NEWS

ಬೆಳೆಗಳಿಗೆ ಸಮರ್ಪಕವಾದ ವೈಜ್ಞಾನಿಕ ಬೆಲೆ ದೊರೆಯಬೇಕು‌ ಸಮಾಜದ ನಿಸ್ವಾರ್ಥ ಕಾಯಕಯೋಗಿ ರೈತ: ಡಾ.ಕುಮಾರ

ಸಮಾಜದಲ್ಲಿ  ಕಾಯಕಯೋಗಿಯಾಗಿ ರೈತರು ಕಾರ್ಯ ನಿರ್ವಹಿಸುತ್ತಿದ್ದಾರೆ. ರೈತರು ಕೆಲಸದಲ್ಲಿ ನಿಸ್ವಾರ್ಥ ಮನೋಭಾವ ಮತ್ತು ವೃತ್ತಿ ನಿಷ್ಠೆಯನ್ನು ತೋರುತ್ತಾ ಯಾವ ಕೀರ್ತಿಯನ್ನು ಬಯಸದೆ ಸಮಾಜದ ಹಿತಕ್ಕಾಗಿ ರೈತ ವರ್ಗ ಶ್ರಮಿಸುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಅವರು ಹೇಳಿದರು.

ಪಾಲನೆ ನ್ಯೂಸ್

ಮಂಡ್ಯ: ಇಂದು ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ “ರಾಷ್ಟ್ರೀಯ ರೈತ ದಿನಾಚರಣೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ರೈತರನ್ನು ಕುಗ್ಗಿಸುವ ಕೆಲಸವಾಗುತ್ತಿದೆ. ಇದು ದೇಶದ ಹಿತಕ್ಕೆ ಮಾರಕ, ರೈತರನ್ನು ಹಿಗ್ಗಿಸುವ ಕೆಲಸವಾಗಬೇಕಿದೆ. ರೈತರುಗಳು ಬೆಳೆದ ಬೆಳೆಗಳಿಗೆ ಸಮರ್ಪಕವಾದ ವೈಜ್ಞಾನಿಕ ಬೆಲೆ ದೊರೆತಾಗ ಮಾತ್ರ ರೈತರ ಅಭಿವೃದ್ಧಿ ಸಾಧ್ಯ  ಎಂದು ಹೇಳಿದರು.

ರೈತರಿಲ್ಲದ ಪ್ರಪಂಚವನ್ನು ಊಹಿಸಲು ಸಾಧ್ಯವಿಲ್ಲ ರೈತರ ಅಭಿವೃದ್ಧಿ ಮತ್ತು ಏಳಿಗೆಗಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು. ಅನ್ನದಾತನನ್ನು  ಎಲ್ಲರೂ ಸ್ಮರಿಸಿ ಗೌರವಿಸಬೇಕು. 1930 ರಲ್ಲೆ  ರಾಷ್ಟ್ರಕವಿ ಕುವೆಂಪು ಅವರು ತಮ್ಮ ಕೊಳಲು ಎನ್ನುವ ಕವನ ಸಂಕಲನದಲ್ಲಿ ರೈತ ಗೀತೆಯನ್ನು ಬರೆದಿದ್ದಾರೆ.. ಸದರಿ ರೈತ ಗೀತೆಯ ಮಹತ್ವವನ್ನು ಕೇಳುವುದರ ಜೊತೆಗೆ ಅರ್ಥೈಸಿಕೊಳ್ಳಬೇಕು ಎಂದು ತಿಳಿಸಿದರು.

ಆಧುನಿಕ ಜಗತ್ತಿನಲ್ಲಿ ರೈತರಿಗೆ ದೊರೆಯಬೇಕಾದ ಮನ್ನಣೆ ದೊರೆಯುತ್ತಿಲ್ಲ ಎನ್ನುವುದು ದುಃಖಕರ ಸಂಗತಿ. ಆಧುನಿಕತೆಗೆ ರೈತರು ಹೊಂದಿಕೊಳ್ಳಲು ತಾಂತ್ರಿಕ ಮತ್ತು ವೈಜ್ಞಾನಿಕ ಉಪಕ್ರಮಗಳನ್ನು ತಮ ಕೃಷಿ ಪದ್ಧತಿಯಲ್ಲಿ ಅಳವಡಿಸಿಕೊಳ್ಳಬೇಕು. ರೈತರು ದೇಶದ ಆರ್ಥಿಕತೆಗೆ ರೈತರ ಕೊಡುಗೆ ಅಪಾರ ಎಂದರು.

ಮಂಡ್ಯ ಕೃಷಿ ಪ್ರಧಾನವಾದ ಜಿಲ್ಲೆ, ಜಿಲ್ಲೆಯ ರೈತರು ಸಹ ನಮ್ಮ ಆರ್ಥಿಕತೆಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ. ರೈತರು ವೈಜ್ಞಾನಿಕತೆಯನ್ನು ಕೃಷಿಯಲ್ಲಿ ಅಳವಡಿಸಿಕೊಂಡು ಪರ್ಯಾಯ ಬೆಳೆಗಳನ್ನು ಬೆಳೆಯಬೇಕು. ಮಣ್ಣಿನ ಗುಣಮಟ್ಟವನ್ನು ಯಾವ ರೀತಿಯಲ್ಲಿ ಹೆಚ್ಚಿಸಿಕೊಳ್ಳಬೇಕು. ಕಬ್ಬು, ಭತ್ತ ಬಿಟ್ಟು ವಿವಿಧ ವೈಜ್ಞಾನಿಕ ಬೆಳೆಗಳನ್ನು ಬೆಳೆಯುವ ನಿಟ್ಟಿನಲ್ಲಿ  ಕೃಷಿ ಕ್ಷೇತ್ರದಲ್ಲಿ ಇನ್ನಷ್ಟು ಸಂಶೋಧನೆಗಳು ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

ರೈತರ ಕ್ಷೇಮಾಭಿವೃದ್ಧಿಗಾಗಿ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಎಲ್ಲಾ ಕಾರ್ಯಕ್ರಮಗಳನ್ನು ರೈತರು ಸಮರ್ಪಕವಾಗಿ ಸದುಪಯೋಗಪಡಿಸಿಕೊಂಡು ಪ್ರಗತಿ ಕಾಣಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್. ಜಿಲ್ಲಾ ಕೃಷಿಕರ ಸಮಾಜದ ಅಧ್ಯಕ್ಷ ಸಿ.ಎಂ. ನಾಗರಾಜು, ಕಬ್ಬಿನ ಗಾಣದ ಮಾಲೀಕರ ಸಂಘ ಅಧ್ಯಕ್ಷ ಸೋಮಶೇಖರ್ ಗೌಡ, ರೈತರ ಪಾಠ ಶಾಲೆಯ ಸತ್ಯ ಮೂರ್ತಿ  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related posts

ಐಟಿಸಿ ಕಂಪನಿಗೆ ಡೆಡ್‌ಲೈನ್!

ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಅವರ ಶಸ್ತ್ರಾಸ್ತ್ರ ಪರ ವಾನಗಿ ಅಮಾನತು

ಕೆನೆ ಪದರ ಅಳವಡಿಸಿದರೆ ಪರಿಶಿಷ್ಟರಿಗೆ ಅನ್ಯಾಯ

Leave a Comment