NEWS

ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆ

ಪಾಲನೆ ನ್ಯೂಸ್

ನವದೆಹಲಿ: ಸ್ಥಳೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದ ಹಿನ್ನೆಲೆಯಲ್ಲಿ ಬೆಳ್ಳಿ ಬೆಲೆ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಕೆಜಿಗೆ 5,700 ರೂ. ಇಳಿಕೆಯಾಗಿದ್ದರೆ, ಚಿನ್ನದ ದರ ಪ್ರತಿ 10 ಗ್ರಾಂಗೆ 1,600 ರೂ. ತಗ್ಗಿದೆ. ಅಖಿಲ ಭಾರತ ಸರಾಫ ಸಂಘದ ಮಾಹಿತಿ ಪ್ರಕಾರ, ಬೆಳ್ಳಿ ಬೆಲೆ ಶೇ. 2.2ರಷ್ಟು ಕುಸಿತ ಕಂಡು ಪ್ರತಿ ಕೆಜಿಗೆ 2,53,000 ರೂ.ಗೆ ತಲುಪಿದೆ. ಶೇ. 99.9 ಶುದ್ಧತೆಯ ಚಿನ್ನದ ಬೆಲೆ ಶೇ. 1.01ರಷ್ಟು ಇಳಿಕೆಯಾಗಿದ್ದು, ಪ್ರತಿ 10 ಗ್ರಾಂಗೆ 1,56,200 ರೂ. ಆಗಿದೆ. ಬುಧವಾರ ಚಿನ್ನದ ಬೆಲೆ 1.58 ಲಕ್ಷ ರೂ. ಹಾಗೂ ಬೆಳ್ಳಿ ಬೆಲೆ 2.58 ಲಕ್ಷ ರೂ. ತಲುಪಿ ಸಾರ್ವಕಾಲಿಕ ದಾಖಲೆ ಬರೆದಿದ್ದವು. ಆದರೆ ವಾರಾಂತ್ಯಕ್ಕೆ ಮಾರುಕಟ್ಟೆಯಲ್ಲಿ ಕಂಡುಬಂದ ನೀರಸ ಪ್ರತಿಕ್ರಿಯೆಯಿಂದಾಗಿ ಬೆಲೆ ಇಳಿದಿದೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn


Related posts

ಮಾ.23 ರಿಂದ ಏ. 5 ರ ವರೆಗೆ ವೈರಮುಡಿ ಬ್ರಹ್ಮೋತ್ಸವ ಆಚರಣೆ

ಶಿಕ್ಷಕರ ಸೇವೆ ಸಮಾಜಕ್ಕೆ‌ ಅಮೂಲ್ಯವಾದದ್ದು

ಮಹಿಳೆಯರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ವಿಶೇಷ ರಂಗೋಲಿ ಸ್ಪರ್ಧಾ

Leave a Comment