ಪಾಲನೆ ನ್ಯೂಸ್
ಮಂಡ್ಯ: ಇಂದು ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ “ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳ ಮೇಲೆ ಉಂಟಾಗುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟುವ ಬಗ್ಗೆ ಹಾಗೂ ಅಸ್ಪೃಶ್ಯತೆ ನಿರ್ಮೂಲನೆ” ಕುರಿತು ಕಾರ್ಯಗಾರದಲ್ಲಿ ಕಲಬುರ್ಗಿ ಜಿಲ್ಲೆಯ ಕೋಡ್ಲಾದ ಉರಿಲಿಂಗಪೆದ್ದೇಶ್ವರ ಮಹಾಸಂಸ್ಥಾನ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಅವರು ಮಾತನಾಡಿ ಜಾತಿ ವ್ಯವಸ್ಥೆ ಮಾನವನ ಮೆದುಳಿನಲ್ಲಿರುವ ರೋಗವಾಗಿದೆ. ಭಾರತ ಭವಿಷ್ಯವನ್ನು ಲೇಖನಿಯಿಂದ ರೂಪಿಸಲಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಹ ದೇಶವನ್ನು ಪೆನ್ನಿಂದ ಕೊಟ್ಟಿದ್ದಾರೆ ಗನ್ನಿಂದಲ್ಲ ಎಂದು ಹೇಳಿದರು.
ಜಿಲ್ಲೆಯಲ್ಲಿ ದಾಖಲಾಗಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ಕಾಯ್ದೆ ಗಳ ವಿಚಾರಣೆಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು. ನಾವು ಆಕಾರದಲ್ಲಿ ಮಾತ್ರ ಮನುಷ್ಯರಾಗದೆ ವಿಚಾರದಲ್ಲೂ ಮನುಷ್ಯರಾಗಬೇಕು. ಮನುಷ್ಯನಲ್ಲಿ ಪ್ರೀತಿ, ಕರುಣೆ, ಸಹನೆ ಮತ್ತು ತಾಳ್ಮೆಗಳು ಇದ್ದಾಗ ಮಾತ್ರ ಮನುಷ್ಯನ ಜೀವನವು ಪರಿಪಕ್ವವಾಗುತ್ತದೆ. ಆಗ ಮಾತ್ರ ಅಸ್ಪೃಶ್ಯತೆಯ ಆಚರಣೆಯನ್ನು ಸಮಾಜದಿಂದ ಹೋಗಲಾಡಿಸಲು ಸಾಧ್ಯ ಎಂದರು.

ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಶೋಷಣೆಯ ವಿರುದ್ಧ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಲಂಡನ್ ನಲ್ಲಿ ಧ್ವನಿ ಎತ್ತುತ್ತಾರೆ. ಭಾರತದದ ಸಂವಿಧಾನದ ಮೂಲಕ ಹೆಣ್ಣು ಮಕ್ಕಳಿಗೆ ಶಿಕ್ಷಣ, ರಾಜಕೀಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಅವಕಾಶ ದೊರೆಯುವಂತೆ ಅವಕಾಶ ನೀಡಿದ್ದಾರೆ. ಇವತ್ತಿನ ಹೆಣ್ಣು ಮಕ್ಕಳು ಬಾಬಾ ಸಾಹೇಬ್ ಅವರನ್ನು ಸ್ಮರಿಸಬೇಕು ಎಂದರು.
ದೇಶವು ಹಸಿವು ಮುಕ್ತ, ಬಡತನ ಮುಕ್ತ, ಮೌಢ್ಯ ಮುಕ್ತ ಹಾಗೂ ಜಾತಿ ಮುಕ್ತ ಸಮಾಜ ವಾಗಿ ನಿರ್ಮಾಣವಾಗಬೇಕು ಎಂದು ತಿಳಿಸಿದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

