NEWS

ಹೈನುಗಾರಿಕೆ; ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣದ ಆಶಾಕಿರಣ : ಜಿ.ಪಂ.ಸಿಇಒ ಕೆ.ಆರ್.ನಂದಿನಿ.

ಪಾಲನೆ ನ್ಯೂಸ್

ಮಂಡ್ಯ: ಜಿಲ್ಲಾ ಪಂಚಾಯತ್ ನ ಕಾವೇರಿ ಸಭಾಂಗಣದಲ್ಲಿ ಇಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ -2026 ರ ಅಂಗವಾಗಿ ಪಶುಪಾಲನೆ ಮೂಲಕ ಮಹಿಳಾ ಸಬಲೀಕರಣ ಕಾರ್ಯಗಾರವನ್ನು ಆಯೋಜಿಸಲಾಯಿತು. ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯತ್ ಮಂಡ್ಯ ರವರು ಸದರಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ, ಮೊದಲಿಗೆ ಕಾರ್ಯಾಗಾರಕ್ಕೆ ಆಗಮಿಸಿದ್ದ ಎಲ್ಲರಿಗೂ ಮಹಿಳಾ ದಿನಾಚರಣೆಯ ಅಂಗವಾಗಿ ಶುಭ ಕೋರಿದರು.

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ವಿವಿಧ ರೀತಿಯ ಚಟುವಟಿಕೆಗಳನ್ನು ಹಮ್ಮಿಕೊಂಡು ಬಹುಮಾನ ವಿತರಣೆ ಮಾಡುವುದು ಮಾತ್ರ ಈ ಒಂದು ದಿನಾಚರಣೆಯ ಉದ್ದೇಶವಲ್ಲ. ಮಹಿಳೆಯರು ದಿನನಿತ್ಯದ ಜೀವನದಲ್ಲಿ ಅನುಭವಿಸುತ್ತಿರುವ/ಎದುರಿಸುತ್ತಿರುವ ಸಮಸ್ಯೆಗಳಿಗೆ ಕಂಡುಕೊಳ್ಳಬೇಕಾದ ಪರಿಹಾರಗಳನ್ನು ಹಾಗೂ ಜೀವನದಲ್ಲಿ ಮಹಿಳೆಯರನ್ನ ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ರೂಪಿಸಲು ಬೇಕಾಗಿರುವ ಅರಿವು/ಜ್ಞಾನ ಮತ್ತು ತರಬೇತಿಗಳನ್ನು ಸಂಪೂರ್ಣವಾಗಿ ನೀಡುವ ಕುರಿತು ಒಂದು ತಿಂಗಳುಗಳ ಕಾಲ ಮಹಿಳಾ ಸಬಲೀಕರಣಕ್ಕೆ ಅವಶ್ಯಕವಾಗಿ ಬೇಕಾಗುವ ಹಾಗೂ ಸಮಾನ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಹಲವು ರೀತಿಯ ಕಾರ್ಯಕ್ರಮಗಳನ್ನು ಗ್ರಾಮೀಣ ಮಹಿಳೆಯರಿಗೆಂದೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಗಂಡು ಹೆಣ್ಣು ಎಂಬ ಭೇದ ಭಾವವಿಲ್ಲದ/ತಾರತಮ್ಯವಿಲ್ಲದ ಸಮಾನತೆಯ ಸಮಾಜವನ್ನ ನೀಡಿದ್ದೇ ಅದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸುವುದು ಖಂಡಿತ ಹಾಗೂ ಮಹಿಳೆ ಎಂಬ ಕಾರಣಕ್ಕೆ ಅವರಿಗೆ ಸಲ್ಲಬೇಕಾದ ಸ್ಥಾನಮಾನ, ಗುರಿಗಳ ಕುರಿತು ಯಾರು ಸಹ ಕೇಳಿರುವುದಿಲ್ಲ, ಕುಟುಂಬದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳಿಗೆ ಮಹಿಳೆಯರೆಲ್ಲರೂ ಬದ್ಧರಾಗಿರುತ್ತಾರೆ ಎನ್ನುವ ಪರಿಸ್ಥಿತಿ ಇರುವುದನ್ನು ಕಾಣಬಹುದು ಎಂದು ತಿಳಿಸಿದರು.

