NEWS

ಎಸ್‌ಎಫ್‌ಐ ಆಗ್ರಹ ಗ್ರಾಮೀಣ ಸರ್ಕಾರಿ ಶಾಲೆಗಳನ್ನು ಮುಚ್ಚದಂತೆ

ಪಾಲನೆ ನ್ಯೂಸ್

ಮೈಸೂರು: ರಾಜ್ಯ ಸರ್ಕಾರ 700 ಪಬ್ಲಿಕ್

ಶಾಲೆಗಳ ಉನ್ನತೀಕರಣದ ನೆಪದಲ್ಲಿ ಸುತ್ತಮುತ್ತ ಲಿನ ಸರ್ಕಾರಿ ಶಾಲೆ, ಪದವಿಪೂರ್ವ ಕಾಲೇಜುಗಳನ್ನು ಮುಚ್ಚಿಸಲು ಹೊರಟಿರುವು ದನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ವಿರೋಧಿಸುತ್ತದೆ ಎಂದು ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ಟಿ.ಎಸ್. ವಿಜಯ್‌ಕುಮಾರ್ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಲೀನದ ಹೆಸರಿನಲ್ಲಿ ಹಳ್ಳಿಗಳ ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು. ಬದಲಾಗಿ ಇವುಗಳಿಗೆ ಮೂಲ ಸೌಲಭ್ಯ ಒದಗಿಸಬೇಕು. ಖಾಲಿ ಇರುವ 62 ಸಾವಿರ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಮಾಡಬೇಕು. ಒಂದು ವೇಳೆ ವಿಲೀನ ಪ್ರಕ್ರಿಯೆ ನಡೆದರೆ ವಿದ್ಯಾರ್ಥಿಗಳು ಹಲವಾರು ಕಿ. ಮೀ. ನಡೆದು ದೂರದ ಶಾಲೆಗಳಿಗೆ ಹೋಗಬೇಕಾ ಗುತ್ತದೆ. ಇದರಿಂದಲೂ ದಾಖಲಾತಿ ಇಳಿಕೆ ಆಗುತ್ತದೆ. ಹೀಗಾಗಿ ಸರ್ಕಾರ ತನ್ನ ನಿರ್ಧಾರ ಕೈಬಿಡಬೇಕು ಎಂದು ಒತ್ತಾಯಿಸಿದರು.

ಡಿ.ಅಭಿ, ಕೆ.ಎಸ್.ರಾಜ್ ಪತ್ರಿಕಾಗೋಷ್ಠಿ ಯಲ್ಲಿ ಹಾಜರಿದ್ದರು.‌

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್

ಹೀಲಿಯಂ ಅನಿಲ ಬಲೂನು ಮಾರಾಟ ನಿಷೇಧ

ಮಹಿಳೆಯರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ವಿಶೇಷ ರಂಗೋಲಿ ಸ್ಪರ್ಧಾ

Leave a Comment