NEWS

ಚಾಮನಹಳ್ಳಿಯಲ್ಲಿ ಒಂದು ತಿಂಗಳ ‘ಚರ್ಮವಾದ್ಯ ತರಬೇತಿ’ ಕಾರ್ಯಾಗಾರಕ್ಕೆ ಚಾಲನೆ

ಪಾಲನೆ ನ್ಯೂಸ್

ಮಂಡ್ಯ: ‘ಲಿಡ್ಕರ್’ ನೆರವಿನೊಂದಿಗೆ ಡಾ.ಬಾಬು ಜಗಜೀವನ್ ರಾಂ ಸಂಘಗಳ ಒಕ್ಕೂಟ, ಚಾಮನಹಳ್ಳಿ ಹಾಗೂ ಕರ್ನಾಟಕ ಜಾನಪದ ಪರಿಷತ್ತು, ಮದ್ದೂರು ತಾಲ್ಲೂಕು ಘಟಕದ ಸಹಯೋಗದಲ್ಲಿ ಒಂದು ತಿಂಗಳ ‘ಚರ್ಮವಾದ್ಯ ತರಬೇತಿ’ ಕಾರ್ಯಾಗಾರವನ್ನು  ಚಾಮನಹಳ್ಳಿಯಲ್ಲಿ ಪ್ರಾರಂಭಿಸಲಾಗಿದೆ.

ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರು, ಜಿಲ್ಲಾ ಕ.ಸಾ.ಪ. ಮಾಜಿ ಅಧ್ಯಕ್ಷರಾದ ಡಿ.ಪಿ.ಸ್ವಾಮಿ, ಕ.ಸಾ.ಪ.ತಾಲ್ಲೂಕು ಅಧ್ಯಕ್ಷರಾದ ವಳಗೆರೆಹಳ್ಳಿ ಉಮಾಶಂಕರ್, ಲಿಡ್ಕರ್ ವ್ಯವಸ್ಥಾಪಕ ಚೇತನ್, ಮಾದಾರ ಸಂಘದ ಜಿಲ್ಲಾಧ್ಯಕ್ಷ ಹಾಗೂ ವಕೀಲರಾದ ಎನ್.ಆರ್. ಚಂದ್ರಶೇಖರ್ ನಾಗಮಂಗಲ, ತಾ.ಪಂ.ಮಾಜಿ ಸದಸ್ಯ ಶ್ರೀಶಾಂತಾ ಕುಚೇಲ, ತರಬೇತಿದಾರ ಮೈಸೂರಿನ ನಗಾರಿ ಮಂಜು ಇದ್ದರು.

ಜಿಲ್ಲೆಗೆ  ‘ಚರ್ಮವಾದ್ಯ ತರಬೇತಿ’ ಅವಕಾಶ ಕಲ್ಪಿಸಿದ ಲಿಡ್ಕರ್ ನ ಎಂ.ಡಿ. ಡಾ.ಕೆ.ಎಂ. ವಸುಂದರಾ ಕದಲೂರು ಅವರಿಗೆ ಕಾರ್ಯಕ್ರಮದಲ್ಲಿ ಧನ್ಯವಾದಗಳನ್ನು ಸಲ್ಲಿಸಲಾಯಿತು.

Related posts

ಕರ್ನಾಟಕ ಸಂಘ: ಪ್ರಭುಲಿಂಗಲೀಲೆ ಕಾವ್ಯಾನುಸಂಧಾನ ಫೆ. 28ಕ್ಕೆ

ಮೇಲುಕೋಟೆಗೆ ಹರಿದು ಬಂದ ಭಕ್ತ ಸಾಗರ

ಹೆಚ್ಚಿನ ಸುಂಕ ಹಾಕಿರುವುದರಿಂದ ಪ್ರಧಾನಿ ಮೋದಿಗೆ ನನ್ನ ಮೇಲೆ ಅತೃಪ್ತಿಯಿದೆ: ಡೊನಾಲ್ಡ್‌ ಟ್ರಂಪ್‌

Leave a Comment