NEWS

ರೈತರಿಗೆ ನಿವೇಶನ ಕೊಡಿಸುವುದು ಸರ್ಕಾರ, ಗ್ರಾಮ ಪಂಚಾಯಿತಿ ಹಾಗೂ ಶಾಸಕರ ಕರ್ತವ್ಯ: ಪಿ. ರವಿಕುಮಾರ್

ಪಾಲನೆ ನ್ಯೂಸ್

ಮಂಡ್ಯ: ದೇಶದ ಜನರು ನಿವೇಶನ ಇಲ್ಲದೆ ಇರಬಾರದು ಎಲ್ಲರೂ ನಿವೇಶನ ಹೊಂದಿರಬೇಕು ಎನ್ನುವುದು ಈ ದೇಶದ ಕಾನೂನು, ನಿವೇಶನ ರಹಿತರಿಗೆ ನಿವೇಶನ ಕೊಡಿಸುವುದು ಸರ್ಕಾರ, ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ಶಾಸಕನ ಕರ್ತವ್ಯವಾಗಿದೆ ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ರವಿಕುಮಾರ್ ಅವರು ಹೇಳಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ , ಹಲ್ಲೆಗೆರೆ ಗ್ರಾಮ ಪಂಚಾಯಿತಿ ಕಾರ್ಯಾಲಯದ ವತಿಯಿಂದ ಬಸರಾಳು ಹೋಬಳಿಯ ತಂಗಳಗೆರೆಯಲ್ಲಿ ನಡೆದ ರವಿಗೂಡು – ಪಿ. ರವಿ ಕುಮಾರ್ ಗೌಡ ಆಶ್ರಯ ಬಡಾವಣೆ ನಿರ್ಮಾಣ ಶಿಲಾನ್ಯಾಸ ಕಾರ್ಯಕ್ರಮ ಅಧ್ಯಕ್ಷತೆವಹಿಸಿ ಮಾತನಾಡಿದರು.

ನಿವೇಶನ ರೈತರಿಗೆ ವಸತಿ ನಿವೇಶನ ನೀಡುವುದು ನಮ್ಮ ಸರ್ಕಾರದ ಧ್ಯೇಯವಾಗಿದೆ ಅದರ ಅಂಗವಾಗಿ ಅರ್ಹರಿಗೆ ನಿವೇಶನ ನೀಡಲು ಇಂದು ಶಿಲಾನ್ಯಾಸ ಮಾಡಲಾಗಿದೆ ಎಂದು ಹೇಳಿದರು.

ಸರ್ಕಾರಿ ಜಾಗ ಕೇವಲ ಒಬ್ಬರದಲ್ಲ ಅದು ಎಲ್ಲರ ಜಾಗ, ರೈತರು ತಮ್ಮ ಗದ್ದೆಗಳಲ್ಲಿ ರಸ್ತೆ 5-10 ಅಡಿ ಜಾಗ ಬಿಟ್ಟರೆ ಉತ್ತಮ ರಸ್ತೆ ಕಲ್ಪಿಸಬಹುದು. ರೈತರ ಉತ್ಪನ್ನಗಳನ್ನು ಮಾರುಕಟ್ಟೆಗೆ ಸರಾಗವಾಗಿ ಸಾಗಣೆ ಮಾಡಬಹುದು ಎಂದು ತಿಳಿಸಿದರು.

 120 ನಿವೇಶನಗಳನ್ನು ಸದರಿ ಜಾಗದಲ್ಲಿ ನೀಡಲಾಗುವುದು ಈಗಾಗಲೇ 80 ಹಕ್ಕು ಪತ್ರಗಳನ್ನು ಸಿದ್ಧವಿದೆ ಬಾಕಿ ಇರುವ ನಿವೇಶನಗಳಿಗೆ ಅಗತ್ಯ ದಾಖಲೆಗಳನ್ನು ನೀಡಿ ನಂತರ ನಾನೆ ನಿಮ್ಮ ಮನೆ ಬಾಗಿಲಿಗೆ ಬಂದು ಹಕ್ಕು ಪತ್ರಗಳನ್ನು ವಿತರಿಸುತ್ತೇನೆ ಎಂದು ಹೇಳಿದರು.

ಕಳೆದ ಬಾರಿಯ ಬೂದನೂರು ಉತ್ಸವದಲ್ಲಿ ಅನೇಕರು ಹೋರಾಟ ಮಾಡಿ ಬೂದನೂರಿನಲ್ಲಿ  120 ಹಕ್ಕು ಪತ್ರಗಳನ್ನು ವಿತರಿಸಿದ್ದರು, ಈ ಬಾರಿ ಬೂದನೂರು ಉತ್ಸವದಲ್ಲಿ 50 ಹಕ್ಕು ಪತ್ರಗಳನ್ನು ನೀಡಲು ಸಿದ್ಧತೆ ಮಾಡಲಾಗಿದೆ. ಮಂಡ್ಯ ತಾಲೂಕಿನ ಅರ್ಹ ನಿವೇಶನ ರಹಿತರಿಗೆ ನಿವೇಶನ ನೀಡಲು ಕಳೆದ ಎರಡೂವರೆ ವರ್ಷದಲ್ಲಿ ಡಿ.ಸಿ, ತಹಶೀಲ್ದಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ 10 ಕ್ಕೂ ಹೆಚ್ಚು ಸಭೆಗಳನ್ನು ನಡೆಸಲಾಗಿದೆ ಎಂದು ಹೇಳಿದರು.

