NEWS

ಭಗೀರಥರ ಚಿಂತನೆ, ಸಾಧನೆಯನ್ನು ಮಕ್ಕಳಗೆ ತಿಳಿಸುವ ಕೆಲಸವಾಗಬೇಕು

ಕಠಿಣ ಪರಿಶ್ರಮ(ಪ್ರಯತ್ನ) ದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ : ಡಾ. ಕುಮಾರ

ಪಾಲನೆ ನ್ಯೂಸ್

ಮಂಡ್ಯ : ಪೋಷಕರು ತಮ್ಮ ಮಕ್ಕಳಗೆ ನಮ್ಮ ನಾಡು,ನುಡಿ ಇತಿಹಾಸ ಕುರಿತು ಹಾಗೂ ಭಗೀರಥರ ಚಿಂತನೆ ಸಾಧನೆಯನ್ನು ತಿಳಿಸುವ ಕೆಲಸವಾಗಬೇಕು ಹಾಗೂ ತಮ್ಮ ಮಕ್ಕಳಲ್ಲಿ ಕಠಿಣ ಪರಿಶ್ರಮದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ ಎಂಬುದನ್ನು ಅರ್ಥೈಸಬೇಕು ಎಂದು ಎಂದು ಜಿಲ್ಲಾಧಿಕಾರಿಗಳಾದ ಡಾ. ಕುಮಾರ ರವರು ತಿಳಿಸಿದರು.

ಇಂದು ಮಂಡ್ಯ ನಗರದ ಕರ್ನಾಟಕ ಸಂಘದ ಕೆ. ವಿ. ಶಂಕರೇಗೌಡ ಭವನದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಗಂಗೆಯನ್ನು ಭೂಮಿಗೆ ತರಲು ಹಲವು ಬಾರಿ ವಿಫಲ ವಾದರೂ ಸಹ ಅವಿರತ ಶ್ರಮದಿಂದ ಗಂಗೆಯನ್ನು ಭೂಮಿಗೆ ತಂದು ನೀರಿನ ಬವಣೆಯನ್ನು ನೀಗಿಸುವ ಮೂಲಕ ಸತತ ಪ್ರಯತ್ನಕ್ಕೆ ಭಗೀರಥರು ಶ್ರಮ ಎಂದು ಮನೆಮಾತಾಗಿದ್ದಾರೆ. ಆದ್ದರಿಂದ ನೀರನ್ನು ಮಿತವಾಗಿ ಬಳಸಬೇಕು ಜಲ ಸಂರಕ್ಷಣೆ ಮಾಡುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.

ನಂತರ ಭಗೀರಥ ಶ್ರೀಗಳ ಹುಟ್ಟು. ಬೆಳವಣಿಗೆ ಅವರ ಜೀವನಗಾಥೆಯ ಕುರಿತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥ ಪಾಲಕರಾದ ಡಾ. ಪಿ. ಸಿದ್ದರಾಮು ವಿಶೇಷ ಉಪನ್ಯಾಸ ನೀಡಿದರು.

ಇದೆ ಸಂದರ್ಭದಲ್ಲಿ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಪಡೆದ ಪ್ರತಿಭಾನ್ವಿತಾ ವಿದ್ಯಾರ್ಥಿಗಳಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಮಂಡ್ಯ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಸಚಿನ್ ಚೆಲುವರಾಯ ಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ. ವಿ. ನಂದೀಶ್, ಕರ್ನಾಟಕ ಸಂಘದ ಅಧ್ಯಕ್ಷ ಪ್ರೋ. ಜಯಪ್ರಕಾಶ್ ಗೌಡ,ಜೈ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ನಾರಾಯಣಗೌಡ, ನಾಗರತ್ನ, ಸಂದೇಶ್ ಸೇರಿದಂತೆ ಉಪ್ಪಾರ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಬನ್ನಹಳ್ಳಿ ಶಾಲಾ ವಾರ್ಷಿಕೋತ್ಸವ:  ಸಾಂಸ್ಕೃತಿಕ ವೈಭವ ಮೆರೆದ ಚಿಣ್ಣರು

ಹೈಕೋರ್ಟ್‌ನಲ್ಲೇ ವಿಚಾರಣೆ ಅಂಜನಾದ್ರಿ ಪೂಜಾ ವಿವಾದ

ಶಿವಪುರ ಸತ್ಯಾಗ್ರಹ ಸೌಧಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ

Leave a Comment