ಪಾಲನೆ ನ್ಯೂಸ್
ಆನೇಕಲ್: ಪಟ್ಟಣ ಸಮೀಪದಲ್ಲಿ ರೈಲುಹಳಿ ಮೇಲೆಯೇ ಬಿಎಂಟಿಸಿ ಬಸ್ ಕೆಟ್ಟು ನಿಂತು ಕೆಲಹೊತ್ತು ಆತಂಕ ಸೃಷ್ಟಿಸಿತ್ತು. ಅತ್ತಿಬೆಲೆ ಮಾರ್ಗವಾಗಿ ಹೋಗುವ ಹಾಲ್ಲೇನಹಳ್ಳಿ ರೈಲುಹಳಿ ಮೇಲೆ ಬಿಎಂಟಿಸಿ ವಿದ್ಯುತ್‌ಚಾಲಿತ ಬಸ್ ಏಕಾಏಕಿ ನಿಂತಿತ್ತು.

ಸಾರ್ವಜನಿಕರು ಹಾಗೂ ಪ್ರಯಾಣಿಕರು ಬಸ್ ತಳ್ಳಿಕೊಂಡು ಮುಂದಕ್ಕೆ ಸಾಗಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಬೇರೆ ವಾಹನಕ್ಕೆ ಹಗ್ಗ ಕಟ್ಟಿ ಎಳೆಯಲು ಪ್ರಯತ್ನಿಸಿದ್ದೂ ಫಲ ನೀಡಲಿಲ್ಲ. ತಾಂತ್ರಿಕ ತಂಡ ಸ್ಥಳಕ್ಕೆ ಬಂದು ಸರಿಪಡಿಸಿದ ನಂತರ ಬಸ್ ಸ್ಟಾರ್ಟ್ ಆಯಿತು. ಸುಮಾರು 20 ನಿಮಿಷ ಹಳಿ ಮೇಲೆಯೇ ಬಸ್ ನಿಂತ ಪರಿಣಾಮ ಎರಡು ಭಾಗದಲ್ಲಿ ಸಂಚಾರಸಿಕ್ಕು ಉಂಟಾಗಿ ವಾಹನ ಸವಾರರು ಪರದಾಡಿದರು. ರೈಲ್ವೆ ಹಳಿ ಮೇಲೆ ಬಸ್ ನಿಂತಿರುವ ಬಗ್ಗೆ ರೈಲ್ವೆ ಸಿಬ್ಬಂದಿ ಮಾಹಿತಿ ರವಾನೆ ಮಾಡಿದ್ದ ಕಾರಣ ಯಾವುದೇ ರೈಲು ಸಂಚಾರ ಇರಲಿಲ್ಲ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

