ಪಾಲನೆ ನ್ಯೂಸ್
ಮೈಸೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಮಾ.18ರಿಂದ ಏ.2ರವರೆಗೆ ನಡೆಯಲಿರುವ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸುವ ಉದ್ದೇಶದಿಂದ ನಗರದ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುವುದು. ಅಲ್ಲದೇ, ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿ ಪ್ರದೇಶದ ಸುತ್ತಲೂ ನಿಷೇಧಾಜ್ಞೆ ಜಾರಿ ಮಾಡಲಾಗುವುದು ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ರಾದ ಸೀಮಾ ಲಾಟ್ಕರ್ ತಿಳಿಸಿದ್ದಾರೆ.

ಪರೀಕ್ಷಾ ಕೇಂದ್ರಗಳು: ನಿರ್ಮಲ ಪ್ರೌಢಶಾಲೆ, ಮಾತೃಮಂಡಳಿ ಪ್ರೌಢಶಾಲೆ, ಕೆ.ಪಿ.ಕಾನ್ವೆಂಟ್ ಪ್ರೌಢ ಶಾಲೆ, ಗೋಕುಲಂ, ವಿಜಯ ನಗರದ ಸದ್ವಿದ್ಯಾ ಪ್ರೌಢಶಾಲೆ, ಜಯಲಕ್ಷ್ಮೀಪುರಂನ ವಿವೇಕಾನಂದ ಪ್ರೌಢಶಾಲೆ, ತಿಲಕ್ ನಗರದ ಫಾರೂಕಿಯ ಬಾಲಕರ ಪ್ರೌಢಶಾಲೆ, ಕೈಲಾಸಪುರಂನ ಸರ್ಕಾರಿ ಪ್ರೌಢಶಾಲೆ, ಸೇಂಟ್ ಮಥಾಯಿಸ್ ಪ್ರೌಢಶಾಲೆ, ಲಯನ್ಸ್ ಪ್ರೌಢಶಾಲೆ, ಸೇಂಟ್ ಆನ್ಸ್ ಪ್ರೌಢಶಾಲೆ, ಸೇಂಟ್ ಫಿಲೋಮಿನಾ ಪ್ರೌಢಶಾಲೆ, ಗುಡ್ ಶೆಫರ್ಡ್ ಪ್ರೌಢಶಾಲೆ, ಸರ್ಕಾರಿ ವಿಭಜಿತ ಮಹಾರಾಜ ಪದವಿಪೂರ್ವ ಕಾಲೇಜು, ಸರ್ಕಾರಿ ಬಾಲಿಕಾ ಪದವಿಪೂರ್ವ ಕಾಲೇಜು, ವಾಣಿವಿಲಾಸ ಪ್ರೌಢಶಾಲೆ, ಮೆಜೆಸ್ಟಿಕ್ ಪ್ರೌಢಶಾಲೆ, ಶ್ರೀಕಂಠೇಶ್ವರ ಪ್ರೌಢಶಾಲೆ, ಸೇಂಟ್ ಮೇರಿಸ್ ಪ್ರೌಢಶಾಲೆ, ಸೇಂಟ್ ಅಂಥೋಣಿ ಪ್ರೌಢಶಾಲೆ, ಮರಿಮಲ್ಲಪ್ಪ ಪ್ರೌಢಶಾಲೆ, ಸದ್ವಿದ್ಯಾ ಪ್ರೌಢಶಾಲೆ, ಮಹಾರಾಣಿ ಸರ್ಕಾರಿ ಪಿಯು ಕಾಲೇಜು, ವಿಜಯ ವಿಠಲ ಪ್ರೌಢಶಾಲೆ, ಜ್ಞಾನಗಂಗಾ ವಿದ್ಯಾಪೀಠ ಪ್ರೌಢಶಾಲೆ, ಮಹಾರಾಜ ಸರ್ಕಾರಿ ಪ್ರೌಢಶಾಲೆ, ಕಾವೇರಿ ಸಂಯುಕ್ತ ಪದವಿಪೂರ್ವ ಕಾಲೇಜು, ಜೆಎಸ್‌ಎಸ್ ಪ್ರೌಢಶಾಲೆ, ಡಿ. ಬನುಮಯ್ಯ ಬಾಲಕರ ಪ್ರೌಢಶಾಲೆ, ಬಂಟ್ವಾಳ ಮಾಧವ ಶೆಣೈ ಪ್ರೌಢಶಾಲೆ, ಸೇಂಟ್ ಥಾಮಸ್ ಪ್ರೌಢಶಾಲೆ, ಸರ್ಕಾರಿ ಆದರ್ಶ ವಿದ್ಯಾಲಯ, ಸೇಂಟ್ ಮೇರಿಸ್ ಬಾಲಕಿಯರ ಪ್ರೌಢಶಾಲೆ, ಕರ್ನಾಟಕ ಪಬ್ಲಿಕ್ ಶಾಲೆ, ರಾಮಕೃಷ್ಣ ವಿದ್ಯಾಕೇಂದ್ರ, ಜೆಎಸ್‌ಎಸ್ ಬಾಲಿಕಾ ಪ್ರೌಢಶಾಲೆ, ಶ್ರೀ ರಾಘವೇಂದ್ರ ವಿದ್ಯಾಪೀಠ, ವಿದ್ಯಾವಿಕಾಸ್ ಪ್ರೌಢಶಾಲೆ, ದೀಪಾ ಪ್ರೌಢಶಾಲೆ ಸೇರಿದಂತೆ ವಿವಿಧ ಶಾಲೆಗಳ ಪರೀಕ್ಷಾ ಕೇಂದ್ರಗಳ ಪ್ರದೇಶಗಳಲ್ಲಿ ಪರೀಕ್ಷಾರ್ಥಿಗಳು ಹಾಗೂ ಪರೀಕ್ಷಾ ಸಿಬ್ಬಂದಿಯನ್ನು ಹೊರತುಪಡಿಸಿ ಇತರೆ ಅನಧಿಕೃತ ವ್ಯಕ್ತಿಗಳು ಸಂಚರಿಸಬಾರದು ಮತ್ತು ಯಾರೂ ಆಕ್ಷೇಪಾರ್ಹ ವಸ್ತುಗಳನ್ನು ಒಯ್ಯಬಾರದು ಹಾಗೂ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿರುವ ಜೆರಾಕ್ಸ್ /ಬ್ರೌಸಿಂಗ್ ಸೆಂಟರ್‌ಗಳನ್ನು ಪರೀಕ್ಷಾ ಅವಧಿಯಲ್ಲಿ ಮುಚ್ಚುಬೇಕು ಎಂದು ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
