ಪಾಲನೆ ನ್ಯೂಸ್
ಬೆಂಗಳೂರು: ಅರ್ಹತೆ ಇಲ್ಲದಿದ್ದರೂ ಸರ್ಕಾರದ ಫಲಾನುಭವಿಗಳ ಪಟ್ಟಿಗೆ ನುಸುಳಿ ಅಕ್ರಮವಾಗಿ ಸವಲತ್ತು ಪಡೆಯುತ್ತಿದ್ದ ರಾಜ್ಯದ ಸುಮಾರು 20 ಲಕ್ಷದಷ್ಟು ಅನರ್ಹ ಫಲಾನುಭವಿಗಳನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ರದ್ದುಪಡಿಸಿ ‘ಅನ್ನಭಾಗ್ಯ’ ಯೋಜನೆಯಿಂದ ಕೈಬಿಡಲಾಗಿದೆ.
ಬರುವ ದಿನಗಳಲ್ಲಿ ಇದರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಅರ್ಹರನ್ನು ಹೊರತು ಪಡಿಸಿ ಯಾವುದೇ ಕಾರಣಕ್ಕೂ ಅನರ್ಹರಿಗೆ ಸರ್ಕಾರದ ಸವಲತ್ತು ಸಿಗದಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಸರ್ಕಾರದ ಸವಲತ್ತುಗಳು ನಿಜವಾದ ಫಲಾನುಭವಿಗಳಿಗೆ ತಲುಪಬೇಕು. ಆಗಲೇ ಯೋಜನೆಯ ಸದುದ್ದೇಶ ಈಡೇರುತ್ತದೆ.
ವೋಟ್ ಬ್ಯಾಂಕ್‌ಗಾಗಿ ಅನರ್ಹರನ್ನು ಸೇರ್ಪಡೆ ಮಾಡಬೇಡಿ ಎಂದು ಸೂಚನೆ ನೀಡಿತ್ತು. ರಾಜ್ಯದಲ್ಲಿ ನಕಲಿ ಫಲಾನುಭವಿಗಳನ್ನು ತೆಗೆದುಹಾಕಲು ಕೇಂದ್ರ ಸರ್ಕಾರ 13 ಲಕ್ಷ ಕಾರ್ಡ್‌ಗಳ ಪರಿಷ್ಕರಣೆ ಪಟ್ಟಿ ಮಾಡಿತ್ತು. ಅದರಲ್ಲಿ ರಾಜ್ಯ ಸರ್ಕಾರ 7 ಲಕ್ಷ ಕಾರ್ಡ್‌ಗಳನ್ನು ರದ್ದು ಮಾಡಲು ಪ್ರತ್ಯೇಕ ಪಟ್ಟಿ ಮಾಡಿತ್ತು. ಇದೀಗ ಆಹಾರ ಇಲಾಖೆ ಇಲ್ಲಿಯವರೆಗೆ 20 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಿದೆ.

ರಾಜ್ಯದ ಮಾನದಂಡ ಅನ್ವಯ ರದ್ದು 2,75,667 ಮಂದಿ ಅಕ್ಕಿ ಪಡೆಯದವರು 10,09,475 ಮಂದಿ ವಾರ್ಷಿಕ ವರಮಾನ 1.20 បថ្ម ១.ថ ៨ ಇರುವವರು 98,473 ಮಂದಿ ಆದಾಯ ತೆರಿಗೆದಾರರು 4,036 ລ້ ಸರ್ಕಾರಿ ನೌಕರರು 13,87,651 ಮಂದಿ ಒಟ್ಟು ಜೊತೆಗೆ ಬಿಪಿಎಲ್ ನಿಂದ ಎಪಿಎಲ್‌ಗೆ 14.5 ಲಕ್ಷ ಕಾರ್ಡ್‌ಗಳನ್ನು ವರ್ಗಾವಣೆ ಮಾಡಿದೆ. ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ ರಾಜ್ಯದಲ್ಲಿ ಸುಮಾರು 7.76 ಲಕ್ಷ ಪಡಿತರ ಚೀಟಿಗಳನ್ನು ಅನರ್ಹ ಎಂದು ಗುರುತಿಸಲಾಗಿದೆ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

