಗೋದಾಮಿನಲ್ಲಿ ಮೂರು ಖಾಸಗಿ ಕಂಪನಿ ಯವರು ಒಂದೇ ಗೋದಾಮಿನಲ್ಲಿ ವಿಭಾಗ ಮಾಡಿಕೊಂಡು ಬಾಡಿಗೆ ಪಡೆದಿದ್ದರು. ಗಾಯಗೊಂಡ ಕಾರ್ಮಿಕ.

ಈ ಪೈಕಿ ಸುಗಂಧ ದ್ರವ್ಯಗಳಿಗೆ ರಾಸಾಯನಿಕ ಸಂಗ್ರಹಿಸಿದ್ದ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಬೆಂಕಿಯ ಕೆನ್ನಾಲಿಗೆ ಪಕ್ಕದ ಗೋದಾಮಿನ ಎಸಿ, ವಾಷಿಂಗ್ ಡಿನೆ ಹಾಗೂ ಎಚ್‌ಪಿ ಗ್ಯಾಸ್ ಸಿಲಿಂಡರ್‌ಳಿದ್ದ ಭಾಗದಲ್ಲಿ ವ್ಯಾಪಿಸಿದೆ. ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಭಾನುವಾರದ್ದರಿಂದ 40 ಮಂದಿ ಗೋದಾಮಿನಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.

ಮಾಕಳಿ ಬಳಿ ಸುಗಂಧ ದ್ರವ್ಯ ಗೋದಾಮು ಬೆಂಕಿಗೆ ಆಹುತಿಯಾದಾಗ ಅವರಿಸಿದ್ದ ಹೊಗೆ. ನಿವಾಸಿಗಳಲ್ಲಿ ಆತಂಕ ಭಾನುವಾರ ರಜೆಯ ಮೂಡ್‌ನಲ್ಲಿದ್ದ ಸುತ್ತಮುತ್ತಲ ವಸತಿ ಪ್ರದೇಶಗಳಲ್ಲಿ ಬೆಂಕಿಯ ಜ್ವಾಲೆ ದಟ್ಟ ಹೊಗೆ ಕಾರ್ಮೋಡವನ್ನೇ ಸೃಷ್ಟಿಸಿದ್ದು ಒಂದೆಡೆಯಾದರೆ, ಧಗಧಗ ಹೊತ್ತಿ ಉರಿಯುತ್ತಿರುವ ಬೆಂಕಿ ಜ್ವಾಲೆ ಹೆಚ್ಚಾಗುತ್ತಿದ್ದನ್ನು ಕಂಡ ಗೋದಾಮಿನ ಹತ್ತಿರ ವಾಸವಿದ್ದ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ರನ್ನರ್ ಅಪ್ ಸ್ಥಾನ ಪಡೆದ ಪದ್ಮಪ್ರಿಯಾ

ನಕಲಿ ಪಿಐಡಿ ; 5 ಕೋಟಿ ರೂ. ಲಂಚದ ಆರೋಪ!

ಗೃಹಬಳಕೆ ಅಡುಗೆ ಅನಿಲದ ಕುರಿತು ಆತಂಕ ಬೇಡ

Leave a Comment