NEWS

ಜ.30 ರಂದು ಪ್ರತಿಭಟನೆ: ಹೊರ ಗುತ್ತಿಗೆ ನೌಕರರ ಎಚ್ಚರಿಕೆ

ಪಾಲನೆ ನ್ಯೂಸ್

ಮಂಡ್ಯ: ರಾಜ್ಯ ಹಣಕಾಸು ಇಲಾಖೆಯ ಮುಂದಿರುವ ಹೊರಗುತ್ತಿಗೆ ನೌಕರರ ನೇರಪಾವತಿ ಕಡತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿ ಹಾಕದಿದ್ದರೆ ಜ.30 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ಮಂಡ್ಯ ಜಿಲ್ಲಾ ಹೊರ ಗುತ್ತಿಗೆ ವಾಹನ ಚಾಲಕರ ಸಂಘದ ಅಧ್ಯಕ್ಷ ದೀನೆಶ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರನ್ನು ಈಗಾಗಲೇ ನೇರಪಾವತಿಗೆ ತರಲಾಗಿದೆ. ಆದರೆ ಪೌರ ಕಾರ್ಮಿಕರೊಟ್ಟಿಗೆ ಸ್ವಚ್ಚತೆಯಲ್ಲಿ ಭಾಗಿ ಯಾಗುವ ವಾಹನ ಚಾಲಕರು ಹಾಗೂ ಕ್ಲೀನರ್, ನೀರು ಸರಬರಾಜು ಸಹಾಯ ಕರು ಸೇರಿದಂತೆ 16,794 ಹೊರಗುತ್ತಿಗೆ ನೌಕರರ ನೇರಪಾವತಿ ಕಡತ ಮೂರನೇ ಬಾರಿ ಹಣಕಾಸು ಇಲಾಖೆಗೆ ಮಂಡಿಸಲಾಗಿದೆ ಎಂದು ಹೇಳಿದರು.

ನಗರ ಸ್ಥಳೀಯ ಸಂಸ್ಥೆಗಳ ಕಾರ್ಮಿಕರ ನಡುವಿನ ತಾರತಮ್ಯ ಕೊನೆಗಾಣಲು ಈ ಬಾರಿಯ ಬಜೆಟ್‌ನಲ್ಲಿ ನೇರಪಾವತಿ ಘೋಷಣೆಯಾಗುವಂತೆ ಕಡತಕ್ಕೆ ಅನುಮೋದನೆ ನೀಡಬೇಕು. ಮೀನಮೇಷ ಎಸಗಿದಲ್ಲಿ ಮುಖ್ಯಮಂತ್ರಿಗಳೇ ತಾರತಮ್ಯ ಎಸಗಿದಂತಾಗುತ್ತದೆ ಎಂದು ದೊರಿದರು.

ಪ್ರಸಕ್ತ ಬಜೆಟ್ ನಲ್ಲಿ ಹೊರಗುತ್ತಿಗೆ ನೌಕರರಿಗೆ ನೇರಪಾವತಿ ಘೋಷಣೆ ಮಾಡದಿದ್ದರೆ ಮುಂದಿನ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವ ಕುರಿತು ಪರಾಮರ್ಶೆ ನಡೆಸಲಾಗುವುದು. ಆದ್ದರಿಂದ ಬಜೆಟ್‌ನಲ್ಲಿ ಸಕಾರಾತ್ಮಕ ನಿರ್ಧಾರ ಘೋಷಿಸುವಂತೆ ಆಗ್ರಹಿಸಿದರು.

ಗೋಷ್ಠಿಯಲ್ಲಿ ಪೌರಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ನಾಗರಾಜು, ರಾಜು ಗೌಡ, ಚಿನ್ನರಾಜು, ಪುನಿತ್, ವೆಂಕಟಲಕ್ಷ್ಮಿ ಇದ್ದರು.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ಆಧುನಿಕ ಸಮಾಜದಲ್ಲೂ ಅಸ್ಪೃಶ್ಯತೆ ಆಚರಣೆ ಒಂದು ಸಾಮಾಜಿಕ ಪಿಡುಗು

ಭಗೀರಥರ ಚಿಂತನೆ, ಸಾಧನೆಯನ್ನು ಮಕ್ಕಳಗೆ ತಿಳಿಸುವ ಕೆಲಸವಾಗಬೇಕು

ಮಂಡ್ಯ – ಮೈಸೂರು ಬಸ್ ವ್ಯವಸ್ಥೆ ಕಲ್ಪಿಸಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ಸೂಕ್ತ ಕ್ರಮ ವಹಿಸಿ

Leave a Comment