ಮಹಿಳೆಯರು ತಮ್ಮ ಎಲ್ಲಾ ಕನಸುಗಳನ್ನು, ಆಸೆ-ಆಕಾಂಕ್ಷೆಗಳನ್ನು ಬದಿಗೊತ್ತಿ ನಿಸ್ವಾರ್ಥದಿಂದ ಜೀವನ ನಡೆಸುವುದೇ ನನ್ನ ಜೀವನದ ಉದ್ದೇಶವೆಂದು ಪರಿಗಣಿಸಿ, ಜೀವನ ನಡೆಸುತ್ತಿದ್ದಾರೆ. ಹಾಗೂ ಈ ರೀತಿಯಾದ ಪರಿಸ್ಥಿತಿಗಳನ್ನ ನೋಡಬಹುದಾಗಿದೆ. ಆದರೆ ಇದನ್ನೆಲ್ಲ ಮೇಟ್ಟಿ ನಿಂತು ನಿಮ್ಮ ಹೆಜ್ಜೆ ಗುರುತುಗಳನ್ನ ರೂಪಿಸಿಕೊಳ್ಳುವುದು ಅಗತ್ಯ ಎಂದು ತಿಳಿಸಿದರು.

ಸಮಾರು ಶೇಕಡ 80% ರಷ್ಟು ಗ್ರಾಮೀಣ ಮಹಿಳೆಯರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುತ್ತಾರೆ ಹಾಗೂ ಮನೆಯ ಎಲ್ಲಾ ಜವಾಬ್ದಾರಿಗಳನ್ನ ಹೊತ್ತುಕೊಂಡು ಕೆಲಸ ನಿರ್ವಹಿಸುತ್ತಿರುತ್ತಾರೆ. ಭಾರತವು ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದ್ದು, ಹಿಂದೆ ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಮುಕ್ತ ಅವಕಾಶಗಳನ್ನ ಕಲ್ಪಿಸಿಕೊಡಲಾಗುತ್ತಿರಲ್ಲಿಲ್ಲ ಆದರೆ ಪ್ರಸ್ತುತ ಸ್ಥಿತಿ ಬದಲಾಗಿದೆ. ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಮುಕ್ತ ಅವಕಾಶವನ್ನ ನೀಡಲಾಗುತ್ತಿದ್ದು, ಭಾರತವು ಅಭಿವೃದ್ಧಿ ಹೊಂದಿದ ದೇಶವಾಗಬೇಕಾದರೆ ಪ್ರತಿಶತ 50 ರಷ್ಟಿರುವ ಮಹಿಳೆಯರು ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸದೃಢರಾದಾಗ ಮಾತ್ರ ನಮ್ಮ ದೇಶವು ಅಭಿವೃದ್ಧಿ/ಪ್ರಗತಿ ಹೊಂದಿದ ದೇಶವಾಗಲು ಸಹಾಯವಾಗುತ್ತದೆ ಎಂದು ಬಹಳಷ್ಟು ಸಮೀಕ್ಷೆ ಹಾಗೂ ಹಲವು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆಂದು ಜಿ.ಪಂ. ಸಿಇಒ ತಿಳಿಸಿದರು.

