NEWS

ಅತ್ಯಾಚಾರ ಎಸಗಲು ಬೆಂಬಲಿಸಿದ್ದ ನಾಲ್ಕು ಜನರಿಗೆ 20 ವರ್ಷ ಜೈಲು

ಪಾಲನೆ ನ್ಯೂಸ್

ಕೊಪ್ಪಳ: ಬಾಲಕಿ ಮೇಲೆ ಅತ್ಯಾಚಾರ ಎಸಗಲು ಬೆಂಬಲಿಸಿದ್ದ ನಾಲ್ಕು ಜನರಿಗೆ ಪೋಕ್ಸೋ ನ್ಯಾಯಾಲಯ ಬರೋಬ್ಬರಿ 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಮಾ.28ರಂದು ತೀರ್ಪು ನೀಡಿದೆ.

ವಿಚಾರಣೆ ಹಂತದಲ್ಲೇ ಪ್ರಮುಖ ಆರೋಪಿ ಸರವನ್ ಸಿಂಗ್ ಸಾವಿಗೀಡಾಗಿದ್ದು, ಆತನಿಗೆ ಸಹಕರಿಸಿದ್ದ ಜೋಬನ್ ಸಿಂಗ್, ಜಸ್ವಂತ್ ಸಿಂಗ್, ಸರಬ್ಬಿತ್ ಸಿಂಗ್ ಹಾಗೂ ಜಗತಾ‌ರ್ ಸಿಂಗ್‌ಗೆ ನ್ಯಾಯಾಧೀಶ ಕುಮಾರ್ ಡಿ.ಕೆ. 20 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ತಲಾ 20 ಸಾವಿರ ರೂ. ದಂಡ ವಿಧಿಸಿದ್ದಾರೆ.

ಏನಾಗಿತ್ತು?: 2020ರ ಅ.14ರಂದು ಬಾಲಕಿಯೊಬ್ಬಳನ್ನು ಆಕೆ ಪಕ್ಕದ ಮನೆಯಲ್ಲಿದ್ದ ಪಂಜಾಬ್‌ ಮೂಲದ ಸರವನ್ ಸಿಂಗ್ ಎಂಬಾತ ಪ್ರೀತಿಯ ನಾಟಕವಾಡಿ ಅಪಹರಿಸಿದ್ದ. ಇದಕ್ಕೆ ಜೋಬನ್ ಸಿಂಗ್ ಸಾಥ್ ನೀಡಿದ್ದ. ಜಸ್ವಂತ್ ಸಿಂಗ್, ಸರಬ್ಬಿತ್ ಸಿಂಗ್ ಹಾಗೂ ಜಗತಾರ್ ಸಿಂಗ್ ಅಪ್ರಾಪ್ತಿಯ ವಯಸ್ಸನ್ನು 20 ಎಂದು ಸುಳ್ಳು ದಾಖಲೆ ಸೃಷ್ಟಿಸಿ, ಕೋರ್ಟ್ ಅಫಿಡವಿಟ್ ಮಾಡಿಸಿದ್ದರು. ಬಳಿಕ ಅಮೃತಸರದ ಡಾಬಾವೊಂದರಲ್ಲಿ ಬಾಲಕಿಯ ಮೇಲೆ ಸರವನ್ ಸಿಂಗ್ ನಿರಂತರ ಅತ್ಯಾಚಾರ ಎಸಗಿದ್ದ. ಈ ಕೃತ್ಯಕ್ಕೆ ಸಹಚರರು ನೀಡಿದ್ದರು. ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಜ.9 ರಂದು ರಾಷ್ಟ್ರೀಯ ಗ್ರಾಹಕರ ದಿನಾಚರಣೆ-2025 ಆಹಾರ ಸುರಕ್ಷತೆ ಮತ್ತು ಕಾನೂನು ಅರಿವು ಕಾರ್ಯಕ್ರಮ:

ಗ್ರಾಮ ಒನ್ ಕೇಂದ್ರಗಳ ಸ್ಥಾಪನೆಗೆ ಅರ್ಜಿ ಅಹ್ವಾನ

ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದ ಜಿ.ಪಂ. ಸಿಇಓ

Leave a Comment