NEWS

‘ ಆಯುರ್ವೇದ ಪದ್ದತಿ ಆಧುನಿಕ ಅನಾರೋಗಕ್ಕೆ ಸೂಕ್ತ’

ಪ್ರಚಾರೋಪನ್ಯಾಸ ಮಾಲೆಯ ವಿಶೇಷೋಪನ್ಯಾಸದಲ್ಲಿ ಆಯುರ್ವೇದ ವೈದ್ಯ ಡಾ.ವೆಂಕಟೇಶ್‌ ಅಭಿಮತ

ಪಾಲನೆ ನ್ಯೂಸ್

ಮೈಸೂರು: ಆಧುನಿಕ ಜೀವನಶೈಲಿ,

ಅನಿಯಮಿತ-ದೋಷಪೂರಿತ ಆಹಾರ ಪದ್ದತಿಯಿಂದಾಗಿ ಇಂದು ಜನರು ಅನಾ ರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇದರಿಂದ ಹೊರ ಬರಬೇಕಾದರೆ ನಮ್ಮ ಪಾರಂಪರಿಕ ಆಯು ರ್ವೇದ ವೈದ್ಯ ಪದ್ದತಿಯನ್ನು ಅಳವಡಿಸಿ ಕೊಳ್ಳಬೇಕು ಎಂದು ಆಯುರ್ವೇದ ವೈದ್ಯ ಡಾ.ವೆಂಕಟೇಶ್ ಕಿವಿಮಾತು ಹೇಳಿದರು.

ನಗರದ ಸರ್ಕಾರಿ ಆಯುರ್ವೇದ ಮಹಾ ವಿದ್ಯಾಲಯದಲ್ಲಿ ಮೈಸೂರು ವಿಶ್ವವಿದ್ಯಾನಿಲ ಯದ ಪ್ರಸಾರಾಂಗದ ಸಹಯೋಗದೊಂದಿಗೆ ಆಯೋಜಿಸಿದ್ದ 2025-26ನೇ ಸಾಲಿನ 10ನೇ ಪ್ರಚಾರೋಪನ್ಯಾಸ ಮಾಲೆ ಕಾರ್ಯ ಕ್ರಮದಲ್ಲಿ ‘ದೈನಂದಿನ ಆರೋಗ್ಯ: ಆಯು ರ್ವೇದ’ ವಿಷಯ ಕುರಿತು ಅವರು ವಿಶೇಷೋಪನ್ಯಾಸ ನೀಡಿದರು.

ಇಂದು ದಿನನಿತ್ಯವೂ ಸಣ್ಣ ಸಣ್ಣ ರೋಗಕ್ಕೂ ಪರಿತಪಿಸುವಂತಾಗಿದೆ. ಶೀಘ್ರ ನಿವಾರಣೆಗೆ ಆ್ಯಂಟಿ ಬಯೋಟಿಕ್ ಔಷಧಿಗಳನ್ನು ಬಳಸು ತ್ತಿದ್ದು, ಈ ಔಷಧಿಗಳು ರೋಗವನ್ನು ತಾತ್ಕಾಲಿ ಕವಾಗಿ ಉಪಶಮನಗೊಳಿಸುತ್ತವೆ. ಜೊತೆಗೆ ದೇಹದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತವೆ. ಅಲ್ಲದೆ ರೋಗ ಉಲ್ಬಣಗೊಂಡು ಇಡೀ ಜೀವನವೇ ರೋಗಗ್ರಸ್ತವಾಗುತ್ತಿದೆ. ಈ ಪದ್ದತಿ ಮನುಕುಲಕ್ಕೆ ಮಾರಕವಾಗುತ್ತಿದ್ದು, ಬಿಪಿ, ಶುಗರ್, ಕ್ಯಾನ್ಸರ್ ಮುಂತಾದ ರೋಗಗಳಿಗೆ ಕಾರಣವಾಗುತ್ತಿದೆ. ಇಂತಹ ರೋಗಗಳಿಂದ ಹೊರಬರಬೇಕಾದರೆ ಆಯುರ್ವೇದ ವೈದ್ಯ ಪದ್ದತಿಯ ಸುಲಭ ಮಾರ್ಗಗಳನ್ನು ಅನುಸರಿಸು ವುದು ಅತೀ ಮುಖ್ಯ ಎಂದರು.

ರೋಗ ಬಂದ ಮೇಲೆ ಅದರ ಬಗ್ಗೆ ಕಾಳಜಿ ವಹಿಸುವುದರ ಬದಲಾಗಿ ರೋಗಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಅತೀ ಮುಖ್ಯ. ಇಂದಿನ ತಲೆಮಾರಿನ ಜನರಲ್ಲಿ ರೋಗ ನಿರೋ ಧಕ ಶಕ್ತಿಯು ಕಡಿಮೆಯಾಗುತ್ತಿದ್ದು, ಅದಕ್ಕೆ ಕಾರಣ ಅವರ ಆಹಾರ, ಒತ್ತಡದ ಜೀವನಶೈಲಿ, ಅನಗತ್ಯ ಹಪಾಹಪಿಯು ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಆರೋಗ್ಯದಮೇಲೆ ತೀವ್ರ ಪರಿಣಾ ಮವನ್ನು ಬೀರುತ್ತಿದೆ ಎಂದರು. ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀವತ್ಸ ಮೈಸೂರು ವಿವಿ ಪ್ರಸಾರಾಂಗದ ನಿರ್ದೇಶಕ ಪ್ರೊ.ನಂಜಯ್ಯ ಎಂ.ಹೊಂಗನೂರು, ಅಧೀಕ್ಷಕ ಎಂ.ಡಿ. ಚನ್ನ ಬಸಪ್ಪ, ಸಹಾಯಕ ನಿರ್ದೇಶಕ ಡಾ.ಬಿ.ಎಸ್‌. ಅನಿಲ ಕುಮಾರ ಬೊಯ್ದ ಘಟ್ಟ ಹಾಜರಿದ್ದರು.‌

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಮೇಲುಕೋಟೆಗೆ ಹರಿದು ಬಂದ ಭಕ್ತ ಸಾಗರ

ವಿಶೇಷ ಚೇತನರನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರಬೇಕು: ಡಾ. ಕುಮಾರ

ಕಾಡಾನೆಗಳ ದಾಳಿಗೆ ಬೆಳೆ ಹಾನಿ

Leave a Comment