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಮಹಿಳೆಯರಿಗೆ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ವೇದಿಕೆಗಳನ್ನ ಕಲ್ಪಿಸಿಕೊಡುವುದು ಈ ಯೋಜನೆಯ ಮಹತ್ವಾಕಾಂಕ್ಷಿಯಾಗಿದ್ದು, ಇದರಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದ್ದು, ರೈತರೊಡನೆ ನೇರ ಸಂಪರ್ಕ ಹೊಂದಿರುವ ಹಾಗೂ ದಿನನಿತ್ಯ ಒಡನಾಟದಲ್ಲಿರುವ ಕಾರಣ ಕರ್ನಾಟಕದಲ್ಲಿ ಶೇಕಡ 90% ಕ್ಕಿಂತ ಹೆಚ್ಚು ಮಹಿಳೆಯರು ಹೈನುಗಾರಿಕೆಗೆ ಅಪಾರವಾದ ಕೊಡುಗೆಯನ್ನ ನೀಡುತ್ತಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಹೈನುಗಾರಿಕೆಯಲ್ಲೂ ಸಹ ರಾಸುವಿನ ಹಾಲು ಕರೆಯುವುದರಿಂದ ಹಿಡಿದು, ಮೇವು ಕೊಡುವ, ಸಾಕುವ, ಡೈರಿಗೆ ಹಾಲು ಸರಬರಾಜು ಮಾಡುವ ಎಲ್ಲಾ ಕೆಲಸಗಳನ್ನ ನಿರ್ವಹಿಸುತ್ತಿದ್ದಾರೆ. ಮಹಿಳೆಯರು ಕೇವಲ ಕೃಷಿ ಕ್ಷೇತ್ರದಲ್ಲಿ ಮಾತ್ರ ಅವಲಂಬಿತರಾಗದೆ, ಇತರ ಆದಾಯ ಬರುವ ಚಟುವಟಿಕೆಗಳನ್ನು ಕೈಗೊಂಡು ಆರ್ಥಿಕವಾಗಿ ಸಬಲೀಕರಣ ಹೊಂದಲು ಹೈನುಗಾರಿಕೆ ಬಹಳ ಪ್ರಮುಖ ಪಾತ್ರ ವಹಿಸಿದೆ. ಪ್ರಸ್ತುತ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಈ ಹೈನುಗಾರಿಗೆಯಿಂದಲೇ ಹಲವು ಕುಟುಂಬಗಳು ಜೀವನ ನಿರ್ವಹಣೆ ಮಾಡುತ್ತಿದ್ದಾರೆಂದು ತಿಳಿಸಿದರು.

ಮಹಿಳೆಯರು ಹೈನುಗಾರಿಕೆಯನ್ನು ಅಳವಡಿಸಿಕೊಂಡು ವೈವಿದ್ಯಮಯ ಉತ್ಪನ್ನಗಳಾದ, ತುಪ್ಪ, ಬೇಣ್ಣೆ ಹಾಗೂ ಚೀಸ್ ಗಳನ್ನ ಉತ್ಪಾದನೆ ಹಾಗೂ ಮೌಲ್ಯವರ್ಧನೆ ಮಾಡಿ ಆರ್ಥಿಕವಾಗಿ ಸದೃಢಗೊಳ್ಳಬಹುದೆಂದು ತಿಳಿಸಿದರು. ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲೀಕರಣ ಹೊಂದುವುದು, ಆರ್ಥಿಕ ಸಬಲೀಕರಣದ ಮೇಲೆಯೇ ಸಾಮಾಜಿಕ ಸಬಲೀಕರಣ ನಿಂತಿದೆ ಎಂದು ತಿಳಿಸಿದರು.

ಈಗಾಗಲೇ ಲಿಂಗತ್ವ ದೌರ್ಜನ್ಯ, FNHW – ಫುಡ್ ನ್ಯೂಟ್ರಿಷನ್ ಹೆಲ್ತ್ ಅಂಡ್ ವಾಶ್, ಸ್ವಯಂ ರಕ್ಷಣೆ ಕರಾಟೆ, ಬೆಂಕಿ ಇಲ್ಲದೆ ಅಡುಗೆ ತಯಾರಿಸುವುದು, ಮಹಿಳೆಯರಿಗೆ ಕ್ರೀಡಾಕೂಟಗಳ ಆಯೋಜನೆ ಹಾಗೂ ಕೃಷಿ ಸಖಿಯರಿಗೆ – ಮೈಸೂರಿನ ಸಿ.ಎಫ್.ಟಿ.ಆರ್.ಐ. (CFTRI) ನ ವಿಜ್ಞಾನಿಗಳಿಂದ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಕಾರ್ಯಾಗಾರಗಳನ್ನ ಹಮ್ಮಿಕೊಳ್ಳಲಾಗಿದೆ ಎಂದು ಜಿ.ಪಂ.ಸಿಇಒ ತಿಳಿಸಿದರು.

