NEWS

ಕೊರೋನಾ ರೀತಿ ಹಂಟು ವೈರಸ್ ಪತ್ತೆ: 8 ಜನರಲ್ಲಿ ದೃಢ 3 ಸಾವು

ಪಾಲನೆ ನ್ಯೂಸ್

ಜಿನೇವಾ: ಇಡೀ ಜಗತ್ತು ಕೊರೋನಾ ನೀಡಿದ ಆಘಾತದಿಂದ ಚೇತರಿಸಿಕೊಳ್ಳುತ್ತಿರುವ ಹೊತ್ತಿ ನಲ್ಲೇ, ಅರ್ಜೆಂಟೀನಾದಿಂದ ಪಶ್ಚಿಮ ಆಫ್ರಿಕಾ ದತ್ತ ಹೊರಟಿರುವ ಹಡಗೊಂದರಲ್ಲಿ ‘ಹಂಟು ವೈರಸ್’ ಎಂಬ ಇದೇ ರೀತಿಯ ವೈರಸ್ ಒಂದು ಪತ್ತೆಯಾಗಿದೆ. ಇದು ಈಗಾಗಲೇ 8 ಜನರಲ್ಲಿ ದೃಢಪಟ್ಟಿದ್ದು, ಮೂವರು ಮೃತಪಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ಭಾರೀ ಕಳವಳ ವ್ಯಕ್ತಪಡಿಸಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹಡಗಿನ ಸಂಪರ್ಕದಲ್ಲಿ ದ್ದವರ ಮೇಲ್ವಿಚಾರಣೆ ನಡೆಸುತ್ತಿದೆ. ಏನಿದು ವೈರಸ್? ಹೇಗೆ ಹರಡುತ್ತದೆ?: ಹಂಟು ವೈರಸ್ ಸಾಮಾನ್ಯವಾಗಿ ಇಲಿ, ಹೆಗ್ಗಣ ಮತ್ತು ಇತರ ದಂಶಕಗಳಲ್ಲಿ ಕಂಡುಬರುತ್ತದೆ. ಮನುಷ್ಯರಿಗೆ ಈ ಸೋಂಕು ತಗುಲಿದರೆ ಜ್ವರ, ತಲೆನೋವು, ಮೈಕೈ ನೋವು, ಜೀರ್ಣಕೋಶದ ಸಮಸ್ಯೆ, ನಂತರ ತೀವ್ರ ಉಸಿರಾಟದ ಸಮಸ್ಯೆ ಉಂಟುಮಾಡುತ್ತದೆ. ಅಲ್ಲದೆ, ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತಿದ್ದು, ಸಾವನ್ನೂ ಉಂಟುಮಾಡಬಹುದು.‌

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಜನವರಿ 26ರಂದು 77ನೇ  ಗಣರಾಜ್ಯೋತ್ಸವ ದಿನಾಚರಣೆ

ಅರ್ಜುನ ಸ್ಮಾರಕ ಲೋಕಾರ್ಪಣೆ

ದೈಹಿಕ ಶಿಕ್ಷಣ ನಿರ್ದೇಶಕ ಲೋಕೇಶ ಕೆ.ಆರ್ .ಗೆ  ಪಿಹೆಚ್.ಡಿ ಪದವಿ

Leave a Comment