ಪಾಲನೆ ನ್ಯೂಸ್
ಮಂಡ್ಯ: ಕೆಲಸ ಯಾವುದೇ ಆದರೂ ಸರಿ ಎಲ್ಲರೂ ಶಿಕ್ಷಣ ಪಡೆಯುವುದು ಕಡ್ಡಾಯವಾಗಿರಬೇಕು ಇದರ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಮಡಿವಾಳ ಮಾಚಿ ದೇವರ ಸಂದೇಶವನ್ನು ತಮ್ಮ ಜೀವನದಲ್ಲಿ ಅನುಸರಿಸಬೇಕು ಎಂದು ಅಪರ ಪೊಲೀಸ್ ವರಿಷ್ಟಧಿಕಾರಿ ಗಂಗಾಧರಸ್ವಾಮಿ ಅವರು ಹೇಳಿದರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ನಡೆದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ನಾವು ಸ್ಪರ್ಧಾತ್ಮಕ ಯುಗದಲ್ಲಿ ಬದುಕುತ್ತಿದ್ದೇವೆ. ಯುವ ಪೀಳಿಗೆ ಎಚ್ಚೆತ್ತು ಸ್ಪರ್ಧಾತ್ಮಕ ಜಗತ್ತಿನಲ್ಲಿ ಗೆಲ್ಲಬೇಕು. ಯುವ ಜನತೆ ಮಡಿವಾಳ ಮಾಚಿದೇವ ಅವರ ಆದರ್ಶ, ಮೌಲ್ಯಗಳನ್ನು ಪಾಲಿಸಬೇಕು ಎಂದು ಹೇಳಿದರು.
ಕನ್ನಡ ಉಪನ್ಯಾಸಕರಾದ ಸಬ್ಬನಹಳ್ಳಿ ನಾಗರಾಜು ವಿಶೇಷ ಉಪನ್ಯಾಸ ನೀಡಿ ಮಾತನಾಡಿ 12 ನೇ ಶತಮಾನದಲ್ಲಿ ಕಾಯಕವೇ ಕೈಲಾಸ ಎಂಬ ಭಾವನೆಯನ್ನು ಸಮಾಜಕ್ಕೆ ಸಾರಿದ ಕಾಲಘಟ್ಟದಲ್ಲಿ ಅನುಭವ ಮಂಟಪದಲ್ಲಿ 35 ಮಹಿಳೆಯರು ಸೇರಿದಂತೆ 250 ಶರಣರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಿದ್ದರು. ರಾಜರ ಆಡಳಿತ ಕಾಲದಲ್ಲಿ ಸಮಾಜದ ನಿರ್ಮಾಣ ಮಾಡುವಲ್ಲಿ ಶರಣರ ಪಾತ್ರ ಅಪಾರ ಎಂದು ಮಡಿವಾಳ ಮಾಚಿದೇವರ ಕುರಿತು ಮಾಹಿತಿ ನೀಡಿದರು.

ದೇವರಾಜು ಅರಸು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾಧ್ಯಕ್ಷ ಸಂದೇಶ್ ಮಾತನಾಡಿ. ಸಮಾಜದ ಅಶುಚಿತ್ವವನ್ನು ಶುಚಿಗೊಳಿಸುವ ಕಾಯಕ ಮಾಡುವ ಮಡಿವಾಳ ಸಮುದಾಯದ ವರ್ಗದವರು ಶಿಕ್ಷಣವನ್ನು ಪಡೆಯುವ ಮೂಲಕ ಸಾಮಾಜಿಕವಾಗಿ. ಆರ್ಥಿಕವಾಗಿ ಸಬಲರಾಗಬೇಕು ಜೊತೆಗೆ ಮಡಿವಾಳ ಮಾಚಿದೇವರ ಆದರ್ಶವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ಡಾ.ಬಿ. ವಿ. ನಂದೀಶ್ ಮುಖಂಡರಾದ ಮಡಿವಾಳ ಸಂಘದ ಜಿಲ್ಲಾಧ್ಯಕ್ಷ ಡಿ. ರಮೇಶ್. ವೆಂಕಟೇಶ್, ಕಾಂತರಾಜು ಚಿಕ್ಕರಳ್ಳಿ, ಸೋಮಶೇಖರ್, ಸಿದ್ದಶೆಟ್ಟಿ, ಮದ್ದೂರು ಜಯರಾಮು, ಹನುಮಂತು, ತಾ ಳ ಶಾಸನ ಮೋಹನ್, ರವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪಾಲನೆ.ಇನ್ ವಾಟ್ಸ್ ಆಪ್ ಗುಂಪಿಗೆ ಸೇರಿರಿ.