ಹುಲಿವಾನದಲ್ಲಿ 8 ಎಕ್ಕರೆ ಜಾಗವನ್ನು ಗುರುತಿಸಿ 550 ಜನರಿಗೆ ನಿವೇಶನ ನೀಡಲು ಸಿದ್ಧತೆ ನಡೆಸಲಾಗಿದೆ ಒಂದು ತಿಂಗಳಲ್ಲಿ ಸದರಿ ಕಾರ್ಯಕ್ರಮವನ್ನು ಕೈಗೊಳ್ಳಲಾಗುವುದು. ಬಸರಾಳಲ್ಲಿ 2 ಎಕ್ಕರೆ ಜಾಗವನ್ನು ಗುರುತಿಸಲಾಗಿದೆ ಬಡವರಿಗೆ 3 ತಿಂಗಳೊಳಗಾಗಿ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.

ಹಲ್ಲೆಗೆರೆಯಲ್ಲಿ ನಿವೇಶನ ಇಲ್ಲದವರಿಗೆ ತಂದಾಯಕನದೊಡ್ಡಿಯಲ್ಲಿ ಎರಡು ಎಕರೆ ಗ್ರಾಮ ಠಾಣಾ ಜಾಗವನ್ನು ಗುರುತಿಸಲಾಗಿದೆ ಜೊತೆಗೆ ಎಂಟು ಎಕರೆ ಸರ್ಕಾರಿ ಬಿಳು ಇದ್ದು ಒಟ್ಟು ಹತ್ತು ಎಕ್ಕರೆ ಜಾಗದಲ್ಲಿ ಸುಸಜ್ಜಿತ ಬಡವಾಣೆ ನಿರ್ಮಿಸಿ 500 ಕ್ಕೂ ಹೆಚ್ಚು ಅರ್ಹರಿಗೆ ನಿವೇಶನ ಕಲ್ಪಿಸಲಾಗುವುದು. ಅರ್ಹ ನಿವೇಶನ ರಹಿತರು ಪಿ.ಡಿ.ಓ ಗಳ ಬಳಿ ಅರ್ಜಿ ಸಲ್ಲಿಸಿ ಯಾವುದೇ ಒತ್ತಡಕ್ಕೂ ಮಣಿಯದೆ ಅರ್ಹರಿಗೆ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.

ಚಂದಗಾಲು ಗ್ರಾಮದಲ್ಲೂ ಏಳು ಎಕರೆ ಜಾಗ ಮತ್ತು ಗಣಿಗದಲ್ಲೂ ನಾಲ್ಕು ಎಕರೆ ಜಾಗವನ್ನು ಗುರುತಿಸಲಾಗಿದೆ ನಿವೇಶನ ಹಂಚಿಕೆ ಮಾಡಲಾಗುವುದು. ಕೆರಗೋಡಿನಲ್ಲಿ 30 ನಿವೇಶನ ಗುರುತಿಸಲಾಗಿದ್ದು ಮುಂದಿನ ವಾರದೊಳಗೆ ಹಕ್ಕು ಪತ್ರ ನೀಡಲಾಗುವುದು. ಮದ್ದುನಗಟ್ಟದಲ್ಲಿ 80 ಎಕರೆ ಸರ್ಕಾರಿ ಪ್ರದೇಶವನ್ನು ಗುರುತಿಸಲಾಗಿದ್ದು ಸದರಿ ಜಾಗವನ್ನು ಕೈಗಾರಿಕೆಗೆ ಮೀಸಲಿಡಲಾಗುವುದು. ಮಹಿಳೆಯರಿಗೆ ಯುವಕರಿಗೆ ಬಡವರಿಗೆ ಅನುಕೂಲವಾಗುವ ಕಾರ್ಖಾನೆಯನ್ನು ರಾಜ್ಯ ಸರ್ಕಾರದಿಂದ ತರಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಿ.ತ್ಯಾಗರಾಜು, ಚಿಕ್ಕಬಳ್ಳಿ ಕೃಷ್ಣ, ತಹಸೀಲ್ದಾರ್ ವಿಶ್ವನಾಥ್, ತಾಲ್ಲೂಕು ಪಂಚಾಯಿತಿ ಇಒ‌ ಲೋಕೇಶ್‌ಮೂರ್ತಿ, ಸಿ.ಎಂ.ದ್ಯಾವಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಮ್ಮ, ಉಪಾಧ್ಯಕ್ಷೆ ಭಾಗ್ಯಮ್ಮ, ಸದಸ್ಯರಾದ ಆರ್.ಗೀತಾ, ಕರೀಗೌಡ, ವಿನೋದ್, ಅಶೋಕ್, ವೈಶಾಲಿ, ಎಚ್.ಎಂ.ರಮೇಶ್, ಟಿ.ಲೋಕೇಶ್, ತಾಯಮ್ಮ, ರಾಮಲಿಂಗೇಗೌಡ, ಮಾಲಾಶ್ರೀ , ನಿಂಗರಾಜು, ದಯಾನಂದ್, ಸುಧಾಮಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ಡಬ್ಲ್ಯುಪಿಎಲ್: ಎರಡನೇ ಬಾರಿ ಆರ್‌ಸಿಬಿ ಚಾಂಪಿಯನ್

ಆರಣಿ ಗ್ರಾಮ ಪಂಚಾಯಿತಿಗೆ ಭೇಟಿ ಕೊಟ್ಟ ಜಿ.ಪಂ.ಸಿ.ಇ.ಓ

ಮೇ 18ರೊಳಗೆ ಜೈಲುಗಳ ಸ್ಥಿತಿಯ ಬಗ್ಗೆ ಮಾಹಿತಿಗೆ ಸುಪ್ರೀಂ ಕೋರ್ಟ್ ಆದೇಶ

Leave a Comment