ಇಂದಿನ ಕಾರ್ಯಗಾರವು ಪಶುಪಾಲನೆ ಮೂಲಕ ಮಹಿಳಾ ಸಬಲೀಕರಣದಿಂದ ಮಹಿಳೆಯರ ಆರ್ಥಿಕ ಸ್ವಾವಲಂಬನೆಯನ್ನು ಹೆಚ್ಚಿಸುವ ದಿಟ್ಟ ಹೆಜ್ಜೆಯಾಗಿದ್ದು, ಪಶು ಸಖಿಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಹೈನುಗಾರಿಕೆಯಲ್ಲಿ ಮಹಿಳೆಯರ ಪಾತ್ರ ಕುರಿತು ಡಾ.ಸಿ.ಆರ್.ಗೀತ ಪಶು ವೈದ್ಯಾಧಿಕಾರಿಗಳು ಇಂದು ಮಹಿಳೆಯರು ಹೈನುಗಾರಿಕೆ, ಕೋಳಿ ಸಾಕಾಣಿಕೆ ಹಾಗೂ ಕುರಿ/ಮೇಕೆ ಸಾಕಾಣಿಕೆಗಳಲ್ಲಿ ಉದ್ಯಮಿಗಳಾಗುತ್ತಿದ್ದಾರೆ. ಆದರೆ ಆ ಉದ್ಯಮದಲ್ಲಿ ಯಶಸ್ವಿಯಾಗಲು ತರಬೇತಿ ಕೊರತೆ, ಆರ್ಥಿಕ ಸೌಲಭ್ಯಗಳ ಅಭಾವ, ಶ್ರಮಕ್ಕೆ ತಕ್ಕ ಪ್ರತಿಫಲವಿಲ್ಲದಿರುವುದು, ಮಾಹಿತಿ ಮತ್ತು ತಂತ್ರಜ್ಞಾನದ ಕೊರತೆಗಳನ್ನ ಕಾಣಬಹುದು, ಇದರಿಂದ ಹೊರಬಂದು ಯಶಸ್ವಿ ಉದ್ಯಮಿಗಳಾಗಬೇಕಾದರೆ ಮಹಿಳೆಯರಿಗೆ ವಿಶೇಷ ತರಬೇತಿ ನೀಡುವುದು, ಬ್ಯಾಂಕುಗಳಿಂದ ಸಾಲ ಸೌಲಭ್ಯಗಳನ್ನ ನೀಡುವುದು ಹಾಗೂ ಪಶು ವೈದ್ಯಕೀಯ ಸೌಲಭ್ಯಗಳನ್ನ ಗ್ರಾಮ ಮಟ್ಟಕ್ಕೆ ತಲುಪಿಸುವುದು. ಹಾಗೂ ಸ್ವ-ಸಹಾಯ ಗುಂಪುಗಳನ್ನ ಬಲಪಡಿಸಬೇಕೆಂದು ತಿಳಿಸಿದರು.

ಪಶುಪಾಲನೆ ಆಧಾರಿತ ಜೀವನೋಪಾಯ ಚಟುವಟಿಕೆಗಳಲ್ಲಿ ಪಶು ಸಖಿಯರ ಪಾತ್ರ ಕುರಿತು ಡಾ.ಶಿವಲಿಂಗಯ್ಯ ಉಪನಿರ್ದೇಶಕರು, ಪಶುಪಾಲನೆ ಇಲಾಖೆ ಮಂಡ್ಯ ರವರು ಮಾತನಾಡಿ, ಭಾರತ ದೇಶವು ಪ್ರಮುಖವಾಗಿ ಕೃಷಿ ಆಧಾರಿತ ಆರ್ಥಿಕ/ಸಾಮಾಜಿಕ ಬೆಳವಣಿಗೆಯನ್ನು ಹೊಂದಿರುವ ಪ್ರದೇಶ, ನಮ್ಮ ದೇಶದ ಶೇಕಡ 80% ರಷ್ಟು ಗ್ರಾಮೀಣ ಭಾಗದ ಜನರ ಜೀವನೋಪಾಯವು ಕೃಷಿ ಹಾಗೂ ಕೃಷಿ ಆಧಾರಿತ ಕಸುಬುಗಳಿಂದ ಕೂಡಿದೆ. ಇದರಲ್ಲಿ ಪಶುಸಂಗೋಪನೆಯು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ತಿಳಿಸಿದರು.

