NEWS

ವಯೋನಿವೃತ್ತಿ ಯಾದ ಸುಭಾಸ್ ಮೆಣಸಗೆರೆಗೆ ಅಭಿನಂದನೆ

ಪಾಲನೆ ನ್ಯೂಸ್

ಮಂಡ್ಯ: ಸರ್ಕಾರಿ ಐ. ಟಿ. ಐ ಕಾಲೇಜಿನಲ್ಲಿ ಕಿರಿಯ ತರಬೇತಿ ಅಧಿಕಾರಿಯಾಗಿ ವಯೋ ನಿವೃತ್ತಿಯಾದ ಎಂ. ಈ. ಸುಭಾಸ್ ಮೆಣಸಗೆರೆ ರವರನ್ನು “ಮಂಡ್ಯ ಸ್ನೇಹಿತರ ಬಳಗ”ದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ಸನ್ಮಾನ ಸ್ವೀಕರಿಸಿದ ಸುಭಾಸ್ ಮಾತನಾಡುತ್ತಾ, ನನಗೆ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಕ್ಕೆ ಆತ್ಮ ತೃಪ್ತಿ ಹಾಗೂ ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಮಾಡಿದ ಹೆಮ್ಮೆ ಇದ್ದು ಇದರಿಂದ ನನ್ನ ಜೀವನ ಸಾರ್ಥಕತೆ ಪಡೆದಿದೆ. ಅದೇ ರೀತಿಯಲ್ಲಿ ಅಭಿಮಾನದಿಂದ ನೀವುಗಳು ಮಾಡಿರುವ ಸನ್ಮಾನಕ್ಕೆ ನಾನು ಪ್ರೀತಿಯಿಂದ ಅಭಾರಿಯಾಗಿದ್ದೇನೆ ಎಂದು ಭಾವುಕರಾದರು.

ಈ ಸಂದರ್ಭದಲ್ಲಿ ಮಂಡ್ಯ ಸ್ನೇಹಿತರ ಬಳಗದ ಮಂಜೇಶ್ ಗೌಡ, ಲಿಂಗೇಗೌಡ, ದರಸಗುಪ್ಪೆ ಧನಂಜಯ, ಸಿದ್ದಪ್ಪ, ದೇವರಾಜೇಗೌಡ, ರಮೇಶ್, ನಾಗರಾಜು, ಶೇಖರ್ ಉಪಸ್ಥಿತರಿದ್ದರು.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ಪುನೀತ್‌ರಾಜ್‌ಕುಮಾರ್‌ರವರ ಹುಟ್ಟು ಹಬ್ಬದ ಅಂಗವಾಗಿ ರಕ್ತದಾನ ಶಿಬಿರ

ಜೈಲರ್ 2 ಚಿತ್ರದ ಮೂಲಕ ಸಿನಿರಂಗಕ್ಕೆ ನಟಿ ಮೇಘನಾ ರಾಜ್‌ ರೀ ಎಂಟ್ರಿ

ಕರ್ನಾಟಕ ಸಂಘ (ರಿ),ಮಂಡ್ಯ ಮಹಿಳಾ  ಘಟಕ

Leave a Comment