ರಾಜ್ಯದ ತಂಬಾಕು ಬೆಳೆಗಾರರಿಗೆ ಅನುಕೂಲ
ಪಾಲನೆ ಅಭಿಮತ
ಮಾನ್ಯರೆ,
2026ನೇ ಜನವರಿ ಮಾಹೆಯಲ್ಲಿ, ಹುಣಸೂರು, ಪಿರಿಯಾಪಟ್ಟಣ, ಎಚ್. ಡಿ. ಕೋಟೆ, ಅರಕಲಗೂಡು, ಸೇರಿದಂತೆ ವಿವಿಧ ಭಾಗಗಳ ತಂಬಾಕು ಬೆಳೆಗಾರರು, ಮೈಸೂರು- ಮಂಡ್ಯ ಜಿಲ್ಲಾ ರೈತ ಸಂಘಟನೆಗಳ ಜೊತೆಗೂಡಿ, ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಧರಣಿ ಮಾಡಿ, ತಂಬಾಕು ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸಲು ಜಿಲ್ಲಾಧಿಕಾರಿಗಳ ಮುಖಾಂತರ ಈ ಭಾಗದ ಲೋಕಸಭಾ ಸದಸ್ಯರು ಹಾಗೂ ಕೇಂದ್ರ ಸರ್ಕಾರದ ಉಕ್ಕು ಹಾಗೂ ಬೃಹತ್ ಕೈಗಾರಿಕೆ ಸಚಿವರಾದ ಹೆಚ್. ಡಿ. ಕುಮಾರಸ್ವಾಮಿ ಮನವಿ ಸಲ್ಲಿಸಿ ಒತ್ತಾಯಿಸಿದ್ದನ್ನ ಈ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ.
ಇದಕ್ಕೆ ಸ್ಪಂದಿಸಿದ ಕೇಂದ್ರ ಸಚಿವರಾದ ಹೆಚ್. ಡಿ. ಕುಮಾರಸ್ವಾಮಿಯವರು, ಕೇಂದ್ರ ಹಣಕಾಸು ಸಚಿವೆ ಶ್ರೀಮತಿ. ನಿರ್ಮಲಾ ಸೀತಾರಾಮನ್ ರವರನ್ನು ಭೇಟಿ ಮಾಡಿ, ಕರ್ನಾಟಕ ರಾಜ್ಯದ ತಂಬಾಕು ಬೆಳೆಗಾರರ ಸಮಸ್ಯೆಗಳ ಮತ್ತು ಸಂಕಷ್ಟಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು, ಇದು ಅತ್ಯಂತ ಅವಶ್ಯಕತೆ ಇದ್ದು, ತಂಬಾಕು ಬೆಳೆಗಾರರ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಲು ಮನವಿ ಮಾಡಿದ್ದರು. ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೇಂದ್ರ ಹಣಕಾಸು ಸಚಿವೆ ಶ್ರೀಮತಿ.ನಿರ್ಮಲಾ ಸೀತಾರಾಮನ್ ರವರು ಒಂದು ತಿಂಗಳೊಳಗಾಗಿಯೇ ಎಫ್ ಬಿ ಸಿ ವಿ ತಂಬಾಕು ಮೇಲೆ ವಿಧಿಸಲಾಗಿದ್ದ ಶೇ. 18ರಷ್ಟು ಅಬಕಾರಿ ಸುಂಕವನ್ನು ತೆಗೆದು ಹಾಕಿದ್ದಾರೆ. ಹಾಗಾಗಿ ಇದು ತಂಬಾಕು ಬೆಲೆಗಾರರಿಗೆ ತುಂಬಾ ಪ್ರಯೋಜನ ಕಾರಿಯಾದ ಐತಿಹಾಸಿಕ ತೀರ್ಮಾನವಾಗಿದೆ.
ತಂಬಾಕು ಬೆಳೆಗಾರರ ಮನವಿಯನ್ನು ತಕ್ಷಣವೇ ಕೇಂದ್ರ ವಿತ್ತ ಸಚಿವರ ಗಮನಕ್ಕೆ ತಂದು ಸಮಸ್ಯೆ ಪರಿಹಾರಕ್ಕೆ ಶ್ರಮಿಸಿದ ಕೇಂದ್ರ ಉಕ್ಕು ಹಾಗೂ ಬೃಹತ್ ಕೈಗಾರಿಕೆ ಸಚಿವರಾದ ಹೆಚ್. ಡಿ. ಕುಮಾರಸ್ವಾಮಿ, ತಂಬಾಕು ಬೆಳೆ ಮೇಲಿದ್ದ ಶೇ. 18%ರಷ್ಟು ಅಬಕಾರಿ ಸುಂಕ ಕಡಿತ ಗೊಳಿಸುವ ಮೂಲಕ ತಂಬಾಕು ಬೆಳೆಗಾರರಿಗೆ ಬಹು ದಿನದ ಬೇಡಿಕೆ ಈಡೇರಿಸಿದ ಕೇಂದ್ರ ಸಚಿವರಾದ ಶ್ರೀಮತಿ. ನಿರ್ಮಲಾ ಸೀತಾರಾಮನ್ ರವರಿಗೆ ಹಾಗೂ ಈ ಪ್ರಕ್ರಿಯೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲಿಸಿ ಸಹಕರಿಸಿದ, ಎಲ್ಲರಿಗೂ, ಕರ್ನಾಟಕ ರಾಜ್ಯದ ಸಮಸ್ತ ರೈತ ಭಾಂಧವರ ಪರವಾಗಿ ಅಭಿನಂದನೆಗಳು.
– ಜಿ.ಧನಂಜಯ ದರಸಗುಪ್ಪೆ, ಉಪಾಧ್ಯಕ್ಷರು, ಜಿಲ್ಲಾ ಕೃಷಿಕ ಸಮಾಜ. ಮಂಡ್ಯ ಜಿಲ್ಲೆ.
