ಪಾಲನೆ ನ್ಯೂಸ್
ಮಂಡ್ಯ: ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಮಂಡ್ಯದ ವೀನಸ್ ಅಕಾಡೆಮಿಯ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಹುಮಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಟಿಆರ್‌ಎಸ್ ಅಕಾಡೆಮಿ ವತಿಯಿಂದ ತುಮಕೂರಿನ ಎಸ್‌ಐಟಿ ಕಾಲೇಜಿನ ಬಿರ್ಲಾ ಆಡಿಟೋರಿಯಂನಲ್ಲಿ ನಡೆದ ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಮಂಡ್ಯದ ವೀನಸ್ ಅಕಾಡೆಮಿಯ 20ಕ್ಕೂ ಹೆಚ್ಚು ಮಕ್ಕಳು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿದ್ದು, ಇರೂ ಬಹುಮಾನಗಳನ್ನು ಪಡೆಯುವ ಮೂಲಕ ಮಂಡ್ಯದ ಕೀರ್ತಿ ಪತಾಕೆ ಹಾರಿಸಿದ್ದಾರೆ ಎಂದು ಸಂಸ್ಥೆಯ ಮುಖ್ಯಸ್ಥರಾದ ಅರುಣಾ ಈಶ್ವರ್ ತಿಳಿಸಿದ್ದಾರೆ. ಸ್ಪರ್ಧೆಯಲ್ಲಿ ಚಾಂಪಿಯನ್ಸ್ ಆಫ್ ಚಾಂಪಿಯನ್ಸ್ ವಿಭಾಗದಲ್ಲಿ ಯೋಶಿಕ್ ವಿಹಾನ್ ಈ ಹಾಗೂ ಚಾರ್ವಿ ಸಿ.ಎಸ್. ಚಾಂಪಿಯನ್ಸ್ ವಿಭಾಗದಲ್ಲಿ ರುಚಿತ್ ಎಂ, ಹೆತ್ವಿಕ್ ಎಲ್, ಟಾಪರ್ ವಿಭಾಗದಲ್ಲಿ ಆರಾಧ್ಯ ಸಿ, ವರ್ಣಿಕ ಎಂ. ಶ್ರೇಯಾ ಎ, ಯೋಗರಾಜ್ ಎಂ, ಮನ್ವಿತ ಜಿ.ಎಲ್, ಶಾಶ್ವತ ಬಿ. ಗೌಡ, ವಿನ್ನರ್ ವಿಭಾಗದಲ್ಲಿ ಯುಕ್ತ ಎಸ್.ಹೆಚ್, ಪುನರ್ವ ಸಿ.ಎಸ್, ಶಾಯಿಶ್ ಜಗದಾಳ್ ಪಿ. ಶ್ರೀದಾ ವಿ, ಅಭಯ್ ಸೂರ್ಯ, ಸಾನ್ವಿ ಕೆ.ಪಿ, ರನ್ನರ್ ವಿಭಾಗದಲ್ಲಿ ಪೂರ್ಣವ್ ಎಸ್.ಬಿ. ಚಾಲೆಂಜರ್ಸ್ ವಿಭಾಗದಲ್ಲಿ ಈಶನ್ ಆರ್, ಭಾರದ್ವಾಜ್, ಮನ್ವಿತ್‌ಗೌಡ ಎಸ್ ಹಾಗೂ ಹಿತಶ್ರೀ ಎಲ್ ರವರು ಬಹುಮಾನ ಪಡೆದಿದ್ದಾರೆ.
ಪಾಲನೆ.ಇನ್ ವಾಟ್ಸ್ ಆಪ್ ಗುಂಪಿಗೆ ಸೇರಿರಿ.


