NEWS

ರಂಗಭೂಮಿ ಮತ್ತು ಜನಪದ ಕಲಾಪ್ರಕಾರಗಳ ಉಚಿತ ತರಬೇತಿ ಶಿಬಿರ

ಪಾಲನೆ ನ್ಯೂಸ್

ಮೈಸೂರು: ವಿಜ್ಞಾನ ಮತ್ತು ವೈಚಾರಿಕತೆಯಿಂದ ಜನರನ್ನು ಜಾಗೃತರನ್ನಾಗಿಸಲಾಗದ ಕಾರ್ಯವನ್ನು ಜಾನಪದ ಮತ್ತು ರಂಗಭೂಮಿಯಿಂದ ಮಾಡಲು ಸಾಧ್ಯವಾಗಿದೆ ಎಂದು ಸಾಮಾಜಿಕ ಹೋರಾಟ ಗಾರ ಅಹಿಂದ ಜವರಪ್ಪ ತಿಳಿಸಿದರು. ನಗರದ ಕಲಾಮಂದಿರದ ಆವರಣದಲ್ಲಿರುವ ಕಿರುರಂಗಮಂದಿರದಲ್ಲಿ ಗೌತಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸೇವಾ ಟ್ರಸ್ಟ್ ವತಿಯಿಂದ ನಡೆದ ರಂಗ ಭೂಮಿ ಮತ್ತು ಜನಪದ ಕಲಾ ಪ್ರಕಾರಗಳ ಉಚಿತ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನುಸರಿಸುತ್ತಿ ರುವ ಕಾಲಘಟ್ಟದಲ್ಲಿ ರಂಗಭೂಮಿ ಮತ್ತು ಜಾಪ ನದ ಕಲೆಗಳಿಗೆ ತೊಡಗಿಸಿಕೊಂಡು ಯಶಸ್ಸು ಗಳಿಸು ವುದು ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಕಲೆಗಳು ಜನರ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತಿವೆ ಎಂದು ತಿಳಿಸಿದರು. ಸಮಾಜದಲ್ಲಿ ನಡೆಯುತ್ತಿರುವ ದೌರ್ಜನ್ಯ, ಮೌಡ್ಯ, ಅಸ್ಪೃಶ್ಯತೆ, ತಾರತಮ್ಯದ ಬಗ್ಗೆ ಜನರನ್ನು ಎಚ್ಚರಿಸುವ ಕೆಲಸವನ್ನು ರಂಗಭೂಮಿ ಮಾಡುತ್ತಿದೆ. ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದೆ ಆದರೆ ಸಮಾಜದ ಎಲ್ಲಾ ಅಡತಡೆಗಳನ್ನು ಎದುರಿಸುವ ಸವಾಲುಗಳನ್ನು ಎದುರಿಸುವವಿದ್ದತ್, ಸಾಮರ್ಥ್ಯ ವನ್ನು ರಂಗಭೂಮಿ ನೀಡುತ್ತದೆ ಎಂದು ಹೇಳಿದರು. ಶಿಬಿರಾರ್ಥಿಗಳಿಂದ ಜಾನಪದ ಕಲೆಗಳಾದ ಡೊಳ್ಳು ಕುಣಿತ, ಪೂಜಾಕುಣಿತ, ಕಂಸಾಳೆ ನೃತ್ಯ ಪ್ರದರ್ಶನಗೊಂಡಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೆಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ನಂಜನಗೂಡು ಸಮಾಜ ಕಲ್ಯಾಣ ಇಲಾಖೆ ಗ್ರೇಡ್-1 ಸಹಾಯಕ ನಿರ್ದೇಶಕ ಕೆ.ಸಿದ್ದಲಿಂಗು, ಮೈಸೂರು ಅಬ ಕಾರಿ ಉಪ ನಿರೀಕ್ಷಕ ಪಿ.ರಾಘವೇಂದ್ರ, ಮೈಸೂರಿನ ವಿಶ್ವೇಶ್ವರನಗರ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋ ತರ ಪುರುಷರ ವಿದ್ಯಾರ್ಥಿನಿಲಯ ಪಾಲಕ ಕೆ.ಮ ಹೇಶ್, ರಂಗ ಭೂಮಿ ನಿರ್ದೇಶಕ ದಿನೇಶ್ ಚಮ್ಮಾ ಳಿಗೆ, ಗೌತಮ ಟ್ರಸ್ಟ್ ಅಧ್ಯಕ್ಷ ಕೃಷ್ಣಮೂರ್ತಿ ತಲಕಾಡು ಹಾಜರಿದ್ದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಟಿ-20 ವಿಶ್ವಕಪ್: ಚೊಚ್ಚಲ ಪಂದ್ಯ ಗೆದ್ದ ಇಟಲಿ

ರೈತರಿಂದ ತಂಬಾಕು ಅಧಿಕ ಬೆಲೆಗೆ ಖರೀದಿಸಲು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸಭೆ

ಸೊಪ್ಪುಗಳೆಂಬ ಸರ್ವಶ್ರೇಷ್ಠ ಸಹಜ ಆಹಾರ

Leave a Comment