ಪ್ರಮುಖವಾಗಿ ಗ್ರಾಮೀಣ ಪ್ರದೇಶಗಳ ಕುಟುಂಬ ವ್ಯವಸ್ಥೆಯ ನಿರ್ವಹಣೆಯು ಮಹಿಳೆಯರ ಮೇಲೆ ಅವಲಂಬಿತವಾಗಿರುತ್ತದೆ. ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ರ್ಟಗಳಲ್ಲಿ ಜಾನುವಾರಗಳ ಸಾಕಾಣಿಕೆ, ಆರ್ಥಿಕ ಸ್ವಾವಲಂಬನೆ ಹಾಗೂ ಜಾನುವಾರುಗಳ ಹಾಲು, ಮೊಟ್ಟೆ, ಮಾಂಸ ಇತ್ಯಾದಿ ಪೌಷ್ಠಿಕ ಆಹಾರದ ರೂಪದಲ್ಲಿ ಉಪಯೋಗಿಸಲ್ಪಡುತ್ತದೆ ಎಂದು ತಿಳಿಸಿದರು.

ಡಾ.ಎನ್.ಎಂ ಸಿದ್ದರಾಮು ಉಪನಿರ್ದೇಶಕರು, ಪಾಲಿ ಕ್ಲಿನಿಕ್, ಮಂಡ್ಯ ರವರು ಬೇಸಿಗೆ ಕಾಲದಲ್ಲಿ ಜಾನುವಾರುಗಳ ನಿರ್ವಹಣೆ ಕುರಿತು ಸವಿಸ್ತಾರವಾಗಿ ಕಾರ್ಯಾಗಾರದಲ್ಲಿ ಪಶುಸಖಿಯರಿಗೆ ಮಾಹಿತಿ ನೀಡಿದರು.

ಹೈನುಗಾರಿಕೆ: ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣದ ಆಶಾಕಿರಣ ಎಂಬುವುದರ ಕುರಿತು ಶ್ರೀಮತಿ ಚಂದ್ರಿಕಾ ಕೋಂ ಪ್ರಹ್ಲಾದ್, ಮಹಿಳಾ ಹೈನುಗಾರರು, ಮಲ್ಲಿಗಹಳ್ಳಿ, ಬಿ,ಜಿ,ಪುರ ಹೋಬಳಿ, ಮಳವಳ್ಳಿ ತಾಲ್ಲೂಕು, ಮಂಡ್ಯ ಜಿಲ್ಲೆ ರವರು ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಶಿವಲಿಂಗಯ್ಯ – ಉಪ ಕಾರ್ಯದರ್ಶಿ(ಆಡಳಿತ) ಜಿ.ಪಂ.ಮಂಡ್ಯ. ಎಸ್.ಸುಂದರ್ ರಾಜ್ – ಯೋಜನಾ ನಿರ್ದೇಶಕರು ಜಿ.ಪಂ.ಮಂಡ್ಯ. ಶ್ರೀ ಹರ್ಷ – ಸಹಾಯಕ ಯೋಜನಾಧಿಕಾರಿ ಜಿ.ಪಂ.ಮಂಡ್ಯ, ಶ್ರೀ ರವಿ ತರಬೇತುದಾರರು, BOB-RSETI, ಮಂಡ್ಯ. ಎನ್.ಆರ್.ಎಲ್.ಎಂ ಸಿಬ್ಬಂದಿಗಳು, ಎಲ್ಲಾ ತಾಲ್ಲೂಕಿನ ಪಶು ಸಖಿಯರು ಉಪಸ್ಥಿತರಿದ್ದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಇಲ್ಲ‌ ; ಪೆಟ್ರೋಲಿಯಂ ಸಚಿವಾಲಯ ಸ್ಪಷ್ಟಪಡಿಸಿದೆ

ಮಲ್ಯ ಬ್ರಿಟನ್‌ನಿಂದ ಹೊರಹೋಗಲು ನಿರ್ಬಂಧವಿದೆ

ಕನ್ನಿಕಾ ಶಿಲ್ಪ ನವೋದಯ ಎಜುಕೇಷನ್ ಟ್ರಸ್ಟ್‌ನ 56 ವಿದ್ಯಾರ್ಥಿಗಳು ಉತ್ತೀರ್ಣ : ಕನ್ನಿಕಾ

Leave a Comment