NEWS

ಟಿ-20 ವಿಶ್ವಕಪ್ ಮುಡಿಗೇರಿಸಿಕೊಂಡ ಭಾರತ

ಪಾಲನೆ ನ್ಯೂಸ್

ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಟಿ-20 ವಿಶ್ವಕಪ್-2026 ಫೈನಲ್ ಪಂದ್ಯದಲ್ಲಿ ನ್ಯೂಜಿ ಲೆಂಡ್ ವಿರುದ್ದ ಭಾರೀ ಅಂತರ ದಲ್ಲಿ ಗೆದ್ದು ಬೀಗಿರುವ ಭಾರತ ಟಿ-20 ವಿಶ್ವಕಪ್ ಮುಡಿಗೇರಿಸಿಕೊಂಡಿತು. ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ 5 ವಿಕೆಟ್ ನಷ್ಟಕ್ಕೆ 255 ರನ್ ಗಳಿ ಸುವ ಮೂಲಕ ನ್ಯೂಜಿಲೆಂಡ್ ಗೆಲುವಿಗೆ 256 ರನ್‌ಗಳ ಬೃಹತ್ ಮೊತ್ತದ ಗುರಿಯನ್ನು ನೀಡಿತು. ಭಾರತದ ಆರಂಭಿಕರಾದ ಸಂಜುಸ್ಯಾಟ್ಸನ್ ಮತ್ತು ಅಭಿಷೇಕ್ ಶರ್ಮಾ ಉತ್ತಮ ಅಡಿಪಾಯ ಹಾಕಿದರು. ಅಭಿ ಷೇಕ್ 52(21) ರನ್ ಗಳಿಸಿ, 7.1 ಓವರ್‌ಗಳಿದ್ದಾಗ ರಚಿನ್ ರವೀಂದ್ರ ಬೌಲಿಂಗ್‌ನಲ್ಲಿ ಕ್ಯಾಚಿತ್ತು ಹೊರ ನಡೆ ದರು. ಜವಾಬ್ದಾರಿಯುತ ಆಟವಾಡಿದ ಸಂಜು ಸ್ಯಾಮನ್ 89(46) ರನ್‌ ಗಳಿಸಿದ್ದಾಗ ಜೀಮ್ಸ್ ನೀಶಮ್ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿ ಔಟಾದರು.

ವಿಶ್ವಕಪ್‌ನಲ್ಲಿ ಬೂಮ್ರಾಗೆ 14 ವಿಕೆಟ್ (ಅತಿ ಹೆಚ್ಚು ವಿಕೆಟ್ ಪಡೆ ದವರಲ್ಲಿ ಮೊದಲ ಸ್ಥಾನ). # 321ರನ್ ಗಳಿಸಿದ ಸಂಜು ಸ್ಯಾಮ್ಪನ್ (ಅತಿ ಹೆಚ್ಚು ರನ್ ಗಳಿಸಿದವರಲ್ಲಿ 2ನೇ ಸ್ಥಾನ) . ಈ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ (24) ಬಾರಿಸಿದವರು ಸಂಜು ಸ್ಯಾಟ್ಸನ್ # ಭಾರತ ಪವರ್ ಪ್ಲೇನಲ್ಲಿ ಅತಿ ಹೆಚ್ಚು ರನ್ ಗಳಿಸಿ (92) ವೆಸ್ಟ್ ಇಂಡೀಸ್ ಜತೆ ಪ್ರಥಮ ಸ್ಥಾನ ಹಂಚಿಕೊಂಡಿದೆ.

ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಬಿಡದಿ ಟೌನ್ ಶಿಪ್ ಯೋಜನೆಯಿಂದ ಕುಮಾರಸ್ವಾಮಿ ಅವರಿಗೆ ಲಾಟರಿ : ಡಿಸಿಎಂ

ಮಾರ್ಚ್ 8ರಂದು 600 ಕಲಿಕಾರ್ಥಿಗಳಿಗೆ ಸಾಕ್ಷರತಾ ಪರೀಕ್ಷೆ

ಅಂಕೇಗೌಡರ ‘ಪುಸ್ತಕ ಮನೆ’ಗೆ ಸರ್ಕಾರದ ಆಸರೆ: ಶಾಸಕ ಗೂಳಿಗೌಡ ಮನವಿಗೆ ಸಚಿವ ತಂಗಡಗಿ ಸ್ಪಂದನೆ

Leave